ಬೆಳಗಾವಿ, ಮಾರ್ಚ್ 03): 2026ರ ಮೊದಲ ಕೇತುಗ್ರಸ್ಥ ಚಂದ್ರಗ್ರಹಣ (ಚಂದ್ರಗ್ರಹಣ 2026) ಹಿನ್ನಲೆಯಲ್ಲಿ ಕರ್ನಾಟಕದಾದ್ಯಂತ ಹಲವು ಪ್ರಮುಖ ದೇವಾಲಯಗಳು ಇಂದು (ಮಾರ್ಚ್ 03) ಮಧ್ಯಾಹ್ನದ ಪೂಜೆಯ ನಂತರ ಬಂದ್ ಆಗಿದ್ದು, ಸಂಜೆ 6:48ಕ್ಕೆ ಗ್ರಹಣ ಮೋಕ್ಷದ ನಂತರ ಶುದ್ಧೀಕರಣ ಪೂಜೆಗೆ ಮತ್ತೆ ದೇಗುಲ ಬಾಗಿಲು ತೆರೆಯುತ್ತದೆ. ಇನ್ನು ಈ ಗ್ರಹಣದ ಬಗ್ಗೆ ಅಯೋಧ್ಯ ರಾಮಲಲ್ಲಾ ಪ್ರತಿಷ್ಠಾಪನೆ ಮುಹೂರ್ತ ನೀಡಿದ್ದ ಪಂಡಿತ ವಿಜಯೇಂದ್ರ ಶರ್ಮಾ ಹೇಳಿಕೆ,ಭಾರತದಲ್ಲಿ ಸಂಜೆ 6.26 ರಿಂದ 6.50ರ ವರೆಗೆ ಚಂದ್ರಗ್ರಹಣ ಗೋಚರವಾಗಲಿದೆ. ಈ ವೇಳೆ ಸ್ನಾನ, ಜಪ, ಕೂಲದೇವರ ನಾಮಸ್ಮರಣೆ ಮಾಡಬೇಕು.
ಇನ್ನು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ಬಗ್ಗೆ ಮಾತನಾಡಿದ್ದು, ಚಂದ್ರಗ್ರಹಣದಿಂದ ಸ್ವಲ್ಪ ಮಟ್ಟಿಗೆ ಕೆಡಕಾಗುತ್ತೆ. ದೇವರ ಜಪ ಪೂಜೆಗಳಿಂದ ಎಲ್ಲವೂ ಸರಿ ಆಗುತ್ತೆ. ಯುದ್ದದ ಕಾರ್ಮೋಡ ಕಳೆದು ಹೋಗಲಿದೆ. ಭಾರತದ ಜೊತೆಗೆ ಯಾವ ಯುದ್ದಗಳು ಆಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಗೂ ಕಷ್ಟವಾಗಿದೆ. ಜೂನ್ ವರೆಗೂ ಮೋದಿ ಅವರಿಗೂ ಕಷ್ಟವಾಗಿದೆ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.