ಪ್ರಧಾನಿ ನರೇಂದ್ರ ಮೋದಿ ಯೂಟ್ಯೂಬ್‌ನಲ್ಲಿ 3 ಕೋಟಿ ಚಂದಾದಾರರನ್ನು ಹೊಂದುವ ಮೂಲಕ ಜಗತ್ತಿನ ಮೊದಲ ಜನನಾಯಕರಾಗಿದ್ದಾರೆ. ಈ ಬೃಹತ್ ಹಿಂಬಾಲಕರ ಬಳಗದಿಂದ ಅವರಿಗೆ ಎಷ್ಟು ಆದಾಯ ಬರಬಹುದು ಮತ್ತು ಅವರ ಚಾನೆಲ್ ಮಾನಿಟೈಸ್ ಆಗಿದೆಯೇ ಎಂಬ ಕುತೂಹಲಕಾರಿ ಮಾಹಿತಿಯನ್ನು ಈ ಲೇಖನವು ಬಹಿರಂಗಪಡಿಸುತ್ತದೆ.
ಬೆಂಗಳೂರು: ಭಾರತದ ಪ್ರಧಾನಿ ನರೇಂದ್ರ ಮೋದಿ ಯೂಟ್ಯೂಬ್‌ನಲ್ಲಿ 30 ಮಿಲಿಯನ್ ಚಂದಾದಾರನ್ನು ಹೊಂದಿದ ಜಗತ್ತಿನ ಮೊದಲ ಜನನಾಯಕ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಯೂಟ್ಯೂಬ್‌ನಲ್ಲಿ ಮೋದಿಯನ್ನು ಫಾಲೋ ಮಾಡುವವರ ಸಂಖ್ಯೆ 3 ಕೋಟಿ ಗಡಿ ದಾಟಿದೆ. ಇನ್ನು ಬ್ರೆಜಿಲ್ ಪ್ರಧಾನಿ ಜೈರ್ ಬೊಲ್ಸ್ನಾರೊ, ಮೋದಿ ಬಳಿಕ ಎರಡನೇ ಹೆಚ್ಚು ಯೂಟ್ಯೂಬ್ ಸಬ್‌ಸ್ಕ್ರೈಬರ್ ಹೊಂದಿದ ಜನನಾಯಕ ಎನಿಸಿಕೊಂಡಿದ್ದಾರೆ. ಆದರೆ ಇವರು ಮೋದಿಯವರ 4/1 ಭಾಗ ಮಾತ್ರ ಚಂದಾದಾರರನ್ನು ಹೊಂದಿದ್ದಾರೆ.
ಇನ್ನು ನೋಬೆಲ್ ಶಾಂತಿ ಪ್ರಶಸ್ತಿ ಪಡೆಯಲು ತಿಣುಕಾಡುತ್ತಿರುವ ಅಮೆರಿಕ ಪ್ರಧಾನಿ ಡೊನಾಲ್ಡ್ ಟ್ರಂಪ್, ಮೋದಿ ಅವರಿಗೆ ಹೋಲಿಸಿದರೆ ಯೂಟ್ಯೂಬ್ ಸಬ್‌ಸ್ಕ್ರೈಬರ್ ಲಿಸ್ಟ್‌ನಲ್ಲಿ ಏಳುಪಟ್ಟು ಹಿಂದಿದ್ದಾರೆ. ಸದ್ಯ ಇರಾನ್-ಇಸ್ರೇಲ್ ಯುದ್ದದಲ್ಲಿ ಡೊನಾಲ್ಡ್ ಟ್ರಂಪ್ ಹೆಸರು ಸದ್ದು ಮಾಡುತ್ತಿದೆ. ಹೀಗಿದ್ದೂ ಯೂಟ್ಯೂಬ್ ಫಾಲೋವರ್ಸ್ ವಿಚಾರದಲ್ಲಿ ಮೋದಿಗಿಂತ ಟ್ರಂಪ್ ತುಂಬಾ ಹಿಂದಿದ್ದಾರೆ.

3 ಮಿಲಿಯನ್ ಸಬ್‌ಸ್ಕ್ರೈಬರ್ ಹೊಂದಿರುವ ಮೋದಿಗೆ ಯೂಟ್ಯೂಬ್‌ನಿಂದ ಎಷ್ಟು ಹಣ ಸಿಗಬಹುದು?
