ತಮಿಳಿನ ಯುವ ಹೀರೋಗೆ ಜೋಡಿಯಾಗಲಿರುವ ರುಕ್ಮಿಣಿ ವಸಂತ್

ತಮಿಳಿನ ಯುವ ಹೀರೋಗೆ ಜೋಡಿಯಾಗಲಿರುವ ರುಕ್ಮಿಣಿ ವಸಂತ್


ರುಕ್ಮಿಣಿ ವಸಂತ್ (ರುಕ್ಮಿಣಿ ವಸಂತ್), ತಮ್ಮ ಪ್ರತಿಭೆ ಮತ್ತು ಸೌಂದರ್ಯದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಹೆಜ್ಜೆ ಇರಿಸಿದ್ದಾರೆ. ‘ಸಪ್ತ ಸಾಗರದಾಚೆ ಎಲ್ಲೊ’ ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳು ರುಕ್ಮಿಣಿ ವಸಂತ್ ಅವರಿಗೆ ದೊಡ್ಡ ಮಟ್ಟಿನ ಗುರುತು, ಜನಪ್ರಿಯತೆ ತಂದುಕೊಟ್ಟಿರುವ ಜೊತೆಗೆ ಹಲವಾರು ಹೊಸ ಅವಕಾಶಗಳನ್ನು ಸಹ ತಂದುಕೊಟ್ಟಿದೆ. ಪರ ಭಾಷೆಯ ಕೆಲ ದೊಡ್ಡ ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ, ಇದೀಗ ತಮಿಳಿನ ಯುವ ನಾಯಕನ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ.

ರುಕ್ಮಿಣಿ ವಸಂತ್ ಅವರು, ತಮಿಳಿನ ಸ್ಟಾರ್ ಹಿರೋ ಚಿಯಾನ್ ವಿಕ್ರಂ ಅವರ ಪುತ್ರ ಧ್ರುವ ವಿಕ್ರಮ್ ಅವರೊಟ್ಟಿಗೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದು ಧ್ರುವ ವಿಕ್ರಂ ಅವರ ನಾಲ್ಕನೇ ಸಿನಿಮಾ ಆಗಿದ್ದು, ಸಿನಿಮಾವನ್ನು ಹೊಸ ನಿರ್ದೇಶಕ ದೀಪಕ್ ರೆಡ್ಡಿ ನಿರ್ದೇಶನ ಮಾಡಲಿದ್ದಾರೆ. ಕಿರು ಚಿತ್ರ ನಿರ್ದೇಶಿಸಿ ಗಮನ ಸೆಳೆದಿರುವ ದೀಪಕ್ ರೆಡ್ಡಿ ಈ ಸಿನಿಮಾ ಮೂಲಕ ಸಿನಿಮಾ ನಿರ್ದೇಶಕ ಎನಿಸಿಕೊಳ್ಳಲಿದ್ದಾರೆ.

ಧ್ರುವ್ ವಿಕ್ರಂ ಹಾಗೂ ರುಕ್ಮಿಣಿ ವಸಂತ್ ನಟಿಸಲಿರುವ ಈ ಸಿನಿಮಾ ಅಪ್ಪಟ ಪ್ರೇಮಕಥಾ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಮತ್ತೊಬ್ಬ ನಾಯಕಿಯೂ ಇರಲಿ. ಸಿನಿಮಾದ ಚಿತ್ರೀಕರಣ ಏಪ್ರಿಲ್ ತಿಂಗಳಿನಲ್ಲಿ ಪ್ರಾರಂಭವಾಗಲಿದೆ, ಸಿನಿಮಾಕ್ಕೆ ಖ್ಯಾತ ನಿರ್ಮಾಣ ಸಂಸ್ಥೆ ಆಗಿರುವ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡುತ್ತಿದೆ. ಧ್ರುವ್, ಪ್ರಸ್ತುತ ತಮಿಳು ಚಿತ್ರರಂಗದ ಬಲು ಜನಪ್ರಿಯ ಯುವ ನಟರಾಗಿದ್ದರೆ, ಇದು ಅವರ ನಾಲ್ಕನೇ ಸಿನಿಮಾ ಆಗಲಿದೆ.

ಇದನ್ನೂ ಓದಿ:ಟಾಲಿವುಡ್ ನ ಮತ್ತೋರ್ವ ಸ್ಟಾರ್ ಹೀರೋಗೆ ನಾಯಕಿ ಆದ ರುಕ್ಮಿಣಿ ವಸಂತ

ರುಕ್ಮಿಣಿ ವಸಂತ್ ಪ್ರಸ್ತುತ ಹಲವಾರು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ರುಕ್ಮಿಣಿ ವಸಂತ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ. ಜೂ ಎನ್ ಟಿಆರ್ ನಟನೆಯ ಹೊಸ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಪ್ರಶಾಂತ್ ನೀಲ್ ನಿರ್ದೇಶಕ. ಇತ್ತೀಚೆಗೆ ಅವರೇ ಹೇಳಿಕೊಂಡಿದ್ದಂತೆ ಅವರಿಗೆ ಹಿಂದಿಯಿಂದ ಒಂದು ಆಫರ್ ಬಂದಿದ್ದು, ಆ ಸಿನಿಮಾ ಕೂಡ ಶೀಘ್ರವೇ ಪ್ರಾರಂಭ ಆಗಲಿದೆ. ಇವುಗಳ ಜೊತೆಗೆ ತಮಿಳಿನಲ್ಲಿ ಹೊಸ ಸಿನಿಮಾ ಒಂದನ್ನು ರುಕ್ಮಿಣಿ ವಸಂತ್ ಒಪ್ಪಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *