ನಿಧಿ ಆಸೆಗಾಗಿ ಅಪಾರ್ಟ್​​​ಮೆಂಟ್​​ನ ಬೇಸ್ಮೆಂಟ್​​ ಅಗೆದ ಬಿಲ್ಡರ್​: ವಿಡಿಯೋ ನೋಡಿ

ನಿಧಿ ಆಸೆಗಾಗಿ ಅಪಾರ್ಟ್​​​ಮೆಂಟ್​​ನ ಬೇಸ್ಮೆಂಟ್​​ ಅಗೆದ ಬಿಲ್ಡರ್​: ವಿಡಿಯೋ ನೋಡಿ


ಬೆಂಗಳೂರು, ಮಾರ್ಚ್ 04: ಇತ್ತೀಚೆಗೆ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ಇರುವಾಗ ನಿಧಿ ಇದ್ದ ವಿಚಾರ ರಾಜ್ಯಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. ಬೆಂಗಳೂರಿನಲ್ಲೊಂದು ಘಟನೆ ಬೆಳಕಿಗೆ ಬಂದಿದೆ. ನಿಧಿ ಆಸೆಗಾಗಿ ಬಿಲ್ಡರ್ ಅಪಾರ್ಟ್‌ಮೆಂಟ್ ನ ಬೇಸ್ಮೆಂಟ್ ಅಗೆದಿರುವ ಬೆಂಗಳೂರಿನ ಎಚ್‌ಆರ್‌ಎಸ್ ಲೇಔಟ್‌ನಲ್ಲಿ ಎಳ್ಳುಕುಂಟೆಯಲ್ಲಿ ಘಟನೆ ನಡೆದಿದೆ. ಸದಾ ಅಪಾರ್ಟ್‌ಮೆಂಟ್‌ನ ಬೇಸ್ಮೆಂಟ್‌ನ ಹಿಂಭಾಗದಲ್ಲಿ ಅಗೆದ ಬಿಲ್ಡರ್ ಸುಧಾಕರ್ ನಾಯ್ಡು ಎಂಬಾತನ ವಿರುದ್ಧ ಆರೋಪ ಕೇಳಿಬಂದಿದೆ. ಅಪಾರ್ಟ್‌ಮೆಂಟ್‌ನ ಹಿಂಭಾಗದಲ್ಲಿ ಹಳೆಯ ವೀರಗಲ್ಲು ಇದೆ. ಅದರ ಕೆಳಗಡೆ ನಿಧಿ ಇದೆ ಎಂದು ಸುಧಾಕರ್ ನಾಯ್ಡು ನಂಬಿದ್ದ. ಕಾಂಪೌಂಡ್‌ಗೆ ತಗಡಿನ ಶೀಟ್ ಹೊಡೆದು ಕವರ್ ಮಾಡಿ, ಅಪಾರ್ಟ್‌ಮೆಂಟ್‌ನ ಬೇಸ್ಮೆಂಟ್ ಸ್ಥಳದಲ್ಲಿ ಅಗೆದಿದ್ದಾನೆ. ಸದ್ಯ ವಿಚಾರ ಗೊತ್ತಾಗಿ ಸುಧಾಕರ್ ಗೆ ಜನರು ಕ್ಲಾಸ್ ತೆಗೆದುಕೊಂಡಿದ್ದಾರೆ. ಹೆಚ್ಎಸ್ಆರ್ ಲೇಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *