‘ಟಾಕ್ಸಿಕ್’ vs ‘ಧುರಂಧರ್ 2’ ಎಂಬ ಚರ್ಚೆ ಸಾಕಷ್ಟು. ಆದರೆ, ಸದ್ಯಕ್ಕೆ ‘ಟಾಕ್ಸಿಕ್’ ತಂಡ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿಕೊಂಡಿದೆ. ಇದು ಯಶ್ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ. ವಿಶ್ವ ಮಟ್ಟದಲ್ಲಿ ಮೂಡಿರುವ ಯುದ್ಧ ಭೀತಿಯ ಕಾರಣದಿಂದ ‘ಟಾಕ್ಸಿಕ್’ ರಿಲೀಸ್ ವಿಳಂಬವಾಗುತ್ತಿದೆ ಎಂದು ತಂಡ ಹೇಳಿದೆ. ಈ ಬೆಳವಣಿಗೆಯಿಂದ ‘ಧುರಂಧರ 2’ ಹಾದಿ ಸುಗಮನಾಗಿದೆ. ಹೆಚ್ಚಿನ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುವ ಅವಕಾಶವಿದೆ.
‘ಧುರಂಧರ 2’ ಹಾಗೂ ‘ಟಾಕ್ಸಿಕ್’ ಎರಡೂ ಸಿನಿಮಾಗಳು ಬಿಗ್ ಬಜೆಟ್ ಚಿತ್ರಗಳು. ಎರಡೂ ಸಿನಿಮಾಗಳಿಗೆ ಹೆಚ್ಚಿನ ಚಿತ್ರಮಂದಿರಗಳು ಬೇಕು. ಎರಡೂ ಚಿತ್ರಗಳ ಬಜೆಟ್ ದೊಡ್ಡದಾದ ಹೆಚ್ಚಿನ ಕಲೆಕ್ಷನ್ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಎಲ್ಲಾ ಕಾರಣದಿಂದ ಯಾವುದಾದರೂ ಒಂದು ಚಿತ್ರ ಮುಂದಕ್ಕೆ ಹೋಗಲೇಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡೂ ತಂಡಗಳು ಹಠ ಹಿಡಿದು ಕುಳಿತಿದ್ದವು. ಆದರೆ, ಯುದ್ಧ ಭೀತಿಯ ಕಾರಣದಿಂದ ‘ಟಾಕ್ಸಿಕ್’ ಸದ್ಯದ ರಿಲೀಸ್ ದಿನಾಂಕ ಮುಂದಕ್ಕೆ ಹಾಕಿಕೊಂಡಿದೆ.
‘ಧುರಂಧರ 2’ ಸಿನಿಮಾ ಹಿಂದಿದೆ, ಕನ್ನಡ, ತಮಿಳು, ತೆಲುಗು ಮೊದಲಾದ ಭಾಷೆಗಳಲ್ಲಿ ತೆರೆಗೆ ಬರುತ್ತಿವೆ. ಈಗ ‘ಟಾಕ್ಸಿಕ್’ ರಿಲೀಸ್ ವಿಳಂಬದಿಂದ ದಕ್ಷಿಣ ಭಾರತದಲ್ಲೂ ಚಿತ್ರಕ್ಕೆ ಹೆಚ್ಚಿನ ಥಿಯೇಟರ್ ಸಿಗಲಿದೆ. ಇವುಗಳಿಂದ ಸಿನಿಮಾ ಅಬ್ಬರದ ಕಲೆಕ್ಷನ್ ಮಾಡಬಹುದು. ಅರಬ್ ರಾಷ್ಟ್ರಗಳಲ್ಲಿ ಈ ಚಿತ್ರದ ಮೇಲೆ ಬ್ಯಾನ್ ಅಪಾಯದ ಭೀತಿ ಈ ಸಿನಿಮಾದ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ.
ಇದನ್ನೂ ಓದಿ: ‘ಧುರಂಧರ 2’ ಸಿನಿಮಾದ ಅವಧಿ ಬರೋಬ್ಬರಿ 4 ಗಂಟೆ? ರಿಸ್ಕ್ ತೆಗೆದುಕೊಂಡ ಚಿತ್ರತಂಡ
‘ಧುರಂಧರ 2’ ಸಿನಿಮಾದ ಅವಧಿ 4 ಗಂಟೆ ಇದೆ. ಇಷ್ಟು ದೀರ್ಘ ಅವಧಿ ಇಟ್ಟುಕೊಂಡು ವೀಕ್ಷಿಸಲು ಥಿಯೇಟರ್ ಗೆ ಕರೆತರೋದು ಒಂದು ದೊಡ್ಡ ಸವಾಲು. ಅದನ್ನು ಸಿನಿಮಾ ಹೇಗೆ ಎದುರಿಸುತ್ತದೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 11:46 am, ಬುಧವಾರ, 4 ಮಾರ್ಚ್ 26