'ಅವ್ರು ತಬ್ಬಿಕೊಳ್ಳುವಾಗ್ಲೇ ನಂಗೆ ಗೊತ್ತಾಗತ್ತೆ' ಎಂದು ವೇದಿಕೆ ಮೇಲೆ ಹೇಳಿ ತಬ್ಬಿಬ್ಬು ಮಾಡಿದ Rakshita Shetty

'ಅವ್ರು ತಬ್ಬಿಕೊಳ್ಳುವಾಗ್ಲೇ ನಂಗೆ ಗೊತ್ತಾಗತ್ತೆ' ಎಂದು ವೇದಿಕೆ  ಮೇಲೆ ಹೇಳಿ ತಬ್ಬಿಬ್ಬು ಮಾಡಿದ Rakshita Shetty

'ಅವ್ರು ತಬ್ಬಿಕೊಳ್ಳುವಾಗ್ಲೇ ನಂಗೆ ಗೊತ್ತಾಗತ್ತೆ' ಎಂದು ವೇದಿಕೆ  ಮೇಲೆ ಹೇಳಿ ತಬ್ಬಿಬ್ಬು ಮಾಡಿದ Rakshita Shetty
ಬಿಗ್​ಬಾಸ್​ ಖ್ಯಾತಿಯ ರಕ್ಷಿತಾ ಶೆಟ್ಟಿ ಇದೀಗ ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ತಮ್ಮ ಅರೆಬರೆ ಕನ್ನಡದಿಂದ ನಗೆಗಡಲಲ್ಲಿ ತೇಲಿಸಿದ್ದಾರೆ. ಈ ಹಿಂದೆ ತಾವು ರೈತನ ಮಗನನ್ನು ಮದುವೆಯಾಗುವುದಾಗಿ ಹೇಳಿಕೆ ನೀಡಿ ಗಮನ ಸೆಳೆದಿದ್ದ ರಕ್ಷಿತಾ, ಸೆಲೆಬ್ರಿಟಿಯಾದ ಮೇಲೂ ತಮ್ಮ ಮಾತಿಗೆ ಬದ್ಧರಾಗಿದ್ದಾರೆ.
ಬಿಗ್​ಬಾಸ್​ ಖ್ಯಾತಿಯ ರಕ್ಷಿತಾ ಶೆಟ್ಟಿ (Rakshita Shetty) ಮಾತನಾಡಿದ್ರು ಎಂದರೆ, ಅಲ್ಲೊಂದು ಏನೋ ಸುದ್ದಿ ಆಗಿಯೇ ಆಗುತ್ತದೆ ಎನ್ನುವುದಂತೂ ದಿಟ. ಇದೇ ಕಾರಣಕ್ಕೆ ಬಹುತೇಕ ಎಲ್ಲಾ ಯುಟ್ಯೂಬ್​ ಚಾನೆಲ್​ನವರೂ ಈಕೆಯನ್ನು ಕರೆಸಿ ಮಾತನಾಡುವುದು ಉಂಟು.

ಅರೆಬರೆ ಕನ್ನಡದಿಂದ ಎಲ್ಲರ ಮನಸ್ಸನ್ನು ಗೆದ್ದು, ಕದ್ದು, ಬಿಗ್​ಬಾಸ್​ನಂಥ ಷೋನಲ್ಲಿ ಘಟಾನುಘಟಿಗಳನ್ನು ಮಣಿಸಿ ಮೊದಲ ರನ್ನರ್​ ಅಪ್​ ಆದ ಮಂಗಳೂರು ಪುಟ್ಟಿ, ಇದೀಗ ಸಕತ್​ ಸೆಲೆಬ್ರಿಟಿಯಾಗಿದ್ದಾರೆ. ಅವಕಾಶಗಳ ಆಗರವೇ ಹರಿದು ಬರುತ್ತಿದೆ.

ಇದೀಗ ರಕ್ಷಿತಾ ಶೆಟ್ಟಿ ಗಿಚ್ಚಿ ಗಿಲಿಗಿಲಿ ಷೋನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್​ಬಾಸ್​ನಿಂದ ಬಂದ ಮೇಲೆ ಏನು ಬದಲಾವಣೆ ಆಯಿತು ಎಂದು ಪ್ರಶ್ನಿಸಿದಾಗ, ಎಲ್ಲರೂ ತಬ್ಬಿಕೊಳ್ಳುವಾಗಲೇ ನನಗೆ ಗೊತ್ತಾಗತ್ತೆ, ಎಷ್ಟು ಪ್ರೀತಿ ತೋರುತ್ತಾರೆ ಎಂದು ಎಂದಿದ್ದಾರೆ ರಕ್ಷಿತಾ.

ಇದನ್ನು ಕೇಳಿ ಜಡ್ಜಸ್​ ಸೇರಿ ಎಲ್ಲರೂ ಬಿದ್ದೂ ಬಿದ್ದೂ ನಕ್ಕಿದ್ದಾರೆ. ಇದೇ ಷೋನಲ್ಲಿ ಅಜ್ಜಿ ಪಾತ್ರದಲ್ಲಿ ರಕ್ಷಿತಾ ಶೆಟ್ಟಿ ನಟಿಸಿದ್ದಾರೆ. ಅಲ್ಲಿಯೂ ಅವರ ಅರೆಬರೆ ಕನ್ನಡದಿಂದ ಒಮ್ಮೆ ಕಾಮಿಡಿ ಸೀನ್​ ಕ್ರಿಯೇಟ್​ ಆಗಿದೆ. ಅದನ್ನು ಕಲರ್ಸ್​ ವಾಹಿನಿ ಶೇರ್​ ಮಾಡಿಕೊಂಡಿದೆ.

ಈ ಹಿಂದೆ ರಕ್ಷಿತಾ ತಾವು ಮದುವೆಯಾಗುವ ಹುಡುಗ ರೈತನ ಮಗ ಆಗಿರಬೇಕು ಎನ್ನುವ ಮೂಲಕ ಎಲ್ಲರ ಮಸನ್ಸನ್ನು ಗೆದ್ದಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿ ಆದ ಬಳಿಕ ತಮ್ಮದೇ ಲೆವೆಲ್​ ಹುಡುಗನ ಕನಸು ಕಾಣ್ತಾರೆ. ಆದರೆ ರಕ್ಷಿತಾ ಮಾತ್ರ ಅದನ್ನು ಬಿಟ್ಟುಕೊಟ್ಟಿಲ್ಲ ಎನ್ನುವುದಕ್ಕೆ ಸಿಕ್ಕಾಪಟ್ಟೆ ಖುಷಿ ಪಟ್ಟುಕೊಳ್ಳುತ್ತಿದ್ದಾರೆ.

Source link

Leave a Reply

Your email address will not be published. Required fields are marked *