ದಾವಣಗೆರೆಯ ನಾಲ್ವರಿಗೆ ಜೈನ ಸನ್ಯಾಸ ಧೀಕ್ಷೆ: ಸನ್ಯಾಸತ್ವ ಪಡೆಯುವುದರ ಹಿಂದಿದೆ ಈ ಬಲವಾದ ಕಾರಣ

ದಾವಣಗೆರೆಯ ನಾಲ್ವರಿಗೆ ಜೈನ ಸನ್ಯಾಸ ಧೀಕ್ಷೆ: ಸನ್ಯಾಸತ್ವ ಪಡೆಯುವುದರ ಹಿಂದಿದೆ ಈ ಬಲವಾದ ಕಾರಣ


ಇಡೀ ದೇಶವೇ ಅಚ್ಚರಿ ಪಟ್ಟು ದಿಟ್ಟ ನಿರ್ಧಾರ ತೆಗೆದುಕೊಂಡ ಕುಟುಂಬವೊಂದರ ಕಥೆ. ಲೈಫ್ ಅನ್ನು ಎಂಜಾಯಿ ಮಾಡಬೇಕಾದ ವಯಸ್ಸಾದವರು ಅವರದ್ದು, ಆದರೆ ಸನ್ಯಾಸತ್ವ ಸ್ವೀಕಾರ ಮಾಡುವ ಮೂಲಕ ಆಧ್ಯಾತ್ಮಿಕತೆ ಕಡೆ ಸಾಗಿರುವುದು ಇಡೀ ಜಿಲ್ಲೆಯನ್ನೇ ಅಚ್ಚರಿಗೊಳಿಸಿದೆ. ಇದು ದಾವಣಗೆರೆ ನಗರದ ಚೌಕಿಪೇಟೆಯಲ್ಲಿ ನಡೆದ ಘಟನೆ. ಈ ಪ್ರದೇಶವನ್ನು ದೊಡ್ಡ ವಾಣಿಜ್ಯ ಪ್ರದೇಶ ಎಂದು ಕರೆಯುತ್ತಾರೆ. ಇಲ್ಲಿನ ಜೈನ ಮಂದಿರದ ಬಳಿ ವಿಶೇಷವಾದ ಸಂಭ್ರಮ, ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು ಹಬ್ಬಕ್ಕೆ ಬಂದವರು ಯುವ ಸಮೂಹ, ಜೈನ ಗುರು ಆಚಾರ್ಯ ಅಭಯ್ ಶೇಖರ್ ಸುರೀಶ್ವರ ಮಹಾರಾಜ್ ಅವರು ಸಮ್ಮುಖದಲ್ಲಿ ನಾಳೆ (ಮಾ.4) ಸನ್ಯಾಸ ಧೀಕ್ಷೆ ನೀಡಲಿದ್ದಾರೆ.

ಧೀಕ್ಷೆಗೂ ಮೊದಲು ರಾಜಬೀದಿಯಲ್ಲಿ ಸನ್ಯಾಸತ್ವ ಪಡೆಯುವ ಭವ್ಯ ಮೆರವಣಿಗೆಯಲ್ಲಿ ಬರುತ್ತಾರೆ. ಮೊದಲೇ ಇದರಲ್ಲಿ ದೀಕ್ಷೆ ಪಡೆಯುವವರು 30 ವರ್ಷದ ಕ್ರುನಾಲಿ ಬೇನ್, ದಾವಣಗೆರೆ ನಗರದ ಕಮಲೇಶ್ ಜೈನ್ ಹಾಗೂ ಬಬಿತಾ ಜೈನ್ ದಂಪತಿಗಳ ಪುತ್ರಿ. ಕ್ರುನಾಲಿ ಜೈನ್ ಪುಣೆಯ ಸಿಂಬಸ್ ಕಾಲೇಜಿನಿಂದ ಎಂಬಿಎ ಮುಗಿಸಿ ಓದಿ ಮುಗಿದ ಬಳಿಕ ಸನ್ಯಾಸತ್ವಕ್ಕೆ ಮುಂದಾಗಿದ್ದಾರೆ. ಇನ್ನು ಎರಡನೇಯವರು 28 ವರ್ಷದ ದೀಕ್ಷಿತ ಬೆನ್. ಅರುಣ್ ಕುಮಾರ್ ಜೈನ್- ಅನ್ನಪೂರ್ಣ ಬಾಯಿ ದಂಪತಿಗಳ ಪುತ್ರಿ. ಇವರು ದಾವಣಗೆರೆಯಲ್ಲಿ ಬಿಕಾಂ ಮುಗಿಸಿದ್ದಾರೆ. ಈ ಇಬ್ಬರು ಕೋಟ್ಯಾಧೀಶ್ವರರ ಮಕ್ಕಳು. ಮೇಲಾಗಿ ಉನ್ನತ ಶಿಕ್ಷಣ ಪಡೆದವರು. ಸನ್ಯಾಸತ್ವ ಸ್ವೀಕರಿಸಿದ್ರೆ ಮಾತ್ರ ಸುಖ ಎಂದು ಈ ಯುವತಿಯರು ಹೇಳುತ್ತಾರೆ.

