ಜನವರಿ, ಮಾರ್ಚ್ 4: ಭಾರತದ ಕರಡಿ ಕುಣಿತ ಮುಂದುವರಿದಿದೆ. ಇಂದು ಬಿಎಸ್‌ಐ ಮತ್ತು ಎನ್‌ಎಸ್‌ಎಸ್‌ಇಯ ಹೆಚ್ಚಿನ ಸೂಚ್ಯಂಕಗಳು ಕೆಂಪು ಬಣ್ಣಕ್ಕೆ ತಿರುಗಿವೆ. ನಿಫ್ಟಿ, ಸೆನ್ಸೆಕ್ಸ್ ಶೇ. 2ರವರೆಗೂ ಕುಸಿತ ಕಂಡಿವೆ. ಹೂಡಿಕೆದಾರರಿಗೆ ಬರೋಬ್ಬರಿ 8 ಲಕ್ಷ ಕೋಟಿ ರೂ ನಷ್ಟ ಎದುರಾಗಿದೆ. ಇರಾನ್ ಯುದ್ಧದಿಂದಾಗಿ ಷೇರು ಕುಸಿತ ಅನಿರೀಕ್ಷಿತವೇನಲ್ಲ. ಭಾರತದಲ್ಲಿ, ವಿಶ್ವದ ಎಲ್ಲಾ ಷೇರು ಮಾರುಕಟ್ಟೆಗಳು ಹಿನ್ನಡೆ ಕಾಣುತ್ತಿವೆ.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ ಸೂಚ್ಯಂಕ 1,523 ಅಂಕ ಕಳೆದುಕೊಂಡಿತು 78,711 ಮಟ್ಟ ಮುಟ್ಟಿತ್ತು. ಬುಧವಾರದ ಟ್ರೇಡಿಂಗ್ ಒಂದು ಹಂತದಲ್ಲಿ ಸೆನ್ಸೆಕ್ಸ್ 78,528 ಅಂಕಗಳ ಮಟ್ಟ ಕುಸಿದಿತ್ತು.
ಇದನ್ನೂ ಓದಿ: ಮಹಿಳೆಯ ಘೋಷಿತ ಆದಾಯ 4.81 ಲಕ್ಷ ರೂ; ಇನ್ಶೂರೆನ್ಸ್ ಕಟ್ಟಿದ್ದು 50 ಲಕ್ಷ ರೂ; ಕೋರ್ಟ್ಗೆ ಹೋಯ್ತು ಕೇಸ್
ಒಟ್ಟಾರೆ ಸ್ಟಾಕ್ ಎಕ್ಸ್ಚೇಂಜ್ನ ನಿಫ್ಟಿ ಸೂಚ್ಯಂಕ 506 ಅಂಕಗಳನ್ನು ತೊಡೆದುಹಾಕಿ 24,359 ಮಟ್ಟಕ್ಕೆ ಇಳಿದಿದೆ. ಒಂದು ಹಂತದಲ್ಲಿ ಇದು 24,325 ಅಂಕಗಳಿಗೆ ಇಳಿದಿತ್ತು. 50 ಸ್ಟಾಕ್‌ಗಳ ಬುಟ್ಟಿಯಾದ ನಿಫ್ಟಿ, ಶೇ. 2 ಹೆಚ್ಚು ಕುಸಿತ ಕಂಡಿದೆ. ಒಂದು ಅಂದಾಜು ಪ್ರಕಾರ ಭಾರತದ
ಗೋಲ್ಡ್ ಐಟಿಎಫ್, ಸಿಲ್ವರ್ ಐಟಿಎಫ್ ಕೂಡ ಕುಸಿತ ಕಾಣುತ್ತಿವೆ. ಹೆಚ್ಚಿನ ಹೂಡಿಕೆದಾರರು ಈ ಐಟಿಎಫ್‌ಗಳಿಂದ ಹೂಡಿಕೆ ಹಿಂಪಡೆಯುತ್ತಿರುವ ಟ್ರೆಂಡ್ ಇದೆ. ಷೇರುಪೇಟೆಯ ಭಯದ ಸೂಚಕವಾಗಿರುವ ವಿಐಎಕ್ಸ್ 20ರ ಮಟ್ಟ ಭಾರತ ದಾಟುತ್ತಿದೆ. ಇದು ಹೂಡಿಕೆದಾರರು ಆತಂಕದಲ್ಲಿರುವುದನ್ನು ಸೂಚಿಸುತ್ತದೆ.
ಇದನ್ನೂ ಓದಿ: ಎನ್ ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್; ಇದು ರಿಟೈರ್ಮೆಂಟ್ ಗೂ ಸೈ, ಹೆಲ್ತ್ಕೇರ್ ವೆಚ್ಚಕ್ಕೂ ಸೈ; ಹೇಗೆ ಕೆಲಸ ಮಾಡುತ್ತೆ ಈ ಹೈಬ್ರಿಡ್ ಸ್ಕೀಮ್?
ಷೇರು ಮಾರುಕಟ್ಟೆ ಕುಸಿಯುತ್ತಿರುವುದೇಕೆ?
- ಪಶ್ಚಿಮ ಏಷ್ಯಾದಲ್ಲಿ ಸಂಭವಿಸುತ್ತಿರುವುದು ಎಲ್ಲರನ್ನೂ ಚಿಂತಿತ ಯುದ್ಧ ಮಾಡುತ್ತಿದೆ.
- ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಾಗಣೆಗೆ ತಡೆಯಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದೆ.
- ಜಾಗತಿಕ ಮಾರುಕಟ್ಟೆಗಳು ಹಿನ್ನಡೆಯಲ್ಲಿವೆ. ಅದರಲ್ಲೂ ಏಷ್ಯನ್ ಸೂಚ್ಯಂಕಗಳು ತೀವ್ರ ಒತ್ತಡದಲ್ಲಿವೆ. ಇದು ಭಾರತೀಯ ಮಾರುಕಟ್ಟೆ ಮೇಲೂ ಪರಿಣಾಮ ಬೀರುತ್ತಿರಬಹುದು.
- ಡಾಲರ್ ಎದುರು ರುಪಾಯಿ ಮೌಲ್ಯ ಹೊಸ ದಾಖಲೆ ಮಟ್ಟಕ್ಕೆ ಕುಸಿದಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