ಕೆಲಸ ಕೊಡಿಸಿದ ಸ್ನೇಹಿತನಿಗೇ ಚಟ್ಟ ಕಟ್ಟಿದ ಫ್ರೆಂಡ್​​: ಎಣ್ಣೆ ನಶೆಯಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಎಂಡ್​

ಕೆಲಸ ಕೊಡಿಸಿದ ಸ್ನೇಹಿತನಿಗೇ ಚಟ್ಟ ಕಟ್ಟಿದ ಫ್ರೆಂಡ್​​: ಎಣ್ಣೆ ನಶೆಯಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಎಂಡ್​


ಯಾದಗಿರಿ, ಮಾರ್ಚ್ 03: ಮದ್ಯ ಸೇವಿಸಿದ ನಶೆ ಸ್ನೇಹಿತರ ನಡುವೆ ಶುರುವಾದ ಗಲಾಟೆಯಲ್ಲಿ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಗುತ್ತಿಬಸವಣ್ಣನ ಕ್ರಾಸ್ ಬಳಿಯ ಕ್ರಶರ್ ಬಳಿ ನಡೆದಿದೆ. ವಿಜಯಪುರ ಜಿಲ್ಲೆಯ ತಾಳಿಕೋಟಿ ಮೂಲದ ಬಸನಗೌಡ (30) ಮೃತ ವ್ಯಕ್ತಿ, ಈತನ ಸ್ನೇಹಿತ ಬಸನಗೌಡ ಎಂಬವನೇ ಕೊಲೆ ಆರೋಪಿಯಾಗಿದ್ದಾನೆ.

ಕಾಣಿಸಿಕೊಂಡಿರುವ ವ್ಯಕ್ತಿ ಬಸನಗೌಡ ಕಳೆದ ಒಂದು ತಿಂಗಳಿನಿಂದ ಕ್ರಶರ್ ಕಂಪನಿಯಲ್ಲಿ ಟಿಪ್ಪರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕ್ರಶಿಂಗ್ ಮಾಡಿದ ಕಲ್ಲುಗಳುನ್ನ ಟಿಪ್ಪರ್‌ನಲ್ಲಿ ಲೋಡ್ ಮಾಡಿಕೊಂಡು ಬೇರೆ ಕಡೆ ಸಾಗಿಸುವ ಕೆಲಸ ಈತನದ್ದಾಗಿತ್ತು. ಈ ನಡುವೆ ತಾಳಿಕೋಟಿಯಲ್ಲಿ ಕೆಲಸವಿಲ್ಲದೆ ಅಲೆಯುತ್ತಿದ್ದ ಸ್ನೇಹಿತ ಬಸನಗೌಡನಿಗೂ ತನ್ನದೇ ಕಂಪನಿಯಲ್ಲಿ ಕೆಲಸ ಕೊಡಿಸಿದ್ದಾನೆ. ಎಂದಿನಂತೆ ನಿನ್ನೆ ಕೆಲಸ ಮುಗಿಸಿದ ಸ್ನೇಹಿತರು ಸಂಜೆ ಎಣ್ಣೆ ಹೊಡೆಯಲು ಕುಳಿತುಕೊಂಡಿದ್ದಾರೆ. ಮದ್ಯದ ನಶೆಯಲ್ಲಿದ್ದ ಇವರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿದೆ. ಇದು ವಿಕೋಪಕ್ಕೆ ಹೋಗಿ ಪರಸ್ಪರ ಹೊಡೆದಾಡಿದ್ದಾರೆ. ಕೊನೆಗೆ ಕೆಲಸ ಕೊಡಿಸಿದ್ದ ಬಸನಗೌಡಗೆ ಸ್ನೇಹಿತ ಬಸನಗೌಡ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದ ಬಳಿಕ ನಾಶೆಯಲ್ಲಿ ಹೋಗಿ ಮಲಗಿದ್ದಾನೆ. ಆದರೆ ಇತ್ತ ಹಲ್ಲೆಗೊಳಗಾದ ಬಸನಗೌಡ ಬೆಳಗಾಗುವುದರಲ್ಲಿ ಕಾಣಿಸಿಕೊಂಡಿದ್ದಾನೆ.

ಇದನ್ನೂ ಓದಿ: ಫೋಕ್ಸೋ ಕೇಸ್‌ನಲ್ಲಿ ಇಂದು 2 ಬೆಳವಣಿಗೆ; ಕುತೂಹಲ ಮೂಡಿಸಿದ ಮಲ್ಲಿಕಾರ್ಜುನ ಮುತ್ಯಾ ನಡೆ

ಇಬ್ಬರು ಸ್ನೇಹಿತರು ಚೆನ್ನಾಗಿಯೇ ಇದ್ದರು. ಇವರ ನಡುವೆ ಯಾವುದೇ ಜಗಳ ಆಗಿರಲಿಲ್ಲ. ಹೀಗಿದ್ದರೂ ಕುಡಿದ ನಶೆಯಲ್ಲಿ ನಡೆದ ಘಟನೆಯ ನಂತರ ಪ್ರಾಣ ಪಡೆದಿದೆ. ಘಟನಾ ಸ್ಥಳಕ್ಕೆ ಕೆಂಭಾವಿ ಪೊಲೀಸರು ಮತ್ತು ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನ ಕೆಂಭಾವಿಯ ಶವಗಾರಕ್ಕೆ ರವಾನೆ ಮಾಡಿದ್ದಾರೆ. ವಿಚಾರಣೆ ವೇಳೆ ಮದ್ಯದ ಅಮಲಲ್ಲಿ ಸ್ನೇಹಿತನನ್ನು ತಾನೇ ಕೊಂದಿರೋದಾಗಿ ಆರೋಪಿಯೂ ಒಪ್ಪಿಕೊಂಡಿದ್ದಾನೆ. ಘಟನೆ ಬಗ್ಗೆ ಪ್ರಕರಣ ದಾಖಲಾಗಿದೆ. ಉಪಕಾರ ಮಾಡಲು ಹೋಗಿ ಸ್ನೇಹಿತನಿಂದಲೇ ವ್ಯಕ್ತಿ ಹತ್ಯೆಯಾಗಿರುವ ಹಿನ್ನೆಲೆ, ಆರೋಪಿಯ ವಿರುದ್ಧ ಮೃತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆತನಿಗೆ ತಕ್ಕ ಶಿಕ್ಷೆಯಾಗಬೇಕು ಎಂಬ ಆಗ್ರಹವೂ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *