ರಾಕಿಂಗ್ ಸ್ಟಾರ್ ಯಶ್ ಅವರು ‘ಟಾಕ್ಸಿಕ್’ ಚಿತ್ರ (ವಿಷಕಾರಿ ಚಲನಚಿತ್ರ) ಮೂಲಕ ಮಿಂಚಲು ರೆಡಿ ಆಗಿದ್ದಾರೆ. ಈ ಸಿನಿಮಾ ಮಾರ್ಚ್ 19 ರಂದು ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ಅಂದರೆ ಮಾರ್ಚ್ 8ರಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ ಎಂಬ ಮಹಾತಿಯು ಲಭ್ಯವಾಗಿದೆ. ಯಶ್ ಅವರು ಇಷ್ಟು ಎತ್ತರಕ್ಕೆ ಬೆಳೆಯಲು ಅವರ ಆಲೋಚನೆಯೇ ಕಾರಣ ಎಂದರೂ ತಪ್ಪಾಗಲಾರದು. ಅವರು ಈ ಬಗ್ಗೆ ಈ ಮೊದಲು ಮಾಹಿತಿ ನೀಡಿದ್ದರು. ಈ ವಿಡಿಯೋ ಈಗ ರೀಶೇರ್ ಮಾಡುತ್ತಿದೆ.
ಯಶ್ ಅವರು ಒಂದು ಸಿನಿಮಾಗಿಂತ ಒಂದು ಸಿನಿಮಾ ಉತ್ತಮ ನೀಡುತ್ತಾ ಬಂದರು. ಬಾರಿಯೂ ಇದೆ ತಂತ್ರವನ್ನು ಅವರು ಅಳವಡಿಸಿಕೊಳ್ಳುತ್ತಾ ಬರುತ್ತಿದ್ದಾರೆ. ಯಶ್ ಅವರು ಈ ಬಾರಿಯೂ ಅದೇ ತಂತ್ರವನ್ನು ಅನುಸರಿಸಿಕೊಂಡು ಹೋಗಿದ್ದಾರೆ. ಇದು ಅವರ ಜೀವನದ ಮುಖ್ಯ ಗುರಿ ಕೂಡ ಹೌದು.
ಈ ಮೊದಲು ಯಶ್ ಅವರು, ‘ಒಂದು ಸಿನಿಮಾಗಿಂತ ಮತ್ತೊಂದು ಸಿನಿಮಾ ಚೆನ್ನಾಗಿ ಮಾತನಾಡಿದೆ. ಹಳೆಯ ಸಿನಿಮಾಗಳನ್ನು ಅವು ಮರೆಯಬೇಕು’ ಎಂದು ಯಶ್ ಈ ಮೊದಲು ಮಾತನಾಡಿದ್ದರು. ‘ಕಿರಾತಕ’ ಚಿತ್ರವನ್ನು ಗೂಗ್ಲಿ, ರಾಜಾ ಹುಲಿ ಮರೆಸಿದವು’ ಎಂದೆಲ್ಲ ಅವರು ಹೇಳಿದ್ದರು. ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರ ಮರೆಸುವ ರೀತಿಯಲ್ಲಿ ಅವರು ಟಾಕ್ಸಿಕ್ ಬಳಸುತ್ತಿದ್ದಾರೆ.
ಇದನ್ನೂ ಓದಿ: ರಿಲೀಸ್ ಗೂ ಮೊದಲೇ ಸೇಫ್ ಆದ ‘ಟಾಕ್ಸಿಕ್’; ಇನ್ನು ಬರೋದೆಲ್ಲ ಲಾಭ
‘ಟಾಕ್ಸಿಕ್’ ಚಿತ್ರಕ್ಕೆ ಮಲಾಲಂ ನಿರ್ದೇಶಕಿ ಗಿತು ಮೋಹನ್ ದಾಸ್ ಅವರ ನಿರ್ದೇಶನವಿದೆ. ಈ ಚಿತ್ರ ಸೂಪರ್ ಹಿಟ್ ಆಗುವ ಸೂಚನೆ ಅಭಿಮಾನಿಗಳಿಗೆ ಸಿಕ್ಕಿದೆ. ಗೀತು ಮೋಹನ್ ದಾಸ್ ಅವರು ಇನ್ನೂ ಕೆಲವೇ ಸಿನಿಮಾ ಮಾಡಿದ್ದಾರೆ. ಆದರೂ ಅವರನ್ನು ಯಶ್ ಏಕೆ ಆಯ್ಕೆ ಮಾಡಿದರು ಎಂಬುದು ಜನರ ಪ್ರಶ್ನೆ. ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಸೇರಿದಂತೆ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.