ಜಪಾನ್, ಮಾರ್ಚ್ 04: ಜಪಾನ್ ನ ಮೃಗಾಲಯದಲ್ಲಿರುವ ಪಂಚ್ ಕೋತಿಯ ಬಗ್ಗೆ ಈಗ ಇಡೀ ಪ್ರಪಂಚಕ್ಕೆ ಗೊತ್ತಿದೆ. ಹುಟ್ಟಿನಿಂದಲೇ ತಾಯಿ ಪ್ರೀತಿ ಕಳೆದುಕೊಂಡಿದ್ದ ಕೋತಿಗೆ ಅದರ ಬಳಿ ಇರುವ ಕೋತಿಯ ಗೊಂಬೆಯೇ ಆಸರೆ. ನೋವಾದರೂ, ಬೇಸರವೆನಿಸಿದರೂ, ಬೇರೆ ಕೋತಿಗಳು ದಾಳಿ ಮಾಡಿದರೂ ಈ ಕೋತಿ ಹೋಗಿ ಅಪ್ಪಿದ್ದು, ಆ ಗೊಂಬೆಯನ್ನೇ ಬೇರೆ ಕೋತಿಯನ್ನಲ್ಲ.
ಅದರ ಮೇಲೆ ತಲೆಯಿಟ್ಟು ಮಲಗುವ, ತಿಂಡಿ ಮಾಡುವಾಗಲೂ, ಎಲ್ಲೇ ನಡೆದಾಡುವಾಗಲೂ ಆ ಗೊಂಬೆಯನ್ನೇ ಹೊತ್ತು ತಿರುಗುವ ಕೋತಿಯಿಂದ ಆ ಗೊಂಬೆಯನ್ನು ಕಸಿದುಕೊಳ್ಳುವ ಸುದ್ದಿ ವೈರಲ್ ಆಗಿದೆ. ಆ ಗೊಂಬೆಯನ್ನು ಐಕಿಯಾದಿಂದ ಖರೀದಿಸಲಾಗಿದೆ.
ಒಂದೊಮ್ಮೆ ಆ ಗೊಂಬೆ ಅದರೊಟ್ಟಿಗಿದ್ದರೆ ಈ ಕೋತಿ ಮರಿ ಉಳಿದ ಕೋತಿಗಳ ಜೊತೆ ಸ್ನೇಹ ಬೆಳೆಸುವುದಿಲ್ಲ, ಕೊನೆಯವರೆಗೂ ಅದು ಒಂಟಿಯಾಗಿರುವ ಪ್ರಸಂಗ ಬಂದರೂ ಬರಬಹುದು ಈ ದೃಷ್ಟಿಯಿಂದ ಆ ಮತಿಯಿಂದ ಗೊಂಬೆಯನ್ನು ಹಿಂಪಡೆಯುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಆರು ತಿಂಗಳ ವಯಸ್ಸಿನಲ್ಲಿ ಈ ಕೋತಿಗಳು ಹಾಲು ಕುಡಿಯುವುದು ಬಿಡಬೇಕು ಮತ್ತು ಸ್ವತಂತ್ರವಾಗಿ ಇರಬೇಕಾದ ನಿಯಮ. ಆದ್ದರಿಂದ ಅದರ ಬಳಿ ಇರುವ ಆಟಿಕೆಯನ್ನು ಶೀಘ್ರವಾಗಿ ಹೋಗಬೇಕೆಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಈ ವಿಡಿಯೋಗೆ ವ್ಯಕ್ತಿಯೊಬ್ಬರು ಹೇಳಿದ್ದಾರೆ, ಸ್ವಲ್ಪ ದಿನ ಆಟಿಕೆ ಆದರೆ ಬಳಿಯೇ ಇರಬಹುದಲ್ಲಾ. ಇನ್ನು ಮನುಷ್ಯನ ಬಗ್ಗೆ ಮಾತನಾಡುವುದಾಗಿ ಮಕ್ಕಳು ಚಿಕ್ಕವರಿರುವಾಗಲೇ ಯಾವುದಾದರೂ ಒಂದಕ್ಕೆ ಅಡಿಕ್ಟ್ ಆದರೆ ಅದನ್ನು ಬಿಡುವುದು ಕಷ್ಟವಾಗದೆ ಕೋತಿಗಳು ಕೂಡ. ಅವರ ಬೆಳವಣಿಗೆಗೆ ಈ ಗೊಂಬೆಗಳು ಅಡ್ಡಿಯಾಗಬಹುದು. ಜಪಾನಿನ ಮಕಾಕ್ ಪ್ರಸ್ತುತ ಇಚಿಕಾವಾ ಸಿಟಿ ಮೃಗಾಲಯದಲ್ಲಿದೆ. ಆದರೆ ಮೃಗಾಲಯದಿಂದ ಇದರ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ. ಪಂಚ್‌ಗೆ ಈಗ 8 ತಿಂಗಳಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