
ಸಂಜೆ ಸೂರ್ಯಾಸ್ತದ ನಂತರ ಮನೆಯ ಹೊಸ್ತಿಲಲ್ಲಿ ಅಥವಾ ದೇವರ ಮನೆಯಲ್ಲಿ ಎಳ್ಳೆಣ್ಣೆಯ ದೀಪ ಹಚ್ಚಿ. ಎಳ್ಳೆಣ್ಣೆಯ ದೀಪವು ಶನಿ ಮತ್ತು ಕುಜ ದೋಷಗಳನ್ನು ಕಡಿಮೆ ಮಾಡಿ, ಮೈಗ್ರೇನ್‌ನಂತಹ ನೋವುಗಳಿಂದ ಮುಕ್ತಿ ನೀಡಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ನಿಮ್ಮ ಕೆಲಸ- ಜವಾಬ್ದಾರಿ ಅಷ್ಟಕ್ಕೆ ಮಾತ್ರ ಸೀಮಿತ ಮಾಡಿಕೊಳ್ಳಿ. ಸ್ನೇಹ- ಕರುಣೆ ಹೀಗೆ ಭಾವನಾತ್ಮಕವಾಗಿ ತಳುಕು ಹಾಕಿಕೊಂಡು, ಇತರರಿಗೆ ನೆರವು ನೀಡಲು ಮುಂದಾದಾಗ ಆ ನಂತರ ಪಡಿಪಾಟಲು ಪಡುವಂತೆ ಆಗುತ್ತದೆ. ಉಳಿತಾಯದ ಉದ್ದೇಶಕ್ಕಾಗಿ ಖರೀದಿಸಿದ ಚಿನ್ನ ಅಥವಾ ಬೆಳ್ಳಿಯನ್ನು ಮಾರಾಟ ಮಾಡಿ, ಸದ್ಯದ ಹಣಕಾಸಿನ ಅಗತ್ಯವನ್ನು ಪೂರೈಸಲು ಯೋಚಿಸುತ್ತೀರಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ಷೇರು ಬಂಡವಾಳ ಹೂಡಿಕೆ ಮಾಡಿದವರಿಗೆ ಲಾಭ ಸಿಗಲಿದೆ. ಪ್ರಾಫಿಟ್ ಬುಕ್ಕಿಂಗ್ ಗೆ ನಿರ್ಧಾರ ಮಾಡುತ್ತೀರಿ. ತಾಯಿ ಜೊತೆಗೆ ಅಭಿಪ್ರಾಯ ಭೇದ-ಮನಸ್ತಪ ಇದ್ದಲ್ಲಿ ಅದನ್ನು ನಿವಾರಿಸಲು ಅವಕಾಶ ದೊರೆಯಲಿದೆ. ನೀರಿನ ಮಾರಾಟ ವ್ಯವಹಾರದಲ್ಲಿ ತೊಡಗಿರುವವರು ವಿಸ್ತರಣೆಗೆ ಆಲೋಚಿಸಿ, ಅಗತ್ಯ ಸಿದ್ಧತೆಯಲ್ಲಿ ಬಿಡುವಿಲ್ಲದಷ್ಟು ತನ್ಮಯರಾಗುತ್ತೀರಿ. ಹಲ್ಲು ನೋವಿನ ಸಮಸ್ಯೆ ತೀವ್ರವಾಗಿ ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ಸಿನಿಮಾ ರಂಗದಲ್ಲಿ ಅವಕಾಶಕ್ಕಾಗಿ ಪ್ರಯತ್ನ ಮಾಡುತ್ತಾ ಇರುವವರಿಗೆ ಆತ್ಮವಿಶ್ವಾಸ ಹೆಚ್ಚಾಗುವಂಥ ದಿನ ಇದಾಗಿರಲಿದೆ. ನಿಮ್ಮ ಸ್ನೇಹಿತರು ಬಹಳ ದೊಡ್ಡ ಸಹಾಯವನ್ನು ಮಾಡಲಿದ್ದಾರೆ. ಈ ದಿನ ಯಾವುದೇ ಕೆಲಸದಲ್ಲಿ ಮನಸಾರೆ ತೊಡಗಿಕೊಳ್ಳಿ; ನಿಮಗೆ ಎದುರಾಗುವ ಸ್ಪರ್ಧೆಯ ಬಗ್ಗೆ ಆಲೋಚನೆಯನ್ನೇ ಮಾಡುವುದಕ್ಕೆ ಹೋಗಬೇಡಿ. ಮೈಗ್ರೇನ್ ಸಮಸ್ಯೆ ಇರುವವರು ಸರಿಯಾದ ಔಷಧೋಪಚಾರದ ಬಗ್ಗೆ ಲಕ್ಷ್ಯವನ್ನು ನೀಡಿ.
ಲೇಖನ- ಸ್ವಾತಿ ಎನ್.ಕೆ.