Headlines

ಶಾಲೆಯಲ್ಲಿ ಇವನ್ಯಾರು ಅಂತ ಒಬ್ರಿಗೂ ಗೊತ್ತಿಲ್ಲ: ಮಗನ ಶಾಲೆಗೆ ಹೋದ ಅಪ್ಪನ ಬೈಗುಳದ ವೀಡಿಯೋ ಭಾರಿ ವೈರಲ್ | Not Even Peon Knows Him Video Of Father Yelling At Sons School Goes Viral

ಶಾಲೆಯಲ್ಲಿ ಇವನ್ಯಾರು ಅಂತ ಒಬ್ರಿಗೂ ಗೊತ್ತಿಲ್ಲ: ಮಗನ ಶಾಲೆಗೆ ಹೋದ ಅಪ್ಪನ ಬೈಗುಳದ ವೀಡಿಯೋ ಭಾರಿ ವೈರಲ್ | Not Even Peon Knows Him Video Of Father Yelling At Sons School Goes Viral



ಶಾಲೆಯಲ್ಲಿ ಇವನ್ಯಾರು ಅಂತ ಒಬ್ರಿಗೂ ಗೊತ್ತಿಲ್ಲ: ಮಗನ ಶಾಲೆಗೆ ಹೋದ ಅಪ್ಪನ ಬೈಗುಳದ ವೀಡಿಯೋ ಭಾರಿ ವೈರಲ್ | Not Even Peon Knows Him Video Of Father Yelling At Sons School Goes Viral

ಮಗನ ಶಾಲೆಗೆ ಭೇಟಿ ನೀಡಿದ ತಂದೆಯೊಬ್ಬರು, ಅಲ್ಲಿನ ಅಪರಿಚಿತ ಮತ್ತು ಆತ್ಮೀಯತೆಯಿಲ್ಲದ ವಾತಾವರಣದಿಂದ ಬೇಸರಗೊಂಡಿದ್ದಾರೆ. ತಮ್ಮ ಬಾಲ್ಯದ ಶಾಲಾ ದಿನಗಳನ್ನು ಇಂದಿನ ಶಿಕ್ಷಣ ಪದ್ಧತಿಗೆ ಹೋಲಿಸಿ ಅವರು ವ್ಯಕ್ತಪಡಿಸಿದ ನೋವಿನ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಗನ ಶಾಲೆಗೆ ಹೋಗಿ ಭ್ರಮನಿರಸಗೊಂಡ ಅಪ್ಪ

ಶಾಲೆ ಹಾಗೂ ಬಾಲ್ಯ ಯಾವಾಗಲೂ ಒಂದು ನವಿರಾದ ಅನುಭವ. ಬಾಲ್ಯದ ದಿನಗಳನ್ನು ಮೆಲುಕು ಹಾಕದವರಿಲ್ಲ, ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳ ಬಾಲ್ಯವಂತೂ ಇನ್ನೂ ಚೆನ್ನಾಗಿರುತ್ತದೆ. ನಡೆದುಕೊಂಡೇ ಕಿಲೋ ಮೀಟರ್‌ಗಟ್ಟಲೇ ಓಡಾಟ, ದಾರಿಯುದ್ಧಕ್ಕೂ ಸಿಗುವ ತರಹೇವಾರಿ ಕಾಡಿನ ರುಚಿಕರ ಹಣ್ಣುಗಳನ್ನು ತಿನ್ನುತ್ತಾ ದಾರಿ ಸಾಗುವ ಖುಷಿ ಅದನ್ನು ಅನುಭವಿಸಿದವರಿಗೆ ಗೊತ್ತು. ಹಲವು ದಶಕಗಳ ಹಿಂದೆ ಈಗಿನಂತೆ ಮೊಬೈಲ್ ಫೋನ್‌ಗಳಿರಲಿಲ್ಲ, ಬರೀಯ ಸ್ನೇಹಿತರು ಪುಸ್ತಕಗಳು ನೋಟ್ಸ್‌ಗಳು ಯಾವಾಗಲಾದರೊಮ್ಮೆ ಪೋಷಕರು ಶಾಲೆಗೆ ಭೇಟಿ ನೀಡಿ ಓದದೇ ಇದ್ದರೆ ಸರಿಯಾಗಿ ಬಾರಿಸಿ ಎಂದು ಬಿಡುತ್ತಿದ್ದರು. ಈಗಿನಂತೆ ಆಗ ತರಗತಿಯ ಎಲ್ಲಾ ಮಕ್ಕಳು ರಾಂಕ್ ತೆಗೆಯುವವರಿರಲಿಲ್ಲ, ತರಗತಿಗೆ ಒಬ್ಬರೋ ಇಬ್ಬರು ಪ್ರಥಮ ಬರುತ್ತಿದ್ದರು ತರಗತಿಯಲ್ಲಿರುವ ಪ್ರತಿಯೊಬ್ಬರಿಗೂ ಪ್ರತಿಯೊಬ್ಬರ ಪರಿಚಯವಿರುತ್ತಿತ್ತು. ಹಾಗೆಯೇ ಶಾಲೆಯಲ್ಲಿ ಅಷ್ಟೊಂದು ಮಕ್ಕಳಿದ್ದರೂ ಪ್ರತಿಯೊಬ್ಬ ಶಿಕ್ಷಕರಿಗೂ ಎಲ್ಲಾ ಮಕ್ಕಳ ಪರಿಚಯ ಹೆಸರು ತರಗತಿ ನೆನಪಿರುತ್ತಿತ್ತು. ಆದರೆ ಈಗ ಹಾಗಿದ್ಯಾ? ಇಲ್ಲ ಅಂತಿದ್ದಾರೆ ಪೋಷಕರೊಬ್ಬರು.

ಹೌದು ಪೋಷಕರೊಬ್ಬರು ಶಾಲೆಗೆ ಭೇಟಿ ನೀಡಿದ ನಂತರ ಮಾಡಿದ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಅನೇಕರು ತಮ್ಮ ಬಾಲ್ಯವನ್ನು ಹಾಗೂ ಬಾಲ್ಯದಲ್ಲಿ ಮಾಡಿದ ತುಂಟಾಟಗಳನ್ನು ನೆನಪಿಸಿಕೊಂಡಿದ್ದಾರೆ. ಹಾಗಿದ್ದಾರೆ ಮಗನ ಶಾಲೆಗೆ ಭೇಟಿ ನೀಡಿದ ತಂದೆ ವೀಡಿಯೋದಲ್ಲಿ ಏನು ಹೇಳಿದ್ದಾರೆ ನೋಡೋಣ..

ಇದನ್ನೂ ಓದಿ: ಅಡುಗೆ ಮನೆಯಲ್ಲಿ ಅತ್ತೆಯದ್ದೇ ರಾಜ್ಯಭಾರ: ಸಾವಿಗೆ ಶರಣಾದ ಟೆಕ್ಕಿ ಸೊಸೆ

ನಾನು ಇವತ್ತು ಮಗನ ಟಿಪಿನ್ ನೀಡುವುದಕ