Headlines

ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್; ಇದು ರಿಟೈರ್ಮೆಂಟ್​ಗೂ ಸೈ, ಹೆಲ್ತ್​ಕೇರ್ ವೆಚ್ಚಕ್ಕೂ ಸೈ; ಹೇಗೆ ಕೆಲಸ ಮಾಡುತ್ತೆ ಈ ಹೈಬ್ರಿಡ್ ಸ್ಕೀಮ್?

ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್; ಇದು ರಿಟೈರ್ಮೆಂಟ್​ಗೂ ಸೈ, ಹೆಲ್ತ್​ಕೇರ್ ವೆಚ್ಚಕ್ಕೂ ಸೈ; ಹೇಗೆ ಕೆಲಸ ಮಾಡುತ್ತೆ ಈ ಹೈಬ್ರಿಡ್ ಸ್ಕೀಮ್?


ಪೆನ್ಷನ್ ಫಂಡ್ ನಿಯಂತ್ರಕ ಪ್ರಾಧಿಕಾರವಾದ ಪಿಎಫ್ ಆರ್ಡಿಎ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಪಿಒಸಿ (ಪ್ರೂಫ್ ಆಫ್ ಕಾನ್ಸೆಕ್ಟ್) ಸ್ಕೀಮ್ ಅಡಿಯಲ್ಲಿ ಎನ್ ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್ ಬಿಡುಗಡೆ ಸ್ಕೀಮ್ (ಎನ್‌ಪಿಎಸ್ ಸ್ವಾಸ್ಥ್ಯ ಇಕ್ವಿಟಿ ಪ್ಲಸ್) ಅನ್ನು ಇತ್ತೀಚೆಗೆ ಮಾಡಲಾಗಿದೆ. ಪಿಎಫ್ ಆರ್ಡಿಎ ಈ ಸ್ಕೀಮ್ ಅನ್ನು ನಡೆಸುತ್ತಿದೆ. ಇದು ರಿಟೈರ್ಮೆಂಟ್ಗೆ ಬೇಕಾದ ದೀರ್ಘಾವಧಿ ಹೂಡಿಕೆ ಮಾಡಲು ಹಾಗೂ ಆರೋಗ್ಯಪಾಲನೆ ವೆಚ್ಚ ಭರಿಸಲು ಅವಕಾಶ ಕೊಡುವ ಹೈಬ್ರಿಡ್ ರಿಟೈರ್ಮೆಂಟ್ ಸ್ಕೀಮ್ ಆಗಿದೆ.

ಎನ್ ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್ ನಲ್ಲಿ ಹಣದ ವಿನಿಯೋಗ ಹೇಗೆ?

ಎನ್ ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್ ಸ್ಕೀಮ್ ನಲ್ಲಿ ಶೇ. 70 ರಿಂದ 100ರಷ್ಟು ಹಣವನ್ನು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲಾಗಿದೆ. ಶೇ. 30 ರವರೆಗೆ ಡೆಟ್‌ಗಳಲ್ಲಿ, ಹಾಗೆಯೇ ಶೇ 10 ರ ಹಣವನ್ನು ಮನಿ ಮಾರ್ಕೆಟ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ. ಹೂಡಿಕೆದಾರರ ರಿಸ್ಕ್ ಇಚ್ಛೆಗೆ ಹೂಡಿಕೆಗಳ ಹಂಚಿಕೆ ಆಗುತ್ತದೆ.

ಇದನ್ನೂ ಓದಿ: ಮಾರುಕಟ್ಟೆ ಟ್ರೆಂಡ್, ಎಕ್ಸ್‌ಪೆನ್ಸ್ ರೇಶಿಯೋ, ಎಮರ್ಜೆನ್ ಫಂಡ್ ಇತ್ಯಾದಿ.. ಜನಸಾಮಾನ್ಯರು ಮಾಡುವ ಹೂಡಿಕೆ ತಪ್ಪುಗಳಿವು

ಉದಾಹರಣೆಗೆ, ಹೂಡಿಕೆದಾರರಿಗೆ ತೀರಾ ಹೆಚ್ಚು ಅಪಾಯದ ಅವಶ್ಯಕತೆ ಇಲ್ಲ ಎನಿಸಿದೆ ಈಕ್ವಿಟಿಗಳಲ್ಲಿ ಶೇ. 70, ಡೆಟ್‌ಗಳಲ್ಲಿ ಶೇ. 20, ಮನಿ ಮಾರುಕಟ್ಟೆಗಳಲ್ಲಿ ಶೇ. 10 ಹೂಡಿಕೆ ಮಾಡಬಹುದು. ಅಥವಾ ಈಕ್ವಿಟಿಗಳಲ್ಲಿ ಶೇ. 70, ಡೆಟ್‌ಗಳಲ್ಲಿ ಶೇ. 30 ಹೂಡಿಕೆ ಆಗಬಹುದು.

ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಿದ್ಧ ಇದ್ದರೆ ನೂರಕ್ಕೆ ನೂರು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಬಹುದು. ಅಥವಾ ಈಕ್ವಿಟಿಗಳಲ್ಲಿ ಶೇ. 90, ಡೆಟ್‌ಗಳಲ್ಲಿ ಶೇ. 10 ಹೂಡಿಕೆ ಮಾಡಬಹುದು.

ಇದನ್ನೂ ಓದಿ: ಬದುಕು ನಿರ್ವಹಿಸುವಷ್ಟು ಮಾಸಿಕ ಆದಾಯ ಸೃಷ್ಟಿಸುವುದು ಹೇಗೆ? ಬೆಲೆ ಏರಿಕೆ ಇತ್ಯಾದಿ ಅಂಶಗಳನ್ನು ಮರೆಯದಿರಿ; ಇಲ್ಲಿದೆ ಟಿಪ್ಸ್

ಹೆಲ್ತ್ಕೇರ್ ವೆಚ್ಚಕ್ಕೆ ಹಣ ಹೇಗೆ?

ಎನ್ ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್ ಸ್ಕೀಮ್ ನಲ್ಲಿ ನಿಮ್ಮ ಹೂಡಿಕೆ ಹಣ 50,000 ರೂ ದಾಟಿದಾಗ ಹಣ ವಿತ್ ಡ್ರಾ ಮಾಡಲು ಅರ್ಹರಾಗಬಹುದು. ಶೇ. 25ರಷ್ಟು ಹಣವನ್ನು ಮಾತ್ರ ಹಿಂಪಡೆಯಲು ಅವಕಾಶ ಇರುತ್ತದೆ. ವೈದ್ಯಕೀಯ ವೆಚ್ಚವು ಕಾರ್ಪಸ್ನ ಶೇ. 70ಕ್ಕಿಂತ ಹೆಚ್ಚು ಇದ್ದಾಗ ಪೂರ್ಣ ಹಣ ಹಿಂಪಡೆಯುವ ಅವಕಾಶವೂ ಇರುತ್ತದೆ. ಆದರೆ, ಅಪೋಲೋ 24/7 ಪ್ಲಾಟ್ಫಾರ್ಮ್ ಮತ್ತು ಆಯ್ದ ಅಪೋಲೋ ನೆಟ್ವರ್ಕ್ ಫೆಸಿಲಿಟಿಗಳ ಮೂಲಕ ಹೆಲ್ತ್ಕೇರ್ ಸಂಬಂಧಿತ ವೆಚ್ಚಗಳಿಗೆ ಈ ಸ್ಕೀಮ್ನ ಹಣವನ್ನು ಬಳಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *