Headlines

ಮೊಬೈಲ್ ಕದಿಯೋಕೆ ಫ್ಲೈಟ್​​ನಲ್ಲಿ ಬರ್ತಿದ್ದ ಖದೀಮರು ಖಾಕಿ ಬಲಗೆ ಬಿದ್ದಿದ್ದೇ ರೋಚಕ!

ಮೊಬೈಲ್ ಕದಿಯೋಕೆ ಫ್ಲೈಟ್​​ನಲ್ಲಿ ಬರ್ತಿದ್ದ ಖದೀಮರು ಖಾಕಿ ಬಲಗೆ ಬಿದ್ದಿದ್ದೇ ರೋಚಕ!


ಬೆಂಗಳೂರು, ಮಾರ್ಚ್ 03: ದ್ವಿಚಕ್ರ ವಾಹನ ಅಥವಾ ಕಾರಿನಲ್ಲಿ ಬಂದು ಮೊಬೈಲ್ ಅನ್ನು ಎಗರಿಸುವ ಖದೀಮರ ಬಗ್ಗೆ ನೀವು ಸಾಕಷ್ಟು ಕೇಳುತ್ತೀರಿ. ಇಲ್ಲೊಂದು ಮೊಬೈಲ್ ಕಳ್ಳತನ ಜಾಲವನ್ನು ಭೇದಿಸಿರುವ ಪೊಲೀಸರು ಅಕ್ಷರಶಃ ಶಾಕ್ ಆಗಿದ್ದಾರೆ. ಯಾಕೆಂದ್ರೆ ಈ ಕಳ್ಳರು ಮೊಬೈಲ್ ಕಳವು ಮಾಡಲೆಂದು ಬರುತ್ತಿದ್ದರು ವಿಮಾನದಲ್ಲಿ. ಈ ವಿಷಯ ನಂಬೋದು ತುಸು ಕಷ್ಟವಾದರೂ ಇದು ಅಕ್ಷರಶಃ ಸತ್ಯ. ಪೊಲೀಸರು ತನಿಖೆ ವೇಳೆ ಈ ಹೈಫೈ ಕಳ್ಳರ ಕರಾಮತ್ತು ಒಂದೇ ಬಯಲಾಗಿದ್ದರೆ, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಇನ್ನು ಈ ಖದೀಮರು ಸಣ್ಣ ಮೊಬೈಲ್‌ಗಳನ್ನು ಮುಟ್ಟುತ್ತಲೂ ಇರಲಿಲ್ಲ. ಐಫೋನ್ ಸೇರಿದಂತೆ ಇತರ ದುಬಾರಿ ಫೋನ್‌ಗಳು ಮಾತ್ರ ಇವರ ಟಾರ್ಗೆಟ್ ಆಗಿದ್ದವು. ದೊಡ್ಡ ದೊಡ್ಡ ಪಾರ್ಟಿ, ಕಾರ್ಯಕ್ರಮಗಳಿಗೆ ಎಂಟ್ರಿ ಕೊಡ್ತಿದ್ದ ಆರೋಪಿಗಳು, ಅಲ್ಲಿ ತಮ್ಮ ಕೈಚಳಕ ತೋರುತ್ತಿದ್ದರು. ಜೊತೆಗೆ ಐಷಾರಾಮಿ ಬಸ್ಸು ಕಳ್ಳತನ ನಡೆಸುತ್ತಿದ್ದರು. ಅವರು ಸಂಗೀತ ಇವರ ಕಾರ್ಯಕ್ರಮಗಳಲ್ಲಿ ಕೇವಲ ಒಂದೇ ಗಂಟೆಯಲ್ಲಿ 14 ಮೊಬೈಲ್‌ಗಳನ್ನು ಕದ್ದಿದ್ದರು. ದೇವನಹಳ್ಳಿ ಬಳಿಯ ಚನ್ನರಾಯಪಟ್ಟಣದಲ್ಲಿ ಆರೋಪಿಗಳು ಮೊಬೈಲ್ ಕಳವು ಮಾಡಿದ್ದು, ಅಲ್ಲಿಂದ ವೈಟ್ ಫೀಲ್ಡ್ ಕಡೆ ಬರೋವಾಗ ಬಸ್ ಮತ್ತೊಂದು ಐಫೋನ್ ಎಸ್ಕೇಪ್ ಮಾಡಿದ್ದಾರೆ. ಈ ಮೊಬೈಲ್ ಪತ್ತೆಗಾಗಿ ಆರೋಪಿಗಳು ಬೆನ್ನುಬಿದ್ದಿದ್ದಾರೆ.

ಇದನ್ನೂ ಓದಿ: ಸಿಸಿಬಿ ಪೊಲೀಸ್ ಮೆಗಾ ರೆಡ್; ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ 10 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್

ಲಾಡ್ಜ್ ಒಂದರಲ್ಲಿ ಕದ್ದ ನೋಡುವಾಗ ಎಂಟ್ರಿಕೊಟ್ಟಿದ್ದ ಮೊಬೈಲ್ ಆರೋಪಿಗಳನ್ನು ಬಂಧಿಸಿದ್ದಾರೆ. ದೆಹಲಿ ಮೂಲದ ಜಯಚಂದ್ರ ಮತ್ತು ತರುಣ್ ಬಂಧಿತರಾಗಿದ್ದು, ಇವರಿಂದ 10 ಲಕ್ಷ ಮೌಲ್ಯದ 14 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕದಿಯಲೆಂದೇ ಆರೋಪಿಗಳು ದೆಹಲಿಯ ನಗರಕ್ಕೆ ವಿಮಾನದಲ್ಲಿ ಬರುತ್ತಿರುವುದು ಗೊತ್ತಾಗಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ.

ಮನೆಗಳ್ಳರ ಬಂಧನ

ಕಾಶಿಯಾತ್ರೆಗೆ ಹೋದವರ ಮನೆ ದೋಚಿದ್ದ ಆರೋಪಿಗಳನ್ನು ಹೆಬ್ಬಗೋಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಪಾಂಡ್ಯರಾಜು, ಪೃಥ್ವಿ ಮತ್ತು ಮಂಜುನಾಥ್ ಬಂಧಿತರಾಗಿದ್ದರೆ, ಮನೆಗಳನ್ನು ಲಾಕ್ ಮಾಡಿ ಟಾರ್ಗೆಟ್ ಮಾಡಿ ಇವರು ಕಳ್ಳತನ ಮಾಡುತ್ತಿದ್ದರು. ಕಾಶಿಯಾತ್ರೆಗೆ ಹೋಗಿದ್ದವರ ಮನೆಗೀ ಇವರು ಕಣ್ಣ ಹಾಕಿದ್ದು, ಮನೆಯವರು ವಾಪಸ್ ಬಂದಾಗ ಕಳ್ಳತನ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಂಧಿತರ ಮೇಲಕ್ಕೆ ಪಾಂಡ್ಯರಾಜು ಮೇಲೆ ಅಮೃತಹಳ್ಳಿ, ವೈಟ್ ಫೀಲ್ಡ್, ಕಲಾಸಿಪಾಳ್ಯ, ಬೆಳ್ಳಂದೂರಿನಲ್ಲಿ ಮನೆಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಗಳಿಂದ 44 ಲಕ್ಷ ಮೌಲ್ಯದ 3 ಕೆಜಿ ಬೆಳ್ಳಿ, 220 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 1:58 pm, ಮಂಗಳವಾರ, 3 ಮಾರ್ಚ್ 26



Source link

Leave a Reply

Your email address will not be published. Required fields are marked *