Headlines

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 4ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 4ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 4ರ ದಿನಭವಿಷ್ಯ

ಒಂದು ಸಣ್ಣ ಬಟ್ಟಲಿನಲ್ಲಿ ನೀರು ತೆಗೆದುಕೊಂಡು ಒಂದು ಚಿಟಿಕೆ ಅರಿಶಿನ ಹಾಕಿ ಮನೆಯ ಮೂಲೆ ಮೂಲೆಗೆ ಪ್ರೋಕ್ಷಣೆ ಮಾಡಿ. ಅರಿಶಿನವು ಗುರು ಬಲವನ್ನು ಹೆಚ್ಚಿಸಿ, ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಈ ದಿನ ಯಾರಿಗಾದರೂ ವಾದಕ್ಕೆ ಇಳಿಯಬೇಡಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ತುಂಬ ಒತ್ತಡದಲ್ಲಿಯೂ ಅದ್ಭುತವಾದ ಫಲಿತಾಂಶವನ್ನು ಪಡೆಯಲಾಗಿದೆ. ವೃತ್ತಿ ಅಥವಾ ವ್ಯವಹಾರದಲ್ಲಿ ಇರುವವರು ಜೊತೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಅನುಕೂಲ ಮಾಡಿಕೊಡಲಾಗಿದೆ. ಬಹಳ ಸಮಯದಿಂದ ಒಂದು ಅವಕಾಶ ಎಂಬಂತೆ ಎದುರು ನೋಡುತ್ತಾ ಇದ್ದದ್ದು ಅದೀಗ ನಿಮ್ಮ ಕಡೆಗೆ ಬರುವಂಥ ಸುಳಿವು ದೊರೆಯಲಿದೆ. ಮಾನಸಿಕವಾಗಿ ಈ ದಿನ ಬಹಳ ಗಟ್ಟಿಯಾಗಿ ಇರಲಿದ್ದೇನೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಇತರರಿಗೆ ಕಷ್ಟ ಎನಿಸಿದ ವಿಷಯಗಳು ಸಹ ಅರ್ಥ ಮಾಡಿಕೊಳ್ಳುವಿರಿ. ಆಧ್ಯಾತ್ಮಿಕ ವ್ಯಕ್ತಿಯೊಬ್ಬರ ಜೊತೆಗಿನ ಒಡನಾಟದಿಂದ ನಿಮ್ಮಲ್ಲಿಯೂ ಕೆಲವು ಬದಲಾವಣೆಗಳು ಆಗುತ್ತವೆ, ಮಾನಸಿಕವಾಗಿ ಒಂದು ರೀತಿಯ ಸಮಾಧಾನ ದೊರೆಯಲಿದೆ. ಫ್ಲ್ಯಾಟ್ ಅಥವಾ ಸೈಟು ಖರೀದಿಗಾಗಿ ಹುಡುಕಾಟ ನಡೆಸುತ್ತಾ ಇರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗವಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನಿಮಗೆ ಇಷ್ಟವಾದದ್ದನ್ನು ಖರೀದಿಸಿಬಿಡಬೇಕು ಎಂಬ ಚಡಪಡಿಕೆ ನಿಮ್ಮಲ್ಲಿ ಇರಲಿದೆ. ನಿಶ್ಚಿತವಾದ ಆದಾಯ ಬರುವಂತೆ ಮಾಡಿಕೊಳ್ಳಬೇಕು ಎಂಬ ಪ್ರಯತ್ನಗಳು ಗುರಿಯತ್ತ ಸಾಗಲಿವೆ. ಶಿಕ್ಷಕರಿಗೆ ನಿಯೋಜನೆಯ ದೊಡ್ಡ ಜವಾಬ್ದಾರಿಗಳು ನಿರ್ವಹಿಸಬೇಕಾಗಿ ಬರಲಿದೆ. ಆರಂಭದಲ್ಲಿ ಅದು ನಿಮ್ಮಿಂದ ಸಾಧ್ಯವೇ ಎಂಬ ಆತಂಕವಾದರೂ ನಿಮಗೆ ಹೆಸರು ಬರುವಂಥ ಸಾಧ್ಯತೆ ಇದೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *