ಟಿ20 ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ; ಪಾಕ್ ತಂಡದಲ್ಲಿ ಮೊದಲ ವಿಕೆಟ್ ಪತನ

ಟಿ20 ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ; ಪಾಕ್ ತಂಡದಲ್ಲಿ ಮೊದಲ ವಿಕೆಟ್ ಪತನ


ಪ್ರತಿ ಐಸಿಸಿ ಈವೆಂಟ್‌ನಲ್ಲೂ ಕಳಪೆ ಪ್ರದರ್ಶನದ ನಂತರ ಪಾಕಿಸ್ತಾನ ತಂಡದಲ್ಲಿ ಬದಲಾವಣೆಯ ಗಾಳಿ ಬೀಸುವುದು ಹೊಸತೇನಲ್ಲ. ಈ ಹಿಂದೆಯೂ ಐಸಿಸಿ ಪಂದ್ಯಾವಳಿಗಳನ್ನು ಸೋತ ಬಳಿಕ ಪಾಕ್ ತಂಡದ ಮುಖ್ಯ ಕೊಚ್ಚಿನಿಂದ ಹಿಡಿದು, ನಾಯಕನನ್ನು ಸಾಕಷ್ಟು ಬಾರಿ ಬದಲಿಸಲಾಗಿದೆ. ಇದೀಗ 2026 ರ ಟಿ20 ಸೂಪರ್ 8 ಹಂತದ ಸೋತು ಸ್ಪರ್ಧೆಯಿಂದ ಹೊರಬಿದ್ದಿದ ಬಳಿಕ ಪಾಕ್ ಮಂಡಳಿ ತನ್ನ ಕೆಲಸ ಶುರು ಮಾಡಿದೆ. ಅದರಂತೆ ಪ್ರತಿಯೊಬ್ಬ ಆಟಗಾರನಿಗೂ 50 ಲಕ್ಷ ರೂ. ದಂಡ ವಿಧಿಸಿದೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಪಾಕ್ ತಂಡದ ಆಯ್ಕೆ ಸಮಿತಿಯಲ್ಲಿದ್ದ ಅಲೀಮ್ ದಾರ್ ತಮ್ಮ ಹುದ್ದೆಗೆ ಕಳುಹಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮಹತ್ವದ ಬದಲಾವಣೆ

ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಪ್ರಮುಖ ಸದಸ್ಯ ಮತ್ತು ಮಾಜಿ ಅಂತರರಾಷ್ಟ್ರೀಯ ಅಂಪೈರ್ ಅಲೀಮ್ ದಾರ್ ತಮ್ಮ ಹುದ್ದೆಗೆ ಕಳುಹಿಸಿದ್ದಾರೆ. ತಂಡದಿಂದ ಹೊರಬಿದ್ದ ಬಳಿಕ ಅಲೀಮ್ ದಾರ್ ರಾಜೀನಾಮೆ ಸಲ್ಲಿಸಿದ್ದಾರೆ. ಅಕ್ಟೋಬರ್ 2024 ರಲ್ಲಿ ಆಯ್ಕೆ ಸಮಿತಿಯನ್ನು ಸೇರಿದ್ದ ಅಲೀಮ್ ದಾರ್ ಪಾಕಿಸ್ತಾನದ ವೈಫಲ್ಯದ ನಂತರ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆದಾಗ್ಯೂ ಕೆಲವು ವರದಿಗಳ ಪ್ರಕಾರ, ಪಿಸಿಬಿಯೇ ಅಲೀಮ್ ದಾರ್ ಅವರನ್ನು ಈ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಹೇಳಲಾಗುತ್ತದೆ.

ಅಲೀಮ್ ದಾರ್ ರಾಜೀನಾಮೆ ನೀಡಿದ ನಂತರ, ಅಕಿಬ್ ಜಾವೇದ್ ಮತ್ತು ಅಸಾದ್ ಶಫೀಕ್ ಈಗ ಆಯ್ಕೆ ಸಮಿತಿಯ ಉಳಿದ ಸದಸ್ಯರಾಗಿದ್ದಾರೆ. ಪರಿಣಾಮವಾಗಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಯ್ಕೆ ಸಮಿತಿಗೆ ಹೊಸ ಸದಸ್ಯರನ್ನು ಆಯ್ಕೆ ಮಾಡಬಹುದು. ಇದರ ಜೊತೆಗೆ ತಂಡದ ಕಳಪೆ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮತ್ತಷ್ಟು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಪಾಕಿಸ್ತಾನ ತಂಡದ ಪ್ರದರ್ಶನ ಹೇಗಿತ್ತು?

ಪಾಕಿಸ್ತಾನ ತಂಡವು ತನ್ನ ಕೊನೆಯ ಸೂಪರ್ 8 ಶ್ರೀಲಂಕಾವನ್ನು ಕೇವಲ 5 ರನ್‌ಗಳಿಂದ ಸೋಲಿಸಿದರೂ ಪ್ರಯೋಜನಕ್ಕೆ ಬರಲಿಲ್ಲ. ಏಕೆಂದರೆ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಪಾಕ್ ತಂಡಕ್ಕೆ ದೊಡ್ಡ ಗೆಲುವಿನ ಅಗತ್ಯವಿತ್ತು, ಆದರೆ ಅದು ಸಿಗಲಿಲ್ಲ. ಇದಕ್ಕೂ ಮೊದಲು, ಗುಂಪು ಹಂತದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಕೊನೆಯ ಹಂತದಲ್ಲಿ ರೋಮಾಂಚಕ ಗೆಲುವು ಸಾಧಿಸಿತ್ತು. ನಂತರ ನಮೀಬಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ವಿರುದ್ಧ ಗೆದ್ದಿದ್ದ ಪಾಕ್, ಕೊಲಂಬೊದಲ್ಲಿ ನಡೆದ ಭಾರತದ ಆಟಗಾರರ ವಿರುದ್ಧ 61 ರನ್ಗಳ ಹೀನಯಾ ಸೋಲು ಅನುಭವಿಸಿದ್ದರು. ನಂತರ, ನ್ಯೂಜಿಲೆಂಡ್ ವಿರುದ್ಧದ ಸೂಪರ್ 8 ಪಂದ್ಯ ಮಳೆಯಿಂದ ರದ್ದಾದರೆ, ಇಂಗ್ಲೆಂಡ್ ವಿರುದ್ಧದ ಸೋಲು ತಂಡದ ಭರವಸೆಯನ್ನು ಹುಸಿಗೊಳಿಸಿತು.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *