Headlines

ಚಂದ್ರ ಗ್ರಹಣದ ವೇಳೆ ಚಂದ್ರನು ಈ ಬಣ್ಣದಲ್ಲಿ ಗೋಚರಿಸುವುದು ಯಾಕೆ?: ನೆಹರು ತಾರಾಲಯದ ನಿರ್ದೇಶಕರು ಹೇಳಿದ್ದೇನು?

ಚಂದ್ರ ಗ್ರಹಣದ ವೇಳೆ ಚಂದ್ರನು ಈ ಬಣ್ಣದಲ್ಲಿ ಗೋಚರಿಸುವುದು ಯಾಕೆ?: ನೆಹರು ತಾರಾಲಯದ ನಿರ್ದೇಶಕರು ಹೇಳಿದ್ದೇನು?


ಚಂದ್ರ ಗ್ರಹಣದ ವೇಳೆ ಚಂದ್ರನು ಕೆಂಪು ಅಥವಾ ತಾಮ್ರದ ಬಣ್ಣದಲ್ಲಿ ಗೋಚರಿಸುವುದು ಒಂದು ವಿಸ್ಮಯಕಾರಿ ವಿದ್ಯಮಾನ. ಇದನ್ನು ರಕ್ತಚಂದ್ರ ಅಥವಾ ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ. ಭೂಮಿಯ ನೆರಳಿನಲ್ಲಿ ಚಂದ್ರ, ಸಾಮಾನ್ಯವಾಗಿ ಕಪ್ಪಾಗಿ ಕಾಣಿಸಬೇಕು. ಆದರೆ, ಭೂಮಿಯ ವಾತಾವರಣವು ಸೂರ್ಯನ ಬೆಳಕು ಚಂದ್ರನ ಮೇಲೆ ವಕ್ರೀಭವನವಾಗುತ್ತದೆ. ಸೂರ್ಯನ ಬಿಳಿ ಬೆಳಕಿನಲ್ಲಿರುವ ಏಳು ಬಣ್ಣಗಳಲ್ಲಿ ಕೆಂಪು ಮತ್ತು ಹಳದಿ ಮಿಶ್ರಿತ ಬಣ್ಣಗಳು ವಾತಾವರಣದ ಮೂಲಕ ಬಾಗಿ ಚಂದ್ರನ ಮೇಲೆ ಬೀಳುತ್ತವೆ. ಈ ಬೆಳಕು ನಮ್ಮ ಕಣ್ಣುಗಳಿಗೆ ಪ್ರತಿಫಲಿತವಾದಾಗ, ಚಂದ್ರನು ರಕ್ತವರ್ಣದ್ದಾಗಿ ಕಾಣಿಸುತ್ತಾನೆ. ಪ್ರತಿ ಹುಣ್ಣಿಮೆಯ ದಿನ ಚಂದ್ರ ಗ್ರಹಣ ಸಂಭವಿಸುವುದಿಲ್ಲ ಏಕೆಂದರೆ, ಚಂದ್ರನು ಭೂಮಿಯ ಸುತ್ತ ಐದು ಡಿಗ್ರಿ ಕೋನದಲ್ಲಿ ಸುತ್ತುತ್ತಾನೆ. ಇತ್ತೀಚೆಗೆ ಫೆಬ್ರವರಿ 17 ರಂದು ಕಂಕಣ ಸೂರ್ಯಗ್ರಹಣ (ರಿಂಗ್ ಆಫ್ ಫೈರ್) ಸಂಭವಿಸಿತ್ತು. ಅದು ಭಾರತಕ್ಕೆ ಇದೆ ಅಂಟಾರ್ಟಿಕಾ ಪ್ರದೇಶದಲ್ಲಿ ಮಾತ್ರ ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ, ಪ್ರಸ್ತುತ ಸಂಪೂರ್ಣ ಚಂದ್ರಗ್ರಹಣವು ಜನರಿಗೆ ಗೋಚರಿಸುತ್ತದೆ ಎಂದು ನೆಹರು ತಾರಾಲಯದ ನಿರ್ದೇಶಕ ಗುರ ಪ್ರಸಾದ್.

ವರದಿ: ನಟರಾಜ್ ಮೆಟ್ರೋ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *