Headlines

ಈ ಊರಲ್ಲಿ ಹೋಳಿ ಆಚರಣೆ ಫುಲ್​​ ಡಿಫರೆಂಟ್​​: ಕತ್ತಿ ಹಿಡಿದು ಕಾಮಣ್ಣನ ಕಾಯುತ್ತಾರೆ ಗ್ರಾಮಸ್ಥರು!

ಈ ಊರಲ್ಲಿ ಹೋಳಿ ಆಚರಣೆ ಫುಲ್​​ ಡಿಫರೆಂಟ್​​: ಕತ್ತಿ ಹಿಡಿದು ಕಾಮಣ್ಣನ ಕಾಯುತ್ತಾರೆ ಗ್ರಾಮಸ್ಥರು!


ಧಾರವಾಡ, ಮಾರ್ಚ್ 03: ಹೋಳಿ ಹಬ್ಬದ ಆಚರಣೆ ಪ್ರದೇಶಗಳಿಗೆ ಬದಲಾಗೋದು ಎಲ್ಲರಿಗೂ ಗೊತ್ತಿರುವ ವಿಚಾರ. ಧಾರವಾಡದ ಮುಳಮುತ್ತಲ ಗ್ರಾಮ ಗ್ರಾಮದಲ್ಲಿಯೂ ವಿಭಿನ್ನ ರೀತಿಯಲ್ಲಿ ಹಬ್ಬದ ಆಚರಣೆ ನಡೆಯುತ್ತೆ. ಬಣ್ಣದೋಕುಳಿಯ ಬದಲಾಗಿ ತಮ್ಮೂರಿನ ಕಾಮದೇವನ ಮೂರ್ತಿಯನ್ನು ಯಾರಾದರೂ ಕದ್ದೊಯ್ಯಬಾರದು ಎಂದು ಗ್ರಾಮಸ್ಥರೆಲ್ಲ ತಮ್ಮ ಮನೆಯಲ್ಲಿ ಆಯುಧಗಳೊಂದಿಗೆ ಕಾಮಣ್ಣನ ರಕ್ಷಣೆಗೆ ನಿಲ್ಲೋದು ಇಲ್ಲಿಯ ವಿಶೇಷ.

ಗ್ರಾಮದ ಗರಡಿ ಮನೆಯ ಮುಂಭಾಗದಲ್ಲಿ ಸುಮಾರು 12 ಅಡಿ ಎತ್ತರದ ಮಂಟಪವನ್ನು ನಿರ್ಮಿಸಿ, ಸುತ್ತಲೂ ಕಟ್ಟಿಗೆಯ ಭದ್ರತೆಯೊಂದಿಗೆ ಕಾಮಣ್ಣನನ್ನು ಪ್ರತಿಷ್ಠಾಪಿಸಬಹುದಾಗಿದೆ. ಮೂರ್ತಿಯನ್ನು ಯಾರಾದರೂ ಕಡಿಯಬಾಹುದೆಂಬ ಕಾರಣಕ್ಕೆ ಗ್ರಾಮಸ್ಥರು ಬಹಳ ಹಿಂದಿನಿಂದಲೂ ಇಂತಹ ಆಚರಣೆಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಅಷ್ಟಕ್ಕೂ ಜನರೆಲ್ಲ ಆಯುಧಗಳನ್ನು ಹಿಡಿದು ಈ ರೀತಿ ಕಾವಲು ನಿಲ್ಲುವುದರ ಹಿಂದೆ ಐತಿಹಾಸಿಕ ಕತೆಯೊಂದಿದೆ.

