Israeli strikes ನೇಮಕಗೊಂಡ ಒಂದೇ ದಿನಕ್ಕೆ ಇರಾನ್ ನೂತನ ರಕ್ಷಣಾ ಸಚಿವ ಸಯ್ಯೆದ್ ಮಜೀದ್ ಹತ್ಯೆ ವರದಿ | Iran New Defence Minister Killed In Us Israel Airstrike Day After Appointment Report

Israeli strikes ನೇಮಕಗೊಂಡ ಒಂದೇ ದಿನಕ್ಕೆ ಇರಾನ್ ನೂತನ ರಕ್ಷಣಾ ಸಚಿವ ಸಯ್ಯೆದ್ ಮಜೀದ್ ಹತ್ಯೆ ವರದಿ | Iran New Defence Minister Killed In Us Israel Airstrike Day After Appointment Report



Israeli strikes ನೇಮಕಗೊಂಡ ಒಂದೇ ದಿನಕ್ಕೆ ಇರಾನ್ ನೂತನ ರಕ್ಷಣಾ ಸಚಿವ ಸಯ್ಯೆದ್ ಮಜೀದ್ ಹತ್ಯೆ ವರದಿ | Iran New Defence Minister Killed In Us Israel Airstrike Day After Appointment Report

ನೇಮಕಗೊಂಡ ಒಂದೇ ದಿನಕ್ಕೆ ಇರಾನ್ ನೂತನ ರಕ್ಷಣಾ ಸಚಿವ ಸಯ್ಯೆದ್ ಮಜೀದ್ ಹತ್ಯೆ ವರದಿಯಾಗಿದೆ. ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ಜಂಟಿ ದಾಳಿ ನಡೆಸಿದೆ. ಈ ವೇಳೆ ಪ್ರಯಾಣಿಕರ ವಿಮಾನವೂ ಧ್ವಂಸಗೊಂಡಿದೆ. 

ಟೆಹರಾನ್ (ಮಾ.03) ಇರಾನ್ ಅಕ್ಷರಶಃ ತತ್ತರಿಸಿ ಹೋಗಿದೆ. ಇಸ್ರೇಲ್ ಹಾಗೂ ಅಮೆರಿಕ ನಡೆಸುತ್ತಿರುವ ದಾಳಿಯಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟೇ ಅಲ್ಲ ಇರಾನ್ ಪ್ರಮುಖರೇ ಬಲಿಯಾಗುತ್ತಿದ್ದಾರೆ. ಇರಾನ್ ಸೇನಾ ಮುಖ್ಯಸ್ಥನ ಬೆನ್ನಲ್ಲೇ ಸರ್ವೋಚ್ಚ ನಾಯಕ ಅಯತೊಲ್ಲ ಖಮೇನಿಯನ್ನು ಹತ್ಯೆ ಮಾಡಲಾಗಿತ್ತು. ಇದೀಗ ಇರಾನ್ ನೂತನವಾಗಿ ನೇಮಕ ಮಾಡಿದ ರಕ್ಷಣಾ ಸಚಿವ ಸಯ್ಯದ್ ಮಜೀದ್ ಎಬಾ ಅಲ್ ರೆಜಾ ಹತ್ಯೆಯಾಗಿದ್ದಾರೆ. ಅಮೇರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ನೂತನ ಸಚಿವ ಹತ್ಯೆಯಾಗಿರುವುದಾಗಿ ಸ್ಪೆಕ್ಟೇಟರ್ ಇಂಡೆಕ್ಸ್ ವರದಿ ಮಾಡಿದೆ.

ಎರಡು ದಿನದ ಹಿಂದೆ ಇಸ್ರೇಲ್ ಹಾಗೂ ಅಮೆರಿಕ ದಾಳಿಗೆ ಇರಾನ್ ರಕ್ಷಣಾ ಸಚಿವ ಅಮಿರ್ ನಾಸಿರ್‌ಜದೇಹ್ ಹತ್ಯೆಯಾಗಿದ್ದರು. ಹೀಗಾಗಿ ಇರಾನ್ ಹಂಗಾಮಿ ನಾಯಕನ ಆಯ್ಕೆ ವೇಳೆ ನೂತನ ರಕ್ಷಣಾ ಸಚಿವರಾಗಿ ಸಯ್ಯದ್ ಮಜೀದ್ ಎಬಾ ಅಲ್ ರೆಜಾ ಆಯ್ಕೆ ಮಾಡಲಾಗಿತ್ತು. ಆಯ್ಕೆಯಾದ ಒಂದೇ ದಿನಕ್ಕೆ ಇಸ್ರೇಲ್ ಹಾಗೂ ಅಮೆರಿಕ ಟಾರ್ಗೆಟ್ ಮಾಡಿ ದಾಳಿ ನಡೆಸಿ ಹತ್ಯೆ ಮಾಡಿದೆ ಎಂದು ವರದಿಯಾಗಿದೆ.

4 ದಿನದಲ್ಲಿ 1,700 ಏರ್‌ಸ್ಟ್ರೈಕ್

ಕಳೆದ ನಾಲ್ಕು ದಿನದಿಂದ ಇಸ್ರೇಲ್ ಹಾಗೂ ಅಮೆರಿಕ ಸತತ ದಾಳಿ ನಡೆಸುತ್ತಿದೆ. ನಾಲ್ಕು ದಿನದಲ್ಲಿ 1,700 ಏರ್‌ಸ್ಟ್ರೈಕ್ ನಡೆಸಿದೆ. ಈ ಕುರಿತು ಡೋನಾಲ್ಡ್ ಟ್ಕಂಪ್ ಹೇಳಿದ್ದಾರೆ. ಇರಾನ್ ಬಳಿಕ ದಾಳಿ ನಡೆಸಲು ಶಸ್ತ್ರಾಸ್ತ್ರಗಳು ಖಾಲಿಯಾಗುತ್ತಿದೆ. ಈಗ ಮಾತುಕತೆಗೆ ಮುಂದಾಗಿದ್ದಾರೆ. ಆದರೆ ಸಮಯ ಮೀರಿ ಹೋಗಿದೆ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ದಾಳಿ ಮುಂದುವರಿಯಲಿದೆ ಎಂದು ಟ್ರಂಪ್ ಸಂದೇಶ ರವಾನಿಸಿದ್ದಾರೆ.

ಇರಾನ್‌ನಲ್ಲಿ ಇದೀಗ ಆತಂಕ ಹೆಚ್ಚಾಗುತ್ತಿದೆ. ಇರಾನ್ ಪ್ರಮುಖ ನಾಯಕರನ್ನೇ ಟಾರ್ಗೆಟ್ ಮಾಡಿ ಇಸ್ರೇಲ್ ಅಮೆರಿಕ ದಾಳಿ ನಡೆಸುತ್ತಿದೆ. ಸತತ ಸಭೆಗಳು ನಡೆಯುತ್ತಿದೆ. ಇದೇ ವೇಳೆ ಇರಾನ್ ಪ್ರತಿ ದಾಳಿ ನಡೆಸುತ್ತಿದೆ. ಅಮೆರಿಕಾ ಸೇನಾ ನೆಲಗಳನ್ನು, ರಾಯಬಾರ ಕಚೇರಿಗಳನ್ನು ಟಾರ್ಗೆಟ್ ಮಾಡಿ ದಾಳ ಮಾಡುತ್ತಿದೆ. ಇಸ್ರೇಲ್ ಪ್ರಮುಖ ನಗರಳ ಮೇಲೆ ಮಿಸೈಲ್ ದಾಳಿ ನಡೆಸುತ್ತಿದೆ ಟೆಲ್ ಅವೀವ್ ಸೇರಿದಂತೆ ಕೆಲ ನಗರದ ಮೇಲೆ ಇರಾನ್ ದಾಳಿ ಮಾಡಿದೆ. ಇದೀಗ ಅಮೆರಿಕದ ಮೇಲೆ ದಾಳಿ ಮಾಡಲು ಇರಾನ್ ಮುಂದಾಗಿದೆ ಅನ್ನೋ ಮಾಹಿತಿಯನ್ನು ಅಮೆರಿಕಾ ಗುಪ್ತಚರ ಇಲಾಖೆ ಸೂಚಿಸಿದೆ.



Source link

Leave a Reply

Your email address will not be published. Required fields are marked *