3 ಕೋಟಿ Subscribes ದಾಟಿದ ವಿಶ್ವದ ಏಕೈಕ ನಾಯಕ ಪ್ರಧಾನಿ ಮೋದಿ, Youtube ಚಾನೆಲ್‌ನಿಂದ ಕೋಟಿ ಕೋಟಿ ಆದಾಯ ಬರುತ್ತಿದೆಯೇ? | Pm Modi Youtube Channel Crosses 30m Subscribers He Remains Most Followed World Leader

3 ಕೋಟಿ Subscribes ದಾಟಿದ ವಿಶ್ವದ ಏಕೈಕ ನಾಯಕ ಪ್ರಧಾನಿ ಮೋದಿ, Youtube ಚಾನೆಲ್‌ನಿಂದ ಕೋಟಿ ಕೋಟಿ ಆದಾಯ ಬರುತ್ತಿದೆಯೇ? | Pm Modi Youtube Channel Crosses 30m Subscribers He Remains Most Followed World Leader



3 ಕೋಟಿ Subscribes ದಾಟಿದ ವಿಶ್ವದ ಏಕೈಕ ನಾಯಕ ಪ್ರಧಾನಿ ಮೋದಿ, Youtube ಚಾನೆಲ್‌ನಿಂದ ಕೋಟಿ ಕೋಟಿ ಆದಾಯ ಬರುತ್ತಿದೆಯೇ? | Pm Modi Youtube Channel Crosses 30m Subscribers He Remains Most Followed World Leader

PM Modi YouTube channel crosses 30M subscribers ಪ್ರಧಾನಿ ಮೋದಿ ಯೂಟ್ಯೂಬ್ ಚಾನೆಲ್ 3 ಕೋಟಿ ಚಂದಾದಾರರ ಗಡಿ ದಾಟಿ ವಿಶ್ವ ದಾಖಲೆ ಬರೆದಿದೆ! ಜಾಗತಿಕ ನಾಯಕರಲ್ಲಿ ನಂ.1 ಸ್ಥಾನ. ಈ ಚಾನೆಲ್‌ನಿಂದ ಆದಾಯ ಬರುತ್ತದೆಯೇ? ತಿಳಿಯಲು ಸುದ್ದಿ ಓದಿ.

PM Modi YouTube channel crosses 30M subscribers: ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಹೊಸ ಇತಿಹಾಸ ಬರೆದಿದ್ದಾರೆ. ಕೇವಲ ರಾಜಕಾರಣದಲ್ಲಿ ಮಾತ್ರವಲ್ಲ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲೂ ಅವರು ವಿಶ್ವದ ನಂಬರ್ ಒನ್ ನಾಯಕನಾಗಿ ಹೊರಹೊಮ್ಮಿದ್ದಾರೆ. ಅವರ ಯೂಟ್ಯೂಬ್ ಚಾನೆಲ್ ಈಗ ಹೊಸ ಮೈಲಿಗಲ್ಲನ್ನು ತಲುಪಿದೆ.

3 ಕೋಟಿ ಚಂದಾದಾರರ ‘ವಿಶ್ವ ದಾಖಲೆ’

ಪ್ರಧಾನಿ ಮೋದಿ ಅವರ ಯೂಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬರ್ಸ್‌ಗಳ ಸಂಖ್ಯೆ ಈಗ ಭರ್ಜರಿ 3 ಕೋಟಿ (30 Million) ದಾಟಿದೆ. ಇಷ್ಟೊಂದು ದೊಡ್ಡ ಮಟ್ಟದ ಫಾಲೋವರ್ಸ್ ಹೊಂದಿರುವ ವಿಶ್ವದ ಮೊದಲ ಮತ್ತು ಏಕೈಕ ಜನನಾಯಕ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಇದು ಕೇವಲ ಅಂಕಿಅಂಶವಲ್ಲ, ಜಾಗತಿಕ ಮಟ್ಟದಲ್ಲಿ ಅವರಿಗಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಜಾಗತಿಕ ನಾಯಕರಿಗಿಂತ ಮೈಲುಗಳಷ್ಟು ಮುಂದೆ!