ಇದನ್ನೂ ಓದಿ: ವಿದೇಶದಲ್ಲಿ ಧಾರವಾಡದ ಯುವಕನ ಚಮತ್ಕಾರ; ಇದು ಯೋಗದಿಂದ ಬದುಕೇ ಬದಲಾದ ಕಥೆ

ಹಲವಾರು ವರ್ಷಗಳ ಹಿಂದೆ ಗ್ರಾಮದ ಬುಡ್ಡಪ್ಪ ಕಣವಿ ಅನ್ನೋ ವ್ಯಕ್ತಿ ಅತ್ತಿಗೆ ಕುಡಿಯಲು ನೀರು ಕೇಳುತ್ತಾನಂತೆ. ಆಕೆ ನೀನು ಅದೇನು ದೊಡ್ಡ ಕಾರ್ಯ ಮಾಡಿ ಬಂದಿದ್ದೀಯಾ ಅಂತಾ ಹಿಯಾಳಿಸುತ್ತಾಳಂತೆ. ಇದರಿಂದ ನೊಂದ ಬುಡ್ಡಪ್ಪ ಪಕ್ಕದ ಅಣ್ಣಿಗೇರಿ ಗ್ರಾಮಕ್ಕೆ ಹೋಗಿ, ಅಲ್ಲಿನ ರಾಜರು ಪ್ರತಿಷ್ಠಾಪಿಸಿದ ಕಾಮಣ್ಣನ ಮೂರ್ತಿಯ ತಲೆಯನ್ನು ಕತ್ತರಿಸಿಕೊಂಡು ತರುತ್ತಾನೆ. ಬಳಿಕ ತಾನು ಮಾಡಿದ ಸಾಧನೆಯನ್ನ ತೋರಿಸಲು ಗ್ರಾಮದ ಅಗಸಿಯಲ್ಲಿ ಮೂರ್ತಿಯನ್ನಿಟ್ಟು, ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನಂತೆ. ಅಂದು ಕಾಮಣ್ಣನ ಮೂರ್ತಿಯ ತಲೆಯನ್ನು ಮರಳಿ ಪಡೆಯಲು ಆಯುಧ ಸಮೇತ ಬಂದ ಅಣ್ಣಿಗೇರಿ ಗ್ರಾಮಸ್ಥರನ್ನು ಹಿಮ್ಮೆಟ್ಟಿಸಲು ಸ್ಥಳೀಯರು ಆಯುಧಗಳೊಂದಿಗೆ ಹೋರಾಟಕ್ಕೆ ನಿಲ್ಲುತ್ತಾರೆ. ಈ ಗ್ರಾಮಸ್ಥರು ನೋಡಿ ಇವರ ಸಹವಾಸವೇ ಬೇಡ ಅಂತಾ ಅಣ್ಣಿಗೇರಿ ಗ್ರಾಮಸ್ಥರು ಮರಳಿ ಹೋಗುತ್ತಾರಂತೆ. ಗ್ರಾಮದಾದ್ಯಂತ ಬುಡ್ಡಪ್ಪ ಸತ್ತ ಬಳಿಕ ಶೋಕಾಚರಣೆ ನಡೆಯುತ್ತೆ. ಇದೇ ಕಾರಣಕ್ಕೆ ಬಣ್ಣದೋಕುಳಿಯನ್ನೂ ನಿಷೇಧಿಸಲಾಗುತ್ತೆ. ಅಂದು ಅನಿವಾರ್ಯತೆಯಿಂದಾಗಿ ನಡೆದ ಹೋರಾಟ ಇಂದು ಆಚರಣೆಯಾಗಿ ಬದಲಾಗಿದೆ. ಈ ವಿಚಿತ್ರವನ್ನು ನೋಡಲು ಬೇರೆ ಬೇರೆ ಕಡೆಗಳಿಂದ ಜನರು ಬರುತ್ತಾರೆ. ಹೀಗೆ ಬಂದವರು ಏನಾದರೂ ಬೇಡಿಕೊಂಡರೆ, ಅದು ಸಿಗುತ್ತೆ ಅನ್ನೋ ನಂಬಿಕೆಯೂ ಜನರಲ್ಲಿದೆ.

ಅಷ್ಟೇ ಅಲ್ಲ, ಆರಂಭದ ವರ್ಷದ ಹೋಳಿ ಹಬ್ಬದ ವೇಳೆಯಲ್ಲಿ ಬೇರೆ ಗ್ರಾಮದ ಯಾರಿಗೂ ಕೂಡ ಇಲ್ಲಿಗೆ ಪ್ರವೇಶವೂ ಇರಲಿಲ್ಲ. ಬೇರೆ ಯಾವುದೋ ನೆಪ ಮಾಡಿಕೊಂಡು ಬಂದು, ಮೂರ್ತಿಯನ್ನು ಕದ್ದೊಯ್ದರೆ ಹೇಗೆ ಅನ್ನೋ ಅನುಮಾನವೇ ಇದಕ್ಕೆ ಕಾರಣವಾಗಿತ್ತು. ಆದರೆ ವರ್ಷಗಳು ಉರುಳಿದಂತೆ ಆ ನಿಯಮವನ್ನು ಸಡಿಲಿಸಲಾಗಿದೆ. ಆದರೆ ಅಂದು ಆರಂಭವಾದ ಕಾಮಣ್ಣನ ಕಾಯೋ ಕೆಲಸ ಸಾಂಪ್ರದಾಯಿಕ ಆಚರಣೆಯ ರೂಪ ತಳೆದು, ಇವತ್ತಿಗೂ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *