ಮೇಷ ರಾಶಿ:
ಉದ್ಯಮಿಗಳು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಹೊಸ ಅವಕಾಶಗಳನ್ನು ಪಡೆಯುತ್ತಾರೆ. ರೊಮ್ಯಾಂಟಿಕ್ ಜೀವನ ಉತ್ತಮವಾಗಿದೆ. ಆದಾಯಕ್ಕೆ ಮೂಲವಾದುದನ್ನು ಹುಡುಕುವುದು ಭವಿಷ್ಯ ದೃಷ್ಟಿಯಿಂದ ಉತ್ತಮ. ಇಷ್ಟಪಟ್ಟವರ ಜೊತೆ ಸಮಯ ಕಳೆಯುವುದು ಕಷ್ಟವಾಗಬಹುದು. ನಿಮ್ಮ ಮನೋಬಲವು ಹೆಚ್ಚಾಗಿ ಉತ್ಸಾಹದಿಂದ ಇರುವಿರಿ. ಇನ್ನೊಬ್ಬರ ಅನುಭವವನ್ನು ನೀವು ಪಾಠವಾಗಿಸಿಕೊಳ್ಳಿ. ನಿಮ್ಮ ತಾಳ್ಮೆಯನ್ನು ಪರೀಕ್ಷಿಸಲು ಸಂದರ್ಭವು ಬರಬಹುದು.
ವೃಷಭ ರಾಶಿ:
ಸತ್ಪಾತ್ರರಿಗೆ ಸುವಸ್ತುವನ್ನು ದಾನ ಕೊಡಲು ಇಚ್ಛಿಸುವಿರಿ. ಕೆಲವೊಮ್ಮೆ ನಿಮ್ಮ ಸ್ವಭಾವವು ನಾಟಕೀಯವಾಗಿ ತೋರುವುದು. ಕಲ್ಪನೆಯಲ್ಲಿ ಕಲಿಯುವುದನ್ನು ಕಡಿಮೆ ಮಾಡಿ. ಶರೀರಪೋಷಣೆಗೆ ಬೇಕಾದ ಮಾರ್ಗವನ್ನು ತೋರಿದಿರಿ. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಒಬ್ಬರ ಬಳಿಯೇ ಎಲ್ಲವನ್ನೂ ಹೇಳಿಕೊಳ್ಳಿ. ಯಾರದೋ ಮಾತಿನಿಂದ ಹೂಡಿಕೆ ಮಾಡುವಿರಿ. ಹೃದ್ಯವಾದ ವಿಚಾರಗಳ ಕಡೆ ಗಮನವಿರಲಿ. ಯಾರ ವಿರುದ್ಧವೂ ನಷ್ಟವು ಸುಲಭವಾಗಿ ಹೋಗಲಾಗದು.
ಮಿಥುನ ರಾಶಿ:
ಸಂಗಾತಿಯನ್ನು ವಿಧವಾಗಿ ಪರೀಕ್ಷಿಸಿ. ಸುಮ್ಮನೆ ದೇಹಾಯಾಸವನ್ನು ಮಾಡಿಕೊಳ್ಳುವಿರಿ. ನಿಮ್ಮ ಮನಸ್ಸು ಮಿಂಚಿನಂತೆ ಕೆಲಸಮಾಡಬಹುದು. ನೆರೆಯವರ ಜೊತೆ ಕಲಹವು ಬೇಡ. ಕುಟುಂಬದ ಸದಸ್ಯರ ಮೇಲೆ ವಿನಾಕಾರಣ ಸಿಟ್ಟಾಗುವಿರಿ. ಮಕ್ಕಳ ಮೇಲೆ ಅಕ್ಕರೆ ಇರುವುದು. ಹೇಗಾದರೂ ಮಾಡಿ ಬೆಳೆಯಬೇಕು ಎಂಬ ಬಯಕೆ ಅತಿಯಾಗಿರುವುದು. ಸಹಾಯಕತೆಯು ಸಿಟ್ಟಾಗಿ ಪರಿಣಮಿಸಬಹುದು.
ಕರ್ಕಾಟಕ ರಾಶಿ:
ಸಂಗಾತಿಯ ಆಯ್ಕೆಯಲ್ಲಿ ಗೊಂದಲ ಇರುವುದು. ಇಂದಿನ ಶಕ್ತಿಯು ನಿಮ್ಮ ಕನಸುಗಳ ಕಡೆಗೆ ಮುಂದುವರಿಯಲು ನಿಮ್ಮನ್ನು ಪ್ರೋತ್ಸಾಹಿಸುತ್ತಿದೆ. ನಿಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸಿ. ಯಾರಿಗಾದರೂ ನಿಜವನ್ನು ತಿಳಿಸಬೇಕಾದರೆ ಮನಸ್ಸಿಗೆ ನೋವಾಗದಂತೆ ತಿಳಿಸಿ. ಅಧಿಕಾರಿಗಳಿಂದ ಆರ್ಥಿಕತೆಯ ಪರಿಶೀಲನೆ ನಡೆಯುವುದು. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವನ್ನು ಕಡಮೆ ಮಾಡಿ. ಯಾರ ಮಾತನ್ನೂ ನಂಬದ ಸ್ಥಿತಿಯನ್ನು ನೀವೇ ತಂದುಕೊಳ್ಳಿರಿ.
ಸಿಂಹ ರಾಶಿ:
ವಿಶೇಷ ವ್ಯಕ್ತಿಯ ಬಗ್ಗೆ ಜನರ ಆಸಕ್ತಿ. ನಿಮ್ಮ ಒತ್ತಡವನ್ನು ಸಹೋದ್ಯೋಗಿಗಳ ಮೇಲೆ ಹಾಕಿ ಸ್ವಲ್ಪ ಹಗುರಾಗಬಹುದು. ಉದ್ಯೋಗದ ಕಾರಣಕ್ಕೆ ಪ್ರವಾಸ ಮಾಡಬೇಕಾಗಬಹುದು. ನೀವೇ ಆಶ್ಚರ್ಯವಾಗುವಂತೆ ಆಕರ್ಷಕವಾಗಿ ನೀವು ಇಂದು ಕಾಣುತ್ತೀರಿ. ಶ್ರಮಪಟ್ಟು ಆರಂಭಿಸಿದ ಕಾರ್ಯಗಳು ಪಿತೂರಿಯಿಂದ ಅರ್ಧಕ್ಕೆ ಸ್ಥಗಿತವಾಗಬಹುದು. ನಿಮ್ಮ ದೌರ್ಬಲ್ಯವು ಶತ್ರುಗಳನ್ನು ಬಳಸಿಕೊಳ್ಳುತ್ತದೆ. ಎಂದೋ ಬಯಸಿದ ವಸ್ತುವು ಇಂದು ನಿಮಗೆ ಅನಿರೀಕ್ಷಿತವಾಗಿ ಸಿಗುವುದು.
ಕನ್ಯಾ ರಾಶಿ:
ಆರ್ಥಿಕ ಪರಿಸ್ಥಿತಿ ದೃಢವಾಗಿ ಉಳಿಯುತ್ತದೆ. ಕೆಲಸದ ಸ್ಥಳದಲ್ಲಿ ಹೊಸ ಬದಲಾವಣೆಗಳಾಗಲಿವೆ. ಕೆಲಸದ ಒತ್ತಡ ಹೆಚ್ಚಾಗಲಿದೆ. ವೃತ್ತಿ ಸಮಸ್ಯೆಗಳನ್ನು ಪರಿಹರಿಸಲು ಹಿರಿಯರ ಸಹಾಯ ಪಡೆಯಿರಿ. ವಿದೇಶೀಯ ವಸ್ತುಗಳ ಬಳಕೆಯನ್ನು ಮಾಡುವುದು ಕಾರಣಾಂತರಗಳಿಂದ ಇಷ್ಟವಾಗದು. ನಿಮ್ಮ ಸಹಾಯಕತೆಯನ್ನು ಮನೆಯವರ ಮುಂದೆ ಹೇಳಿಕೊಳ್ಳಿ. ಬಂಧುಗಳ ಜೊತೆ ನಿಮ್ಮ ಬಾಂಧವ್ಯವು ಗಟ್ಟಿಯಾಗಿ ಇರುವುದು. ನಿಮ್ಮ ಆದಾಯಕ್ಕೆ ತಕ್ಕಂತೆ ಜೀವನವಿರಲಿದೆ.
ತುಲಾ ರಾಶಿ:
ಹೊಸ ಆಸ್ತಿ ಅಥವಾ ಮನೆಯನ್ನು ಖರೀದಿಸುವುದು ಇಂದು ಸಾಧ್ಯ. ಕೆಲಸದಿಂದ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ. ಮನೋವಿಕಾರವನ್ನು ಕಡಿಮೆ ಮಾಡಿಕೊಳ್ಳಿ. ವಿದ್ಯಾರ್ಥಿಗಳು ತಮಗೆ ಬರುವ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬಹುದು. ಎಲ್ಲ ಕೆಲಸಕ್ಕೂ ಬೇರೆಯವರನ್ನು ಅವಲಂಬಿಸಿ ಆರ್ಥಿಕ ನಷ್ಟವನ್ನು ಕಾಣಬೇಕಾಗಬಹುದು. ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಯಾರಿಗೂ ಬಿಡುವುದಿಲ್ಲ. ನಿಮ್ಮ ಸಹಕಾರವನ್ನು ಬಂಧಗಳು ಮರೆಯಬಹುದು.
ವೃಶ್ಚಿಕ ರಾಶಿ:
ಹೇಳಿಕೊಳ್ಳುವಷ್ಟು ಆದಾಯವಿಲ್ಲದಿದ್ದರೂ ಅಹಂಕಾರಕ್ಕೇನು ಕೊರತೆ ಇರದು. ನಿಮ್ಮ ಮಾತಿನಿಂದ ಶತ್ರುಗಳು ಹುಟ್ಟಿಕೊಳ್ಳಬಹುದು. ಇಂದು ಕೆಲಸದ ಮೇಲೆ ಗಮನಹರಿಸಲು ನಿಮಗೆ ಸೂಚಿಸಲಾಗಿದೆ. ನೀವು ಶೈಕ್ಷಣಿಕ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಶತ್ರುವನ್ನು ಉಪಾಯದಿಂದ ಗೆಲ್ಲುವ ತಂತ್ರ ಬಳಸಿ. ಅಳತೆಯನ್ನು ಅರಿತು ವ್ಯವಹರಿಸುವುದು ಎಲ್ಲ ದೃಷ್ಟಿಯಿಂದ ಉತ್ತಮ. ನಿಧಾನವಾಗಿ ವರ್ಧಿಸುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ.
ಧನು ರಾಶಿ:
ಸ್ನೇಹಿತರ ನಿರೀಕ್ಷೆಯಲ್ಲಿ ಹೆಚ್ಚಿನ ಸಮಯ ಕಳೆದುಹೋಗುವುದು. ಅಪರಿಚಿತರ ಮೂಲಕ ನಿಮ್ಮ ಹಣವನ್ನು ಕಳೆದುಕೊಳ್ಳಲಾಗಿದೆ. ಮನೆಯ ನಿರ್ವಹಣೆಯನ್ನೂ ಮಾಡಲಾಗದು. ವೃತ್ತಿಯಲ್ಲಿ ಇಂದು ನಿಮಗೆ ವಿರಾಮವು ಸಿಗದೇ ನಿಮ್ಮ ಸ್ವಂತ ಕಾರ್ಯವನ್ನು ಕೈ ಬಿಡಬೇಕಾಗುವುದು. ಗೃಹ ನಿರ್ಮಾಣದ ಕಾರ್ಯವನ್ನು ಕೆಲವು ದಿನ ಮುಂದೂಡುವುದು ಉತ್ತಮ. ಮಕ್ಕಳಿಂದ ದೂರವಾಗಬಹುದು. ಹಣದ ಕೊರೆತೆ ಇಲ್ಲದಿದ್ದರೂ ಹಳೆಯ ಮನೆಯನ್ನೇ ಅವಶ್ಯಕತೆಗೆ ಸರಿಯಾಗಿ ಗಟ್ಟಿ ಮಾಡಿಕೊಳ್ಳಿ.
ಮಕರ ರಾಶಿ:
ಸಂಗಾತಿಯ ಸಂಪತ್ತಿನಿಂದ ನಿಮಗೆ ಬೇಕಾದುದನ್ನು ಪಡೆಯುವಿರಿ. ಅತಿಯಾದ ಬಾಯಾರಿಕೆ ಆಗಬಹುದು. ಯಾರ ಮಾತನ್ನು ಒಪ್ಪಿಕೊಳ್ಳದೇ ನಿಮ್ಮದೇ ಆದ ದಾರಿಯಲ್ಲಿ ನಡೆಯುವಿರಿ. ಕೆಲಸದ ಕೆಲಸದಲ್ಲಿ ನಿಮ್ಮ ಮಧ್ಯೆ ಅನಗತ್ಯ ಪ್ರವೇಶದಿಂದ ಕೋಪಗೊಳ್ಳುವಿರಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಉತ್ತಮ. ನಿಮ್ಮ ವಿನ್ಯಾಸಗಳಿಗೆ ಅನುಮೋದನೆ ಸಿಗದೇ ಇರಬಹುದು. ವಿದ್ಯಾರ್ಥಿಗಳ ಉತ್ಸಾಹವನ್ನು ಕುಗ್ಗಿಸುವುದು ಬೇಡ. ಸರಿಯಾದ ಮಾರ್ಗವನ್ನು ತೋರಿಸಿ. ನಿಮ್ಮ ಮಕ್ಕಳ ವರ್ತನೆಯಿಂದ ಬೇಸರ ಆಗುವುದು.
ಕುಂಭ ರಾಶಿ:
ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗಲಿದೆ. ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಶಿಕ್ಷಣ ಕ್ಷೇತ್ರದಲ್ಲಿ ಅನುಕೂಲಕರವಾಗಿದ್ದರೂ ಅದನ್ನು ಬಳಸಿಕೊಳ್ಳುವ ಜಾಣತನವೂ ಅಗತ್ಯ. ನಿಮ್ಮ ಬದುಕಿನ ಬದಲಾವಣೆಯನ್ನು ಅನಿವಾರ್ಯವಾಗಿ ಮಾಡಿಕೊಳ್ಳಬೇಕಾಗಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು. ಸಹೋದ್ಯೋಗಿಗಳಿಗೆ ಸಹಕರಿಸುವ ಮನಸ್ಸಾಗುವುದು. ಮೋಜಿನ ಕಾರಣಕ್ಕೆ ಸುತ್ತಾಟ ಮಾಡುವಿರಿ. ಬಂಧುಗಳ ಜೊತೆ ಅನಗತ್ಯ ವಾಗ್ವಾದ ಬೇಡ.
ಮೀನ ರಾಶಿ:
ಹಳೆಯ ದಾಂಪತ್ಯವಾದರೂ ಸಂತೋಷಕ್ಕೆ ಕೊರತೆ ಇಲ್ಲದಂತೆ ಇರುವಿರಿ. ಸಾಮಾಜಿಕ ಕಾರ್ಯಕ್ಕೆ ನಿಮ್ಮ ಕೊಡುಗೆಯನ್ನು ನೀಡುವಿರಿ. ಕಛೇರಿಯ ಕೆಲಸಗಳನ್ನು ವೇಗವಾಗಿ ಮಾಡಿ ಜವಾಬ್ದಾರಿಯನ್ನು ಮುಗಿಸಿ. ಕಾರ್ಯನಿರ್ವಹಣೆ ಅಸಾಧ್ಯವೆನಿಸುತ್ತದೆ. ಕೆಲವು ಸಂಗತಿಗಳನ್ನು ನಿರೀಕ್ಷಿಸದೇ ಬರಬಹುದು.ವವ್ಯವಹಾರದಲ್ಲಿ ಹೆಚ್ಚಿನ ಲಾಭವು ಬರಬಹುದು. ಪ್ರಸಾರ ಮಾಧ್ಯಮದವರು ದೂರ ಹೀಗಾಗಬಹುದು. ಸಾಹಿತ್ಯ ಕ್ಷೇತ್ರದಲ್ಲಿ ಇರುವವರಿಗೆ ಸಮ್ಮಾನ ಸಿಗುವುದು.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ 1148 ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಪುರಸ್ಕಾರ : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಶತಭಿಷಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ಪ್ರತಿಪತ್, ನಿತ್ಯ ಸೂರ್ಯನಕ್ಷತ್ರ : ಪೂರ್ವಾಫಲ್ಗುಣಿ, ಯೋಗ : ಸೂರ್ಯ – 6ಸ್ತೋದಯ : ಕೌಲವ – 6ಸ್ತ ಕರಣ : ಕೌಲವ, – 4. 06 – 31 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:36 – 14:05, ಯಮಗಂಡ ಕಾಲ 08:09 – 09:38, ಗುಳಿಕ ಕಾಲ 11:07 – 12:36
-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)