Headlines

ದೇವತೆಗಳ ಫೋಟೋ ಬಳಸಿ ಡ್ರಗ್ಸ್ ದಂಧೆ, ಕೇರಳ ಖದೀಮರು ಬಂಧನ, ₹10 ಕೋಟಿ ಮೌಲ್ಯದ ಡ್ರಗ್ಸ್ ಸೀಜ್! | Rs 10 Crore Worth Of Drugs Seized In Posh Bengaluru Apartment Raid

ದೇವತೆಗಳ ಫೋಟೋ ಬಳಸಿ ಡ್ರಗ್ಸ್ ದಂಧೆ, ಕೇರಳ ಖದೀಮರು ಬಂಧನ, ₹10 ಕೋಟಿ ಮೌಲ್ಯದ ಡ್ರಗ್ಸ್ ಸೀಜ್! | Rs 10 Crore Worth Of Drugs Seized In Posh Bengaluru Apartment Raid



ದೇವತೆಗಳ ಫೋಟೋ ಬಳಸಿ ಡ್ರಗ್ಸ್ ದಂಧೆ, ಕೇರಳ ಖದೀಮರು ಬಂಧನ, ₹10 ಕೋಟಿ ಮೌಲ್ಯದ ಡ್ರಗ್ಸ್ ಸೀಜ್! | Rs 10 Crore Worth Of Drugs Seized In Posh Bengaluru Apartment Raid

ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, 10 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಅಂತರಾಷ್ಟ್ರೀಯ ಡ್ರಗ್ಸ್ ಜಾಲದಲ್ಲಿ ಕೇರಳ ಮೂಲದ ಯುವಕ-ಯುವತಿಯನ್ನು ಬಂಧಿಸಲಾಗಿದೆ.

ಬೆಂಗಳೂರು (ಮಾ.3): ಐಷಾರಾಮಿ ಅಪಾರ್ಟ್‌ಮೆಂಟ್, ಕೈತುಂಬಾ ಹಣ, ನೋಡೋಕೆ ಉತ್ತಮ ಶಿಕ್ಷಣ ಪಡೆದಿರುವ ಯುವಕ-ಯುವತಿಯರಂತೆ ಕಾಣ್ತಾರೆ ಆದ್ರೆ ಇವರ ಅಸಲಿ ಕೆಲಸ ಕಂಡು ಸಿಸಿಬಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್‌ಮೆಂಟ್ ಒಂದರ ಮೇಲೆ ದಾಳಿ ಮಾಡಿರುವ ಸಿಸಿಬಿ ನಾರ್ಕೊಟಿಕ್ಸ್ ವಿಭಾಗದ ಪೊಲೀಸರು ಬರೋಬ್ಬರಿ 10 ಕೋಟಿ ರೂಪಾಯಿ ಮೌಲ್ಯದ ಬೃಹತ್ ಪ್ರಮಾಣದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರತಿಷ್ಠಿತ ಫ್ಲಾಟ್‌ನಲ್ಲೇ ಡ್ರಗ್ಸ್ ಅಡ್ಡೆ

ನಗರದ ಬಾಗಲೂರಿನಲ್ಲಿರುವ ‘ಪ್ರೆಸ್ಟಿಜ್ ಫೈನ್ ಬೇರಿ ಪಾರ್ಕ್’ ಅಪಾರ್ಟ್‌ಮೆಂಟ್‌ನ ಪ್ಲಾಟ್ ಒಂದರಲ್ಲಿ ಈ ದಂಧೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಕೇರಳ ಮೂಲದ ಅಶ್ವಿನ್ (27) ಮತ್ತು ಮೊಬಿನಾ (25) ಎಂಬುವವರನ್ನು ಬಂಧಿಸಿದ್ದಾರೆ. ಡ್ರಗ್ ಪೆಡ್ಲಿಂಗ್‌ನ್ನೇ ತಮ್ಮ ಕಸುಬು ಮಾಡಿಕೊಂಡಿದ್ದ ಈ ಖತರ್ನಾಕ್ ಖದೀಮರು ಯಾರಿಗೂ ಅನುಮಾನ ಬರದಂತೆ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದು ಅಕ್ರಮ ವ್ಯವಹಾರ ನಡೆಸುತ್ತಿದ್ದರು.

ಥೈಲ್ಯಾಂಡ್‌ನಿಂದ ಫ್ಲೈಟ್ ಮೂಲಕ ಬರುತ್ತಿತ್ತು ಡ್ರಗ್ಸ್!