ಮೋದಿ ಅವರ ಹವಾ ಎಷ್ಟಿದೆ ಎಂದರೆ, ಅವರ ನಂತರದ ಸ್ಥಾನದಲ್ಲಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸನಾರೊ ಅವರ ಚಂದಾದಾರರ ಸಂಖ್ಯೆ ಮೋದಿಯವರ ನಾಲ್ಕನೇ ಒಂದು ಭಾಗದಷ್ಟು ಮಾತ್ರ! ಇನ್ನು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ 7 ಪಟ್ಟು ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗಿಂತ 3 ಪಟ್ಟು ಹೆಚ್ಚು ಚಂದಾದಾರರನ್ನು ಹೊಂದುವ ಮೂಲಕ ಮೋದಿ ಅಜೇಯರಾಗಿ ಉಳಿದಿದ್ದಾರೆ.

ಯುಟ್ಯೂಬ್‌ನಿಂದ ಮೋದಿ ಎಷ್ಟು ಆದಾಯ ಗಳಿಸುತ್ತಾರೆ?

ಸಾಮಾನ್ಯವಾಗಿ, ಪ್ರಧಾನ ಮಂತ್ರಿಗಳಂತಹ ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವವರು ತಮ್ಮ ಅಧಿಕೃತ ಅಥವಾ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಿಂದ ‘ಮಾನಿಟೈಸೇಶನ್’ (Monetization) ಆನ್ ಮಾಡುವುದಿಲ್ಲ. ಅಂದರೆ, ಅವರ ವೀಡಿಯೊಗಳ ಮೇಲೆ ಜಾಹೀರಾತುಗಳು ಬರುವುದಿಲ್ಲ ಮತ್ತು ಅದರಿಂದ ಅವರು ನೇರವಾಗಿ ಹಣ ಗಳಿಸುವುದಿಲ್ಲ. ಪ್ರಧಾನಿ ಮೋದಿ ಅವರ ಚಾನೆಲ್‌ಗೆ ಇರುವ ವೀಕ್ಷಣೆಗಳನ್ನು (Views) ಗಮನಿಸಿದರೆ, ಒಂದು ವೇಳೆ ಇದು ವಾಣಿಜ್ಯ ಉದ್ದೇಶದ ಚಾನೆಲ್ ಆಗಿದ್ದರೆ ತಿಂಗಳಿಗೆ ಅಂದಾಜು ₹15 ಲಕ್ಷದಿಂದ ₹40 ಲಕ್ಷದವರೆಗೆ ಆದಾಯ ಗಳಿಸಬಹುದಿತ್ತು. ಆದರೆ, ಪ್ರಧಾನಿ ಮೋದಿಯವರು ತಮ್ಮ ಚಾನೆಲ್‌ನಲ್ಲಿ ‘ಮಾನಿಟೈಸೇಶನ್’ (ಜಾಹೀರಾತು) ಆನ್ ಮಾಡಿಲ್ಲ. ಅಂದರೆ, ಅವರ ವೀಡಿಯೊಗಳಿಂದ ಯಾವುದೇ ವೈಯಕ್ತಿಕ ಆದಾಯ ಬರುತ್ತಿಲ್ಲ.

ಒಂದು ವೇಳೆ ಹಣ ಬರುತ್ತಿದ್ದರೆ ಎಲ್ಲಿಗೆ ಹೋಗುತ್ತದೆ?

ಒಂದು ವೇಳೆ ಚಾನೆಲ್‌ನಿಂದ ಹಣ ಬರುತ್ತಿದ್ದರೆ, ಅಂತಹ ಮೊತ್ತವನ್ನು ಪ್ರಧಾನ ಮಂತ್ರಿಗಳುa ವೈಯಕ್ತಿಕವಾಗಿ ಬಳಸುವಂತಿಲ್ಲ. ಭಾರತದ ನಿಯಮಗಳ ಪ್ರಕಾರ, ಇವುಗಳನ್ನು PM Cares Fund ಅಥವಾ ಸರ್ಕಾರದ ಯಾವುದಾದರೂ ಸಾರ್ವಜನಿಕ ನಿಧಿಗೆ ವರ್ಗಾಯಿಸಲಾಗುತ್ತದೆ. ಪ್ರಧಾನಿಯವರ ಚಾನೆಲ್‌ನ ಮುಖ್ಯ ಉದ್ದೇಶ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದೇ ಹೊರತು ಹಣ ಗಳಿಕೆಯಲ್ಲ.

ಈ ವರದಿಗಾಗಿ ರಾಷ್ಟ್ರೀಯ ಸುದ್ದಿ ಮಾಧ್ಯಮಗಳ ಮಾಹಿತಿ ಪಡೆಯಲಾಗಿದೆ.



Source link

Leave a Reply

Your email address will not be published. Required fields are marked *