ಖಮೇನಿ ಉತ್ತರಾಧಿಕಾರಿ ಮೊಜ್ತಬಾ ಖಮೇನಿ ಹತ್ಯೆ ಮಾಡುವಂತೆ ಇಸ್ರೇಲ್‌ ಸೇನೆಗೆ ಆದೇಶ ನೀಡಿದ ನೆತನ್ಯಾಹು! | Israel Threatens To Assassinate New Iran Leader Mojtaba Khamenei San

ಖಮೇನಿ ಉತ್ತರಾಧಿಕಾರಿ ಮೊಜ್ತಬಾ ಖಮೇನಿ ಹತ್ಯೆ ಮಾಡುವಂತೆ ಇಸ್ರೇಲ್‌ ಸೇನೆಗೆ ಆದೇಶ ನೀಡಿದ ನೆತನ್ಯಾಹು! | Israel Threatens To Assassinate New Iran Leader Mojtaba Khamenei San



ಖಮೇನಿ ಉತ್ತರಾಧಿಕಾರಿ ಮೊಜ್ತಬಾ ಖಮೇನಿ ಹತ್ಯೆ ಮಾಡುವಂತೆ ಇಸ್ರೇಲ್‌ ಸೇನೆಗೆ ಆದೇಶ ನೀಡಿದ ನೆತನ್ಯಾಹು! | Israel Threatens To Assassinate New Iran Leader Mojtaba Khamenei San

ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ಮರಣದ ನಂತರ, ಅವರ ಪುತ್ರ ಮೊಜ್ತಾಬಾ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗಿದೆ. ಈ ನೇಮಕಾತಿಯ ಬೆನ್ನಲ್ಲೇ, ಇಸ್ರೇಲ್ ರಕ್ಷಣಾ ಸಚಿವರು ಹೊಸ ನಾಯಕನನ್ನು ಹತ್ಯೆ ಮಾಡುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ.

ನವದೆಹಲಿ (ಮಾ.4): ಇರಾನ್‌ನ ಹೊಸ ಸರ್ವೋಚ್ಚ ನಾಯಕ (Supreme Leader), ಅಯತೊಲ್ಲಾ ಅಲಿ ಖಮೇನಿಯ ಉತ್ತರಾಧಿಕಾರಿಗೆ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಬುಧವಾರ ಬಹಿರಂಗ ಹತ್ಯೆಯ ಬೆದರಿಕೆ ಹಾಕಿದ್ದಾರೆ. ಇರಾನ್‌ನ ಶಕ್ತಿಶಾಲಿ ರೆವಲ್ಯೂಷನರಿ ಗಾರ್ಡ್‌ಗಳ ಒತ್ತಡದ ಮೇರೆಗೆ ಖಮೇನಿ ಪುತ್ರ ಮೊಜ್ತಾಬಾ ಅವರನ್ನು ಮುಂದಿನ ಸುಪ್ರೀಂ ಲೀಡರ್ ಆಗಿ ಆಯ್ಕೆ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ಕಾಟ್ಜ್, “ಇಸ್ರೇಲ್ ಅನ್ನು ನಾಶಪಡಿಸುವ ಯೋಜನೆ, ಅಮೆರಿಕ ಮತ್ತು ಮುಕ್ತ ಪ್ರಪಂಚಕ್ಕೆ ಬೆದರಿಕೆ ಹಾಗೂ ಇರಾನ್ ಜನತೆಯನ್ನು ತುಳಿಯುವ ಇರಾನಿನ ಭಯೋತ್ಪಾದಕ ಆಡಳಿತದಿಂದ ನೇಮಕಗೊಳ್ಳುವ ಯಾವುದೇ ನಾಯಕನೂ ನಮ್ಮ ಟಾರ್ಗೆಟ್‌ ಆಗಲಿದ್ದಾನೆ. ಅವನ ಹೆಸರು ಏನೇ ಇರಲಿ ಅಥವಾ ಅವನು ಎಲ್ಲೇ ಅಡಗಿರಲಿ, ಅವನ ಹತ್ಯೆ ಖಚಿತ,” ಎಂದು ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲ್‌ನ ‘ರೋರ್ ಆಫ್ ದಿ ಆರ್ಯನ್ಸ್’ (Operation “Roar of the Aryans”) ಕಾರ್ಯಾಚರಣೆಯ ಭಾಗವಾಗಿ ಈ ಮಿಷನ್ ಅನ್ನು ಪೂರೈಸಲು ಸಿದ್ಧರಾಗುವಂತೆ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸೂಚನೆಯ ಮೇರೆಗೆ ಇಸ್ರೇಲ್ ರಕ್ಷಣಾ ಪಡೆಗಳಿಗೆ (IDF) ಸೂಚಿಸಿರುವುದಾಗಿ ತಿಳಿಸಿದ್ದಾರೆ. “ನಾವು ನಮ್ಮ ಅಮೆರಿಕನ್ ಪಾಲುದಾರರೊಂದಿಗೆ ಸೇರಿ ಇರಾನ್ ಆಡಳಿತದ ಸಾಮರ್ಥ್ಯವನ್ನು ಹತ್ತಿಕ್ಕಲು ಮತ್ತು ಇರಾನ್ ಜನರು ಈ ಆಡಳಿತವನ್ನು ಕಿತ್ತೊಗೆಯಲು ಅಗತ್ಯವಿರುವ ಪರಿಸ್ಥಿತಿಯನ್ನು ನಿರ್ಮಿಸಲು ನಮ್ಮ ಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡುತ್ತೇವೆ,” ಎಂದು ಅವರು ಸೇರಿಸಿದ್ದಾರೆ.

ಖಮೇನಿ ಕುಟುಂಬದ ಅಂತ್ಯ ಮತ್ತು ಉತ್ತರಾಧಿಕಾರಿ ಆಯ್ಕೆ

ಫೆಬ್ರವರಿ 28 ರಂದು ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ 4 ದಶಕಗಳ ವರ್ಷಗಳ ಕಾಲ ಇರಾನ್ ಆಳಿದ್ದ ಅಯತೊಲ್ಲಾ ಖಮೇನಿ ಸಾವನ್ನಪ್ಪಿದ್ದರು. ಈ ದಾಳಿಯಲ್ಲಿ ಅವರ ಪುತ್ರಿ, ಅಳಿಯ ಮತ್ತು ಮೊಮ್ಮಗಳು ಕೂಡ ಬಲಿಯಾಗಿದ್ದರು. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಖಮೇನಿ ಪತ್ನಿ ಮನ್ಸೌರೆ ಖೋಜಾಸ್ತೆ ಬಘರ್ಜಾದೆ ಕೂಡ ಈಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಖಮೇನಿ ಸಾವಿನ ನಂತರ ಇರಾನ್‌ನ ಮಧ್ಯಂತರ ನಾಯಕತ್ವ ಮಂಡಳಿಯು ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು. ಆದರೆ ಈಗ ಖಮೇನಿ ಪುತ್ರ ಮೊಜ್ತಾಬಾ ಅವರನ್ನು ಅಧಿಕೃತವಾಗಿ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ

ಇಂದು ರಾತ್ರಿಯಿಂದ ಅಂತ್ಯಕ್ರಿಯೆ ಆರಂಭ

ಖಮೇನಿ ಅವರ ಮೃತದೇಹವನ್ನು ಪವಿತ್ರ ನಗರವಾದ ಮಶಾದ್‌ನಲ್ಲಿ ಹೂಳಲಾಗುವುದು ಮತ್ತು ಇಂದು ರಾತ್ರಿಯಿಂದ ಮೂರು ದಿನಗಳ ಕಾಲ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯಲಿವೆ. ಇರಾನ್‌ನ ಅಧಿಕೃತ ಸುದ್ಧಿಸಂಸ್ಥೆ ‘ಇರ್ನಾ’ ಪ್ರಕಾರ, “ಇಂದು ರಾತ್ರಿ 10 ಗಂಟೆಯಿಂದ (ಭಾರತೀಯ ಕಾಲಮಾನ ರಾತ್ರಿ 11:30) ಟೆಹ್ರಾನ್‌ನ ಇಮಾಮ್ ಖೊಮೇನಿ ಗ್ರಾಂಡ್ ಮಸೀದಿಯಲ್ಲಿ ಸಾರ್ವಜನಿಕರು ರಾಷ್ಟ್ರದ ಮಾರ್ಗದರ್ಶಕನಿಗೆ ಅಂತಿಮ ಗೌರವ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.



Source link

Leave a Reply

Your email address will not be published. Required fields are marked *