ಇನ್ನು ಈ ಇಬ್ಬರು ಯುವತಿಯರು ಸನ್ಯಾಸತ್ವ ಸ್ವೀಕರಿಸಿದ ನಂತರ, ಮತ್ತೆ 52 ವರ್ಷ ಭಾರತ್ ಜೈನ್ ಹಾಗೂ 50 ವರ್ಷದ ಆರತಿ ಬೆನ್ ಅವರಿಗೆ ಸನ್ಯಾಸತ್ವ ನೀಡಲಾಗುವುದು. ದಾವಣಗೆರೆಯ ಲಲಿತ್ ಗಾರ್ಮೇಟ್. ಎಲ್ಲವನ್ನ ಬಿಟ್ಟು ಆಧ್ಯಾತ್ಮದ ಕಡೆ ಬಂದಿದ್ದಾರೆ. ಇಲ್ಲಿ ಇನ್ನೊಂದು ವಿಶೇಷ ಅಂದ್ರೆ ಈ ದಂಪತಿಗಳಿಗೆ ಇಬ್ಬರು ಗಂಡ ಮಕ್ಕಳಿದ್ದರು. ಅವರಿಬ್ಬರೂ ಮೂರು ವರ್ಷದ ಹಿಂದೆ ಜೈನ್ ಸನ್ಯಾಸತ್ವ ದೀಕ್ಷೆಯನ್ನು ಪಡೆದಿದ್ದಾರೆ. ಈಗ ಅವರ ಹೆಸರು ಮಗ್ನಶೇಖರ್ ವಿಜಯ್ ಜಿ ಮಹಾರಾಜ್ ಹಾಗೂ ಪೂರ್ಣ ಶೇಖರ್ ವಿಜಯ್ ಜಿ ಮಹಾರಾಜ್ ಎಂದಾಗಿದೆ. ಹೀಗೆ ಇದ್ದ ಇಬ್ಬರು ಗಂಡು ಮಕ್ಕಳು ಸನ್ಯಾಸ ಸ್ವೀಕರಿಸಿ ಮೂರು ವರ್ಷವಾಗಿದೆ. ಈಗ ತಂದೆ ತಾಯಿ ಸಹ ಇದೆ ದಾರಿ ಹಿಡಿದಿದ್ದಾರೆ. ಜೀವನ ನೋಡಿ ಬಿಟ್ಟಿದ್ದೇನೆ. ಇನ್ನೇನಿದ್ದರು ಈ ಜೀವ ದೇವರ ಸೇವೆ ಎಂದು ಹೇಳಿದರು.

ಇದನ್ನೂ ಓದಿ: ದಾವಣಗೆರೆಯ ಜೈನ ಸಮಾಜದ ನಾಲ್ವರಿಂದ ಸನ್ಯಾಸ ದೀಕ್ಷೆ ಸ್ವೀಕಾರ

ಕಳೆದ ಕೆಲವು ದಿನಗಳ ಹಿಂದೆ ರ್ಯಾಂಕ್ ವಿಜೇತ ಇಂಜಿರಿಂಗ್ ಓದಿದವಳು ಸನ್ಯಾಸಿನಿ ಆಗ ಧೀಕ್ಷೆ ಪಡೆದಿದ್ದಳು. ಮುಂದಿನ ವಾರದಲ್ಲಿ ಇನ್ನು ನಾಲ್ವರು ಯುವತಿಯರು ದೀಕ್ಷೆಗೆ ಸಜ್ಜಾಗಿದ್ದಾರೆ. ಹೀಗೆ ಯುವ ಜನಾಂಗ ಇಂತಹ ಆಧುನಿಕ ಯುಗದಲ್ಲಿ ಸನ್ಯಾಸದಂತಹ ಅತ್ಯಂತ ಕಠಿಣ ವೃತದ ಜೀವನಕ್ಕೆ ಮುಂದಾಗುವುದು ಅಚ್ಚರಿ ಮೂಡಿಸಿದೆ. ಬರಿಗಾಲಿನಲ್ಲಿ ನಡಿಗೆಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರವಾಸ ಮಾಡಬೇಕು. ಸೂರ್ಯೋದಯಕ್ಕೆ ಮೊದಲು ಸೂರ್ಯಾಸ್ತದ ನಂತರ ಆಹಾರ ಸೇವನೆ ನಿಷೇಧ. ಇಂತಹ ದಿಟ್ಟ ನಿರ್ಧಾರಕ್ಕೆ ನಿಖರ ಕಾರಣ ಮಾತ್ರ ನಿಗೂಢವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 10:21 pm, ಮಂಗಳವಾರ, 3 ಮಾರ್ಚ್ 26



Source link

Leave a Reply

Your email address will not be published. Required fields are marked *