Karna Serial: ವಿಲನ್​ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಹೀಗೆ ಮೋಸ ಮಾಡೋದಾ ಈ ಸೀರಿಯಲ್​ ನಟಿಯರು?

Karna Serial: ವಿಲನ್​ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಹೀಗೆ ಮೋಸ ಮಾಡೋದಾ ಈ ಸೀರಿಯಲ್​ ನಟಿಯರು?

Karna Serial: ವಿಲನ್​ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಹೀಗೆ ಮೋಸ ಮಾಡೋದಾ ಈ ಸೀರಿಯಲ್​ ನಟಿಯರು?
ಕರ್ಣ ಸೀರಿಯಲ್​ನಲ್ಲಿ ಜೈಲುಪಾಲಾಗಿರುವ ಕರ್ಣನ ವಿಚಾರಣೆ ನಡೆಯುತ್ತಿದೆ. ಡಾಕ್ಟರ್ ನಿಧಿ ಲಾಯರ್ ಆಗಿ ವಾದಿಸುತ್ತಿದ್ದು, ಕರ್ಣ ನೀಡಿದ ಮಾತ್ರೆಯಿಂದ ಸತ್ತಿದ್ದಾರೆ ಎನ್ನಲಾದ ಮಹಿಳೆಯರನ್ನು ಕೋರ್ಟ್‌ಗೆ ಹಾಜರುಪಡಿಸುವ ಮೂಲಕ ಕಥೆಗೆ ರೋಚಕ ತಿರುವು ನೀಡಲಾಗಿದೆ.
ಕರ್ಣ ಸೀರಿಯಲ್​ನಲ್ಲಿ ಅತ್ತ ಕರ್ಣ ಜೈಲುಪಾಲಾಗಿದ್ದು, ಆತನ ಕುರಿತ ವಿಚಾರಣೆ ನಡೆಯುತ್ತಿದೆ. ಅವನ ರಕ್ಷಣೆಗೆ ವಿವಿಧ ಸೀರಿಯಲ್​ ನಾಯಕಿಯರು ಇದಾಗಲೇ ಬಂದಾಗಿದೆ.

ಅತ್ತ ಡಾಕ್ಟರ್​ ಆಗಿರೋ ನಿಧಿ ಸೀರಿಯಲ್​ನಲ್ಲಿ ಏನು ಬೇಕಾದರೂ ಆಗಬಹುದು ಎನ್ನುವಂತೆ ಲಾಯರ್​ ಆಗಿ ಕರ್ಣನ ಪರವಾಗಿ ವಾದಿಸುತ್ತಿದ್ದಾಳೆ. ಅಷ್ಟಕ್ಕೂ ಕೋರ್ಟ್​ ದೃಶ್ಯಗಳನ್ನು ರೋಚಕವಾಗಿ ತೋರಿಸುವುದು ಸೀರಿಯಲ್​ಗಳಲ್ಲಿ ಮಾಮೂಲು. ಅದಕ್ಕೆ ದೊಡ್ಡ ಪ್ರಮಾಣದ ವೀಕ್ಷಕರೂ ಇದ್ದಾರೆ ಎನ್ನುವುದು ಇದಾಗಲೇ ಸಾಬೀತಾಗಿದೆ.

ಅದೇ ರೀತಿ ನಿಧಿ ಲಾಯರ್​ ಆಗಿದ್ದಾಳೆ. ಕಾನೂನು, ಮಣ್ಣು-ಮಸಿ ಯಾರಿಗೆ ಬೇಕು ಒಟ್ಟಿನಲ್ಲಿ ರೋಚಕತೆ ಇದ್ರೆ ಸಾಕು ಅಲ್ವಾ? ಅದೇ ರೀತಿ ಲಾಯರ್​ ನಿಧಿಯ ವಾದಕ್ಕೆ ವೀಕ್ಷಕರು ಭಲೆ ಭಲೆ ಎನ್ನುತ್ತಿದ್ದಾರೆ.

ಅದೇ ಇನ್ನೊಂದೆಡೆ, ಸೀರಿಯಲ್​ ನಟಿಯರು ಕೋರ್ಟ್​ವರೆಗೆ ತಲುಪಬಾರದು ಎನ್ನುವ ಕಾರಣಕ್ಕೆ ವಿಲನ್​ಗಳು ಅವರ ಗಾಡಿಯನ್ನು ಆ್ಯಕ್ಸಿಡೆಂಟ್​ ಮಾಡಿದ್ದಾರೆ. ಇದೀಗ, ಅದೇ ವಿಲನ್​ ಜೊತೆ ನಟಿಯರು ಸೆಲ್ಫಿ ತೆಗೆದುಕೊಂಡಿರೋ ಫೋಟೋ ಅನ್ನು ಶೇರ್​ ಮಾಡಲಾಗಿದೆ. ಇದು ಸೀರಿಯಲ್​ ಭಾಗವಲ್ಲ. ತಮಾಷೆಯಾಗಿ ನಟಿಯರು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ನೆಟ್ಟಿಗರು ಕರ್ಣನನ್ನು ಕಾಪಾಡೋದು ಬಿಟ್ಟು ಹೀಗೆ ಮಾಡ್ತೀರಾ ಎಂದು ಪ್ರಶ್ನಿಸ್ತಾ ಇದ್ದಾರೆ.

ಅದೇ ಮತ್ತೊಂದೆಡೆ, ಕರ್ಣ ಕೊಟ್ಟ ಮಾತ್ರೆಗಳನ್ನು ತಿಂದು ಸತ್ತಿದ್ದಾರೆ ಎನ್ನಲಾದ ಮಹಿಳೆಯರು ಸತ್ತಿಲ್ಲ ಎಂದು ನಿಧಿ ವಾದಾ ಮಾಡುತ್ತಿದ್ದರೂ ಅವರನ್ನು ಕೋರ್ಟ್​ಗೆ ಹಾಜರು ಪಡಿಸದ ಕಾರಣ, ಇನ್ನೇನು ನ್ಯಾಯಾಧೀಶರು ಕೇಸ್​ ಅನ್ನು ಮುಂದೂಡಲಾಗುವುದು ಎನ್ನುತ್ತಿದ್ದಂತೆಯೇ ರೋಚಕ ಟ್ವಿಸ್ಟ್​ ಸಿಕ್ಕಿದೆ.

ನಟಿಯರೆಲ್ಲಾ ಸೇರಿದಂತೆ ಸತ್ತುಹೋಗಿದ್ದಾರೆ ಎನ್ನಲಾದ ಸಾಕ್ಷಿದಾರ ಮಹಿಳೆಯರನ್ನು ಹಾಜರುಪಡಿಸಿದ್ದಾರೆ. ಅಲ್ಲಿಗೆ ನಿಧಿ ಹೇಗೆ ಲಾಯರ್​ ಆದಳು ಎನ್ನೋದನ್ನು ಕೇಳದೇ ಕರ್ಣ ಅಂತೂ ಬಿಡುಗಡೆಯಾಗ್ತಾನೆ ಅನ್ನೋ ಖುಷಿ ಪಟ್ಟುಕೊಳ್ಳುತ್ತಿದ್ದಾರೆ ವೀಕ್ಷಕರು.

Source link

Leave a Reply

Your email address will not be published. Required fields are marked *