ತಿರುವನಂತಪುರಂ, ಮಾರ್ಚ್ 4: ಗಂಡನಿಂದ ದಾನವಾಗಿ ಬಂದ ಭೂಮಿಯನ್ನು ಮಹಿಳೆಯೊಬ್ಬರು ತನ್ನ ಆರು ಮಕ್ಕಳಿಗೆ ಐವರಿಗೆ ಮಾತ್ರವೇ ಹಂಚಿಕೆ ಮಾಡಿ ವಿಲ್ ಬರೆದಿದ್ದರು. ಈಗ ಆಸ್ತಿ ಸಿಗದ ಆ ಒಬ್ಬ ಮಗ ಕೋರ್ಟ್ ಮೆಟ್ಟಿಲೇರಿದರು. ಆದರೆ, ನ್ಯಾಯಾಲಯದಲ್ಲಿ ತಾಯಿಯ ಪರವಾಗಿ ತೀರ್ಪು ಬಂದಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ತನಗೆ ಹಕ್ಕಿದೆ ಎನ್ನುವ ಮಗನ ವಾದವನ್ನು ಕೋರ್ಟ್ ಒಪ್ಪಿಲ್ಲ.
ಏನಿದು ಪ್ರಕರಣ?
ವೆಂಕಿಟನ್ ಎಂಬ್ರಾಂದಿರಿ ಎಂಬುವವರು 1925 ರಲ್ಲಿ ಒಮ್ಮೆ 26 ಸೆಂಟ್ ಜಮೀನನ್ನು ಖರೀದಿಸುತ್ತಾರೆ. ಅವರಿಗೆ ಇಬ್ಬರು ಹೆಣ್ಮಕ್ಕಳು ಸೇರಿ ಆರು ಮಕ್ಕಳಿದ್ದರು. ಅವರಲ್ಲಿ ಟಿ.ವಿ. ರಾಮಚಂದ್ರ ರಾವ್ ಒಬ್ಬರು.
ವೆಂಕಿಟನ್ ನಿರ್ದೇಶಕ ಮಕ್ಕಳೆಲ್ಲರೂ 1967ರಲ್ಲಿ ಪಾರ್ಟಿಶನ್ ಡೀಡ್ ಮಾಡಿದರು. ಆಗ ರಾಮಚಂದ್ರ ರಾವ್ ಅವರಿಗೆ 37 ಸೆಂಟ್ ಆಸ್ತಿ ಸಿಕ್ಕಿತು. ರಾಧಮ್ಮ ಎಂಬ ಸಹೋದರಿಯೊಬ್ಬರು ತನ್ನ ಪಾಲಿನ 9 ಸೆಂಟ್ ಜಾಗವನ್ನು ಬಿಟ್ಟುಕೊಡುತ್ತಾರೆ. ಟಿ.ವಿ. ರಾಮಚಂದ್ರರಾವ್ ಅವರಿಗೆ ಸಿಕ್ಕ ಜಾಗ 46 ಸೆಂಟ್‌ಗೆ ಏರುತ್ತದೆ.
ಇದನ್ನೂ ಓದಿ: ಮಹಿಳೆಯ ಘೋಷಿತ ಆದಾಯ 4.81 ಲಕ್ಷ ರೂ; ಇನ್ಶೂರೆನ್ಸ್ ಕಟ್ಟಿದ್ದು 50 ಲಕ್ಷ ರೂ; ಕೋರ್ಟ್ಗೆ ಹೋಯ್ತು ಕೇಸ್
1978ರಲ್ಲಿ ರಾಮಚಂದ್ರರಾವ್ ಈ 46 ಸೆಂಟ್ ಜಾಗವನ್ನು ತಮ್ಮ ಧರ್ಮಪತ್ನಿಗೆ ದಾನವಾಗಿ ನೀಡಲಾಗಿದೆ. 1986ರಲ್ಲಿ ರಾವ್ ಮೃತರಾಗುತ್ತಾರೆ. ಇವರಿಗೆ ಆರು ಮಕ್ಕಳಿದ್ದಾರೆ. ರಾಮಚಂದ್ರರಾವ್ ನಿಧನರಾಗಿ ಕೆಲ ವರ್ಷಗಳ ಬಳಿಕ ಅವರ ಪತ್ನಿ ವಿಲ್ ಬರೆಯುತ್ತಾರೆ. ಒಬ್ಬ ಮಗನನ್ನು ಬಿಟ್ಟು ಉಳಿದ ಐವರಿಗೆ ಆಸ್ತಿ ಹಂಚಿಕೆ ಮಾಡಿ ಬರೆಯುತ್ತಾರೆ.
ಇದನ್ನು ಆಕ್ಷೇಪಿಸಿ ಮಗ ಕೋರ್ಟ್ ಮೆಟ್ಟಿಲೇರುತ್ತಾನೆ. ಇದು ಪಿತ್ರಾರ್ಜಿತ ಆಸ್ತಿ ತನಗೆ ಹಕ್ಕು ಇದೆ ಎಂದು ವಾದಿಸುತ್ತಾನೆ. ಆದರೆ, ರಾಮಚಂದ್ರ ರಾವ್ ಅವರ ಕಾಪರ್ಸನರಿ ಪ್ರಾಪರ್ಟಿಯಲ್ಲವಾದ್ದರಿಂದ ಅವರ ಮಗನಿಗೆ ಆಸ್ತಿ ಹಕ್ಕು ಇಲ್ಲ. ಇದರ ಪೂರ್ಣ ಹಕ್ಕು ತನಗೇ ಸೇರಿದ್ದು ಎಂದು ಆತನ ತಾಯಿ ವಾದ ಮಾಡುತ್ತಾಳೆ. ಕೋರ್ಟ್ ಕೂಡ ಈ ವಾದವನ್ನು ಪುರಸ್ಕರಿಸಿ, ತಾಯಿ ಪರವಾಗಿ ತೀರ್ಪು ಕೊಡುತ್ತದೆ.
ಇದನ್ನೂ ಓದಿ: ಎನ್ ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್; ಇದು ರಿಟೈರ್ಮೆಂಟ್ ಗೂ ಸೈ, ಹೆಲ್ತ್ಕೇರ್ ವೆಚ್ಚಕ್ಕೂ ಸೈ; ಹೇಗೆ ಕೆಲಸ ಮಾಡುತ್ತೆ ಈ ಹೈಬ್ರಿಡ್ ಸ್ಕೀಮ್?
ಪಿತ್ರಾರ್ಜಿತ ಆಸ್ತಿ ಎನಿಸುವುದು ಹೇಗೆ?
ನಾಲ್ಕು ತಲೆಮಾರುಗಳಿಂದ ಯಾವುದೇ ಪಾರ್ಟಿಷನ್ ಇಲ್ಲದೇ ಆಸ್ತಿಯು ಬಳುವಳಿಯಾಗಿ ಬಂದಿರಬೇಕು. ಪಾರ್ಟಿಶನ್ ಆದಾಗ ಅದು ಸ್ವಂತ ಸಂಪಾದನೆ ಎಂದು ಪರಿಗಣಿತವಾಗುತ್ತದೆ. ರಾಮಚಂದ್ರರಾವ್ ಅವರು ತಮ್ಮ ತಂದೆಯಿಂದ ಆಸ್ತಿಯನ್ನು ಪಾರ್ಟಿಶನ್ ಡೀಡ್ ಮೂಲಕ ಪಡೆದಿದ್ದರು. ಹೀಗಾಗಿ, ಅದು ಅವರ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಹಕ್ಕುದಾರರನ್ನು ಒಪ್ಪಿರಲಿಲ್ಲ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 1:03 pm, ಬುಧವಾರ, 4 ಮಾರ್ಚ್ 26