ಕನ್ನಡದ ದೊಡ್ಡ ಬಜೆಟ್ ಪ್ಯಾನ್ ಇಂಡಿಯಾ (ಪ್ಯಾನ್ ಇಂಡಿಯಾ) ಸಿನಿಮಾಗಳು ಅಥವಾ ಸುದೀಪ್, ಯಶ್, ದರ್ಶನ್ ಅಂಥಹ ದೊಡ್ಡ ನಟರ ಸಿನಿಮಾಗಳಷ್ಟೇ ರಾಜ್ಯದ ದಾಟಿ ಹೊರ ರಾಜ್ಯಗಳಲ್ಲಿ ಪ್ರದರ್ಶನ ಕಾಣುತ್ತವೆ. ಅದರಲ್ಲೂ ಚೆನ್ನಾಗಿದ್ದರಷ್ಟೇ ಪರಭಾಷೆ ಸಿನಿಮಾವನ್ನು ಮೆಚ್ಚಿಕೊಳ್ಳುತ್ತಾರೆ. ಕನ್ನಡದ ಕೆಲವು ಸ್ಟಾರ್ ನಟರ ಕನ್ನಡ ಸಿನಿಮಾಗಳು ಪರಭಾಷೆಯಲ್ಲಿ ಅಟ್ಟರ್ ಫ್ಲಾಪ್ ಆದ ಉದಾಹರಣೆಯೂ ಇದೆ. ಆದರೆ ಇದೀಗ ಕನ್ನಡದ ಸಿನಿಮಾ ಒಂದು ನೆರೆಯ ತಮಿಳುನಾಡಿನಲ್ಲಿ ಸದ್ದು ಮಾಡಲು ಶುರು ಮಾಡಿದೆ. ಆದರೆ ಇದು ಸಂತೋಷಪಡಬೇಕಾದ ಸುದ್ದಿಯೋ ಅಥವಾ ಬೇಸರ ಪಟ್ಟುಕೊಳ್ಳಬೇಕಾದ ಸುದ್ದಿಯೋ ಗೊಂದಲದಲ್ಲಿದೆ ಚಿತ್ರತಂಡ.
ವಿಜಯ್ ರಾಘವೇಂದ್ರ ನಟಿಸಿರುವ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಸಿನಿಮಾ ವಾರದ ಹಿಂದಷ್ಟೇ ಬಿಡುಗಡೆ ಆಗಿದ್ದು ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳಿವೆ. ಸಿನಿಮಾ ಪ್ರೇಮಿಗಳು, ಸಿನಿಮಾ ನೋಡಿದವರು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಆದರೆ ಈ ಹಿಂದಿನ ಕನ್ನಡದ ಕೆಲ ಒಳ್ಳೆಯ ಸಿನಿಮಾಗಳಿಗೆ ಆದ ಗತಿಯೇ ಈ ಸಿನಿಮಾಕ್ಕೂ ಆಗಿದೆ. ಸಿನಿಮಾವನ್ನು ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಲಾಗುತ್ತಿದೆ. ಆದರೆ ನೆರೆಯ ತಮಿಳುನಾಡಿನಲ್ಲಿ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಸಿನಿಮಾಕ್ಕೆ ಬೆಂಗಳೂರಿನಲ್ಲಿ ಪ್ರಸ್ತುತ ಕೆಲವೇ ಚಿತ್ರಮಂದಿರಗಳಲ್ಲಿ ಕೆಲವೇ ಪ್ರದರ್ಶನಗಳಿವೆ. ಅದೂ ಇತ್ತೀಚೆಗಷ್ಟೇ ಕೆಲವು ಶೋಗಳು ಹೆಚ್ಚುವರಿಯಾಗಿ ಕೊಡುಗೆ. ಅತ್ತ ತಮಿಳುನಾಡಿನಲ್ಲಿ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆಯಾಗಿದೆ, ಸಿನಿಮಾವು ದಿನದಿಂದ ದಿನಕ್ಕೆ ಶೋಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದೆ. ಬುಕ್‌ಮೈಶೋ ಮಾಹಿತಿಯಂತೆ ಚೆನ್ನೈನಲ್ಲಿ ನಾಳೆ (ಮಾರ್ಚ್ 03) ಸಿನಿಮಾಕ್ಕೆ ಚಿತ್ರಮಂದಿರಗಳಲ್ಲಿ ಐದು ಶೋಗಳು ನಾಲ್ಕು ಆಗಿವೆ. ಸಣ್ಣ ಬಜೆಟ್ನ ಕನ್ನಡ ಸಿನಿಮಾ ಕೇವಲ ತನ್ನ ಕಂಟೆಂಟ್ ಒಂದರಲ್ಲಿ ಪರರಾಜ್ಯದ ಶೋಗಳನ್ನು ಗಿಟ್ಟಿಸುತ್ತಿರುವುದು ಸಾಮಾನ್ಯ ಸಂಗತಿಯಲ್ಲ.
ಇದನ್ನೂ ಓದಿ:ವಿಜಯ್ ರಾಘವೇಂದ್ರ ಟಾರ್ಚರ್‌ಗೆ ಸುಸ್ತಾದ ಅನುಶ್ರೀ; ಕೊನೆಗೂ ಮೂಡಿತು ನಗು
ಐದು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ‘ಸೀತಾರಾಮ್ ಬಿನೋಯ್’ ಸಿನಿಮಾದ ಎರಡನೇ ಭಾಗವಾಗಿದೆ. ಸಿನಿಮಾ ನೋಡಿದವರು ಮೊದಲ ಭಾಗ ಎರಡನೇ ಭಾಗ ಚೆನ್ನಾಗಿ ಮೂಡಿ ಬಂದಿದೆ ಎಂಬ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕತೆ ಆಗಿದ್ದು, ಹೆಚ್ಚುವರಿ ದೃಶ್ಯಗಳಿಲ್ಲದೆ ಬಹಳ ಗಟ್ಟಿಯಾದ ಚಿತ್ರಕತೆಯನ್ನು ಸಿನಿಮಾ ಹೊಂದಿದೆ. ನಿರ್ದೇಶಕ, ನಿರ್ಮಾಪಕರೂ ಆಗಿರುವ ಪವನ್ ಒಡೆಯರ್ ಅವರು ಈ ಸಿನಿಮಾವನ್ನು ತಮಿಳುನಾಡಿನಲ್ಲಿ ವಿತರಣೆ ಮಾಡಿದ್ದು, ತಮಿಳುನಾಡಿನಲ್ಲಿ ಸಿನಿಮಾ ಪಡೆದುಕೊಳ್ಳುತ್ತಿರುವ ಪ್ರತಿಕ್ರಿಯೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇವಿಪ್ರಸಾದ್ ಶೆಟ್ಟಿ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