Headlines

Kitchen Tips : ಪಾತ್ರೆ ಜಿಡ್ಡಾಗಿದ್ದರೆ ಕ್ಲೀನ್ ಮಾಡಲು ಇಲ್ಲಿವೆ ಬೆಸ್ಟ್ ಟಿಪ್ಸ್

Kitchen Tips : ಪಾತ್ರೆ ಜಿಡ್ಡಾಗಿದ್ದರೆ ಕ್ಲೀನ್ ಮಾಡಲು ಇಲ್ಲಿವೆ ಬೆಸ್ಟ್ ಟಿಪ್ಸ್

Kitchen Tips : ಪಾತ್ರೆ ಜಿಡ್ಡಾಗಿದ್ದರೆ ಕ್ಲೀನ್ ಮಾಡಲು ಇಲ್ಲಿವೆ ಬೆಸ್ಟ್ ಟಿಪ್ಸ್

ಎಲ್ಲ ಪಾತ್ರೆಯ ಮುಂದೆ ಅತೀ ಕೊಳಕಾಗಿ ಕಾಣುವ ಪಾತ್ರೆ ಅಂದ್ರೆ ಅದು ಕಡಾಯಿ. ನೀವು ಎಷ್ಟೇ ಉಜ್ಜಿದ್ರೂ ಅದ್ರ ಜಿಡ್ಡು ಹೋಗೋದಿಲ್ಲ. ಅನೇಕ ಮಹಿಳೆಯರು ಹೊಸ ಕಡಾಯಿ ಖರೀದಿಗೆ ಪ್ಲಾನ್ ಮಾಡ್ತಾರೆ. ನೀವು ಹೊಸ ಕಡಾಯಿ ಖರೀದಿ ಮಾಡ್ಬೇಕಾಗಿಲ್ಲ. ಇರೋ ಕಡಾಯಿಯನ್ನೇ ಹೊಳೆಯುವಂತೆ ಕ್ಲೀನ್ ಮಾಡ್ಬಹುದು.

ಅಡುಗೆ ಮನೆಯಲ್ಲಿ ಅತೀ ಹೆಚ್ಚು ಬಳಕೆಯಾಗುವ ಪಾತ್ರೆ ಅಂದ್ರೆ ಅದು ಕಡಾಯಿ. ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಅಂತ ಇಡೀ ದಿನ ಕಡಾಯಿಯಲ್ಲಿ ಒಂದಲ್ಲ ಒಂದು ಆಹಾರ ಬೇಯ್ತಿರುತ್ತೆ. ಪಲ್ಯ, ಕರಿ, ಸಿಹಿ ತಿಂಡಿ ಮಾಡೋದು ಮಾತ್ರವಲ್ಲ ಪಕೋಡಾ, ಬಜ್ಜಿ ಬೇಯಿಸೋದು ಕೂಡ ಇದೇ ಕಡಾಯಿಯಲ್ಲಿ. ಇಡೀ ದಿನ ಇದನ್ನು ಬಿಸಿ ಮಾಡೋದ್ರಿಂದ , ಬಿಸಿಯಾದ ಎಣ್ಣೆ ಇದ್ರಲ್ಲಿ ದೀರ್ಘ ಸಮಯ ಇರೋದ್ರಿಂದ ಕಡಾಯಿ ತಳಭಾಗ ಮಾತ್ರವಲ್ಲ, ಸುತ್ತಮುತ್ತ ದಪ್ಪ, ಕಪ್ಪು ಪದರ ಅಂಟಿಕೊಂಡಿರುತ್ತದೆ. ಆರಂಭದಲ್ಲಿ ಇದು ಅಷ್ಟಾಗಿ ಕಾಣ್ದೆ ಹೋದ್ರೂ ನಂತ್ರ ಅದ್ರ ಬಣ್ಣ ಗಾಢವಾಗುತ್ತದೆ. ನೀವು ಎಷ್ಟು ಸ್ಕ್ರಬ್ ಮಾಡಿದ್ರೂ ಅದನ್ನು ತೆಗೆಯೋದು ಕಷ್ಟ.

ಕಡಾಯಿ ಜಿಡ್ಡನ್ನು ಮನೆಯಲ್ಲೇ ಆರಾಮವಾಗಿ ತೆಗೆಯಬಹುದು. ಅದಕ್ಕೆ ನೀವು ಮಕ್ಕಳು, ದೊಡ್ಡವರೆಲ್ಲ ಇಷ್ಟಪಟ್ಟು ತಿನ್ನುವ ಕೆಚಪ್, ಬಳಸಬಹುದು. ಕಡಾಯಿ ಕೆಲವೇ ನಿಮಿಷದಲ್ಲಿ ಜಿಡ್ಡನ್ನು ಮಾಯ ಮಾಡುವ ಶಕ್ತಿ ಹೊಂದಿದೆ. ಕೆಚಪ್ ನಲ್ಲಿರುವ ಹುಳಿ ಅಂಶ, ಕಡಾಯಿಗೆ ಅಂಟಿಕೊಂಡಿರುವ ಸುಟ್ಟ ಗ್ರೀಸ್ ತೆಗೆದು ಹಾಕುತ್ತದೆ. ಮೊದಲು ಕಪ್ಪಗಾಗಿರುವ ಕಡಾಯಿ ಭಾಗಕ್ಕೆ ದಪ್ಪದಾಗಿ ಕೆಚಪ್ ಹಾಕಿ. ಹತ್ತರಿಂದ ಹದಿನೈದು ನಿಮಿಷ ಹಾಗೆ ಬಿಡಿ. ನಂತ್ರ ಅದಕ್ಕೆ ಉಪ್ಪನ್ನು ಸಿಂಪಡಿಸಿ, ಸ್ಕ್ರಬ್ ಮಾಡಿ. ನಂತ್ರ ಸೋಪ್ ನಿಂದ ನಿಮ್ಮ ಪಾತ್ರೆಯನ್ನು ಕ್ಲೀನ್ ಮಾಡಿ. ನೀವು ಅಲ್ಯೂಮಿನಿಯಂ ಮತ್ತು ಸ್ಟೀಲ್ ಕಡಾಯಿಗೆ ಈ ಟ್ರಿಕ್ಸ್ ಬಳಸಬಹುದು.

ಜಿಡ್ಡು ದಪ್ಪವಾಗಿದ್ದರೆ ನೀವು ಉಪ್ಪು ಹಾಗೂ ಡಿಟರ್ಜೆಂಟ್ ಬಳಸಬಹುದು. ಮೊದಲು ಒಂದು ಚಮಚ ಉಪ್ಪನ್ನು ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಡಿಟರ್ಜೆಂಟ್ ಹಾಗೂ ಉಪ್ಪನ್ನು ಸೇರಿಸಿ, ಜಿಡ್ಡಿನ ಭಾಗಕ್ಕೆ ಹಾಕಿ. ಹತ್ತು ನಿಮಿಷ ಹಾಗೆ ಬಿಟ್ಟು ನಂತ್ರ ಸ್ಕ್ರಬ್ ಮಾಡಿ. ಶುದ್ಧ ನೀರಿನಿಂದ ಕಡಾಯಿಯನ್ನು ಕ್ಲೀನ್ ಮಾಡಿ. ಅತಿಯಾದ ಜಿಡ್ಡಿದ್ದಾಗ ಈ ವಿಧಾನ ಹೆಚ್ಚು ಪ್ರಯೋಜನಕಾರಿ.

ಅಡುಗೆ ಸೋಡಾ ಹಾಗೂ ನಿಂಬೆ ರಸವನ್ನು ಬಳಸಿ ನೀವು ಈ ಜಿಡ್ಡನ್ನು ತೆಗೆಯಬಹುದು. ನೀವು ಕಡಾಯಿಗೆ ಸ್ವಲ್ಪ ನೀರು ಹಾಕೆ ಒದ್ದೆ ಮಾಡ್ಕೊಳ್ಳಿ. ನಂತ್ರ ಆ ಜಾಗಕ್ಕೆ ಅಡುಗೆ ಸೋಡಾ ಹಾಕಿ. ನಿಂಬೆ ರಸಕ್ಕೆ ಸ್ವಲ್ಪ ನೀರನ್ನು ಮಿಕ್ಸ್ ಮಾಡಿ ಈ ಮಿಶ್ರಣವನ್ನು ಅಡುಗೆ ಸೋಡಾ ಮೇಲೆ ಹಾಕಿ 15 ನಿಮಿಷ ಬಿಡಿ. ನಂತ್ರ ಸ್ಕ್ರಬ್ಬರ್ ನಿಂದ ಸ್ಕ್ರಬ್ ಮಾಡಿ. ಶುದ್ಧ ನೀರಿನಿಂದ ಕಡಾಯಿಯನ್ನು ಕ್ಲೀನ್ ಮಾಡಿ. ನೀವು ಅಡುಗೆ ಸೋಡಾ ಹಾಗೂ ನಿಂಬೆ ರಸದ ಜೊತೆ ವಿನೆಗರ್ ಕೂಡ ಬಳಸಬಹುದು.

ನೀವು ಹೇಗೆ ಸ್ವಚ್ಛ ಮಾಡ್ತೀರಿ ಎಂಬುದಕ್ಕಿಂತ ಯಾವಾಗ ಸ್ವಚ್ಛ ಮಾಡ್ತೀರಿ ಅನ್ನೋದು ಇಲ್ಲಿ ಮುಖ್ಯವಾಗುತ್ತದೆ. ಪ್ರತಿ ಬಾರಿ ಕಡಾಯಿ ಸ್ವಚ್ಛತೆಗೆ ನೀವು ಗಮನ ನೀಡಿದ್ರೆ ಜಿಡ್ಡು ದಪ್ಪವಾಗೋದಿಲ್ಲ. ಪದಾರ್ಥ ಸಿದ್ಧವಾದ ಮೇಲೆ ಅಥವಾ ಪಕೋಡಾ ಕೆಲ್ಸ ಮುಗಿದ್ಮೇಲೆ ಎಣ್ಣೆಯನ್ನು ತೆಗೆದು, ಕಡಾಯಿ ಕ್ಲೀನ್ ಮಾಡಿ. ಸ್ವಲ್ಪ ಬಿಸಿ ನೀರನ್ನು ಕಡಾಯಿಗೆ ಹಾಕಿ ಕುದಿಸಿ. ನಂತ್ರ ಅದಕ್ಕೆ ಉಪ್ಪು ಹಾಗೂ ನಿಂಬೆ ರಸವನ್ನು ಹಾಕಿ ಉಜ್ಜಿ. ಖಾಲಿ ಕಡಾಯಿಯನ್ನು ತುಂಬಾ ಸಮಯ ಬಿಸಿ ಮಾಡಬೇಡಿ.

Source link

Leave a Reply

Your email address will not be published. Required fields are marked *