ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಮ್ಯಾಚ್ ಫಿಕ್ಸ್ ಆಯ್ತು; ಆದ್ರೆ ಕಾಲ್ತುಳಿತದಲ್ಲಿ ಸತ್ತ 11 ಜನರ ಕೇಸ್ ಏನಾಯ್ತು?

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಮ್ಯಾಚ್ ಫಿಕ್ಸ್ ಆಯ್ತು; ಆದ್ರೆ ಕಾಲ್ತುಳಿತದಲ್ಲಿ ಸತ್ತ 11 ಜನರ ಕೇಸ್ ಏನಾಯ್ತು?

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಮ್ಯಾಚ್ ಫಿಕ್ಸ್ ಆಯ್ತು; ಆದ್ರೆ ಕಾಲ್ತುಳಿತದಲ್ಲಿ ಸತ್ತ 11 ಜನರ ಕೇಸ್ ಏನಾಯ್ತು?

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ ಪ್ರಕರಣವೇ ಅಂತಿಮವಾಗಿಲ್ಲ. ಹೀಗಿರುವಾಗಲೇ ಆರ್‌ಸಿಬಿ ಮತ್ತೆ ಇದೇ ಕ್ರೀಡಾಂಗಣದಲ್ಲಿ ಆಟವಾಡಲು ಗ್ರೀನ್ ಸಿಗ್ನಲ್ ನೀಡಿದೆ. ಹಾಗಾದರೆ, ಕಾಲ್ತುಳಿತದ ಸಾವಿನ ಕೇಸ್ ಏನಾಯ್ತು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.

ಬೆಂಗಳೂರು (ಮಾ.03): ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ ಟಿ-20 ಕ್ರಿಕೆಟ್ ಟ್ರೋಫಿ ಗೆದ್ದ ಸಂಭ್ರಮಾಚರಣೆ ಆಯೋಜನೆ ವೇಲೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ಹೊರಬೀಳುವ ಮೊದಲೇ ಇದೀಗ ಆರ್‌ಸಿಬಿ ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯವನ್ನಾಡಲು ಒಪ್ಪಿಗೆ ಸೂಚಿಸಿದೆ. ಇದಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಕೂಡ ಸ್ವಾಗತ ಕೋರಿದೆ. ಆದರೆ, 11 ಜನ ಕಾಲ್ತುಳಿತದಲ್ಲಿ ಸತ್ತವರ ಕೇಸ್ ಏನಾಗಿದೆ ಎಂಬುದರ ಸಂಪೂರ್ಣ ರಿಪೋರ್ಟ್ ಇಲ್ಲಿದೆ ನೋಡಿ.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ ಬಲಿಯಾದವರ ಪ್ರಕರಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಡಿಎನ್ಎ ಎಂಟರ್ಟೈನ್‌ಮೆಂಟ್ ಸಂಸ್ಥೆಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಪ್ರಕರಣದ ತನಿಖಾ ವರದಿ ಅಥವಾ ಆರೋಪಪಟ್ಟಿ (Chargesheet) ಸಲ್ಲಿಸಲು ಅನುಮತಿ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯ ಸದ್ಯಕ್ಕೆ ಪುರಸ್ಕರಿಸಿಲ್ಲ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯವೊಂದರ ವೇಳೆ ನಡೆದ ಅಸ್ತವ್ಯಸ್ತ ನಿರ್ವಹಣೆಯಿಂದಾಗಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು. ಈ ಸಂಬಂಧ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಅನ್ನು ರದ್ದುಗೊಳಿಸಬೇಕು ಎಂದು ಕೋರಿ ಆರ್‌ಸಿಬಿ ತಂಡದ ಮಾಲೀಕತ್ವದ ಸಂಸ್ಥೆ, ಕೆಎಸ್‌ಸಿಎ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯಾದ ಡಿಎನ್‌ಎ (DNA) ಹೈಕೋರ್ಟ್ ಮೆಟ್ಟಿಲೇರಿದ್ದವು.

ಇಂದು ವಿಚಾರಣೆ ನಡೆದ ವೇಳೆ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ (SPP) ಬಿ.ಟಿ. ವೆಂಕಟೇಶ್ ಅವರು, ತನಿಖೆ ಪೂರ್ಣಗೊಂಡಿದ್ದು ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡಬೇಕು ಎಂದು ಮಧ್ಯಂತರ ಅರ್ಜಿ ಸಲ್ಲಿಸಿದರು. ಇದಕ್ಕೆ ಆರ್‌ಸಿಬಿ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಅಂತಿಮ ವರದಿ ಸಲ್ಲಿಸದಂತೆ ಈಗಾಗಲೇ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ನಮ್ಮ ಎಫ್‌ಐಆರ್ ರದ್ದತಿ ಅರ್ಜಿಯನ್ನು ಮೊದಲು ತೀರ್ಮಾನಿಸಬೇಕು. ಆ ಬಳಿಕವಷ್ಟೇ ಆರೋಪಪಟ್ಟಿಯ ಬಗ್ಗೆ ಚರ್ಚಿಸಬಹುದು’ ಎಂದು ವಾದಿಸಿದರು.

ವಿಚಾರಣೆ ವೇಳೆ ಅರ್ಜಿದಾರ ಸಂಸ್ಥೆಗಳ ಪರ ವಕೀಲರು ಪ್ರಮುಖವಾದ ಒಂದು ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದರು. ‘ಕಾಲ್ತುಳಿತ ಸಂಭವಿಸಿದ್ದು ಕ್ರೀಡಾಂಗಣದ ಒಳಗೆ ಅಲ್ಲ, ಬದಲಾಗಿ ಹೊರಗಡೆ. ಕ್ರೀಡಾಂಗಣದ ಹೊರಗಿನ ಕಾನೂನು ಸುವ್ಯವಸ್ಥೆ ಮತ್ತು ಜನದಟ್ಟಣೆ ನಿರ್ವಹಣೆ ಮಾಡುವುದು ಪೊಲೀಸರ ಜವಾಬ್ದಾರಿಯಾಗಿರುತ್ತದೆ. ಹೀಗಾಗಿ ಹೊರಗಡೆ ನಡೆದ ಅನಾಹುತಕ್ಕೆ ಆಯೋಜಕ ಸಂಸ್ಥೆಗಳನ್ನು ಅಥವಾ ಆರ್‌ಸಿಬಿ ತಂಡವನ್ನು ಹೊಣೆಗಾರರನ್ನಾಗಿ ಮಾಡುವುದು ಕಾನೂನುಬಾಹಿರ’ ಎಂದು ವಾದ ಮಂಡಿಸಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಪೀಠವು, ಅಂತಿಮ ವಿಚಾರಣೆಯನ್ನು ಮಾರ್ಚ್ 16ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಪೊಲೀಸರು ಅಂತಿಮ ತನಿಖಾ ವರದಿಯನ್ನು ಸಲ್ಲಿಸದಂತೆ ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಲಾಗಿದೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆಕ್ಷೇಪಣೆಗಳು ಮತ್ತು ಅಗತ್ಯ ದಾಖಲೆಗಳನ್ನು ಮಾರ್ಚ್ 14ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ಈ ತೀರ್ಪಿನಿಂದಾಗಿ ಆರ್‌ಸಿಬಿ ಮತ್ತು ಕೆಎಸ್‌ಸಿಎ ಸಂಸ್ಥೆಗಳಿಗೆ ಸದ್ಯಕ್ಕೆ ಎದುರಾಗಿದ್ದ ಕಾನೂನು ಸಂಕಷ್ಟ ಸ್ವಲ್ಪಮಟ್ಟಿಗೆ ದೂರವಾದಂತಾಗಿದೆ. ಮಾರ್ಚ್ 16ರಂದು ನಡೆಯಲಿರುವ ಅಂತಿಮ ವಿಚಾರಣೆಯಲ್ಲಿ ಎಫ್‌ಐಆರ್ ರದ್ದಾಗುತ್ತದೆಯೇ ಅಥವಾ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಲು ಹಸಿರು ನಿಶಾನೆ ಸಿಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

Source link

Leave a Reply

Your email address will not be published. Required fields are marked *