ಇತ್ತೀಚಿಗಿನ ಕೆಲ ವರ್ಷಗಳಲ್ಲಿ ಯೂಟ್ಯೂಬ್ ಅನ್ನು ಒಂದು ಆದಾಯದ ಮೂಲವಾಗಿ ಪರಿಗಣಿಸಲಾಗಿದ್ದು, ಇಂದು ಗಲ್ಲಿಗಲ್ಲಿಗಳಲ್ಲಿ ಯೂಟ್ಯೂಬರ್‌ಗಳು ಕಾಣ ಸಿಗುತ್ತಾರೆ. ಅಂದಹಾಗೆ 3 ಕೋಟಿ ಯೂಟ್ಯೂಬ್ ಫಾಲೋವರ್ಸ್ ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಯೂಟ್ಯೂಬ್‌ನಿಂದ ಎಷ್ಟು ಆದಾಯ ಬರಬಹುದು ಎಂದು ನೀವು ಆಲೋಚಿಸಿರಬಹುದು ಅಲ್ವಾ?
ಹೌದು, ಯೂಟ್ಯೂಬ್‌ನಿಂದ ಜಾಹೀರಾತು ಸೇರಿದಂತೆ ಹಲವು ಮೂಲಗಳಿಂದ ಯೂಟ್ಯೂಬ್ ಚಾನೆಲ್ ಹೊಂದಿದವರಿಗೆ ಆದಾಯ ಸಿಗುತ್ತದೆ. ಚಾಟ್ ಜಿಪಿಟಿ ಮಾಹಿತಿ ಪ್ರಕಾರ, 3 ಕೋಟಿ ಯೂಟ್ಯೂಬ್ ಸಬ್‌ಸ್ಕ್ರೈಬರ್ ಹೊಂದಿವರರಿಗೆ ಅವರು ಹಂಚಿಕೊಳ್ಳುವ ವಿಡಿಯೋ ವೀಕ್ಷಣೆಯ ಆಧಾರದಲ್ಲಿ ಆದಾಯ ಬರುತ್ತದೆ. ಯೂಟ್ಯೂಬ್ ಜಾಹಿರಾತು ಮೂಲಕ ಮೋದಿಗೆ ತಿಂಗಳಿಗೆ ಸುಮಾರು 20 ಲಕ್ಷ ರುಪಾಯಿಯಿಂದ ಒಂದು ಕೋಟಿ ರುಪಾಯಿವರೆಗೂ ಆದಾಯ ಸಿಗಬಹುದು ಎಂದು ಅಂದಾಜಿಸಿದೆ.
ದುಡ್ಡಿಗೆ ಆಸೆ ಪಡದ ಮೋದಿ ಯೂಟ್ಯೂಬ್ ಮಾನಿಟೈಸ್ ಮಾಡಿಲ್ಲ!
ಆದರೆ ದುಡ್ಡಿನಾಸೆಯಿಲ್ಲದ ಮೋದಿ ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಮಾನಿಟೈಸ್ ಮಾಡಿಲ್ಲ. ಹೀಗಾಗಿ ಪ್ರಧಾನಿ ಮೋದಿಗೆ ಯೂಟ್ಯೂಬ್‌ನಿಂದ ಒಂದೇ ಒಂದು ರುಪಾಯಿ ಹಣವೂ ಆದಾಯದ ರೂಪದಲ್ಲಿ ಬರುವುದಿಲ್ಲ.

ಇನ್‌ಸ್ಟಾಗ್ರಾಂನಲ್ಲಿ 100 ಮಿಲಿಯನ್ ಫಾಲೋವರ್ಸ್ ಹೊಂದಿದ ಜಗತ್ತಿನ ಮೊದಲ ರಾಜಕಾರಣಿ
ಜಗತ್ತಿನ ಅತ್ಯಂತ ಜನಪ್ರಿಯ ರಾಜಕೀಯ ನಾಯಕನಾಗಿ ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳಷ್ಟೇ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್ಸ್ ಹೊಂದಿದ ಜಗತ್ತಿನ ಮೊದಲ ರಾಜಕೀಯ ವ್ಯಕ್ತಿ ಎನ್ನುವ ಅಪರೂಪದ ದಾಖಲೆ ನಿರ್ಮಿಸಿದ್ದರು. 2014ರಲ್ಲಿ ಇನ್‌ಸ್ಟಾಗ್ರಾಮ್ ಖಾತೆ ತೆರೆದ ಮೋದಿ ಕೇವಲ ಒಂದು ದಶಕದಲ್ಲೇ ಸೋಷಿಯಲ್ ಮೀಡಿಯಾದ ಹೊಸ ಸೆನ್ಸೇಷನ್ ಆಗಿ ಗುರುತಿಸಿಕೊಂಡಿದ್ದಾರೆ.