ತನಿಖೆಯ ವೇಳೆ ಈ ಅಂತರಾಷ್ಟ್ರೀಯ ಡ್ರಗ್ ನೆಟ್ವರ್ಕ್ ಸಂಪರ್ಕ ಬಯಲಾಗಿದೆ. ಥೈಲ್ಯಾಂಡ್‌ನಲ್ಲಿ ನೆಲೆಸಿರುವ ವಿನ್ಸೆಂಟ್ ಎಂಬಾತ ಈ ಇಡೀ ದಂಧೆಯ ಮಾಸ್ಟರ್ ಮೈಂಡ್. ಈತ ವಿಮಾನದ ಮೂಲಕ ಆಗಾಗ ಸ್ವಲ್ಪ ಸ್ವಲ್ಪವೇ ಡ್ರಗ್ಸ್ ಅನ್ನು ಬೆಂಗಳೂರಿಗೆ ರವಾನಿಸುತ್ತಿದ್ದ. ವಿನ್ಸೆಂಟ್ ನೀಡುತ್ತಿದ್ದ ಸೂಚನೆಯಂತೆ ಅಶ್ವಿನ್ ಮತ್ತು ಮೊಬಿನಾ ಅವರು ಮಾದಕ ದ್ರವ್ಯಗಳನ್ನು ಸ್ವೀಕರಿಸಿ, ಆತ ಹೇಳಿದ ಜಾಗಗಳಲ್ಲಿ ಗ್ರಾಹಕರಿಗೆ ಡ್ರಗ್ಸ್ ತಲುಪಿಸುವ ಕೆಲಸ ಮಾಡುತ್ತಿದ್ದರು.

ದೇವತೆಗಳ ಚಿತ್ರವಿರೋ ಸ್ಟ್ರಿಪ್ಸ್!

ಈ ಕಾರ್ಯಾಚರಣೆಯಲ್ಲಿ ಪೊಲೀಸರು ಅಚ್ಚರಿ ಪಡುವ ವಿಷಯವೊಂದನ್ನು ಪತ್ತೆ ಹಚ್ಚಿದ್ದಾರೆ. ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಬರೋಬ್ಬರಿ 8,335 LSD ಸ್ಟ್ರಿಪ್ಸ್ ವಶಪಡಿಸಿಕೊಳ್ಳಲಾಗಿದೆ. ಒಂದು ಎಲ್‌ಎಸ್‌ಡಿ ಸ್ಟ್ರಿಪ್ ಬೆಲೆ ಬರೋಬ್ಬರಿ 6 ಸಾವಿರ ರೂಪಾಯಿಗಳಾಗಿದ್ದು, ಇವುಗಳನ್ನು ಯಾರಿಗೂ ಅನುಮಾನ ಬರದಂತೆ ದೇವರ ಚಿತ್ರಗಳು ಹಾಗೂ ವಿವಿಧ ಚಿತ್ರಕಲೆಗಳ ರೂಪದಲ್ಲಿ ಮುದ್ರಿಸಿ ಮಾರಾಟ ಮಾಡಲಾಗುತ್ತಿತ್ತು. ಇದರೊಂದಿಗೆ 534 ಗ್ರಾಂ ಚರಸ್ ಹಾಗೂ 5 ಕೆಜಿ ಹೈಡ್ರೋ ಗಾಂಜಾವನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಸಂಕಷ್ಟದಲ್ಲಿ ಫ್ಲಾಟ್ ಮಾಲೀಕ? ಸಿಸಿಬಿ ಹದ್ದಿನ ಕಣ್ಣು

ಪ್ರಸ್ತುತ ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಈ ದಂಧೆಯಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆ ಚುರುಕುಗೊಂಡಿದೆ. ಅಕ್ರಮ ವ್ಯವಹಾರಕ್ಕೆ ಬಳಸಲಾದ ಫ್ಲಾಟ್‌ನ ಮಾಲೀಕನಿಗೆ ಈ ಬಗ್ಗೆ ಮಾಹಿತಿ ಇತ್ತೇ ಅಥವಾ ಆತನ ಪಾತ್ರವೇನಾದರೂ ಇದೆಯೇ ಎಂಬ ಬಗ್ಗೆ ಸಿಸಿಬಿ ಅಧಿಕಾರಿಗಳು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *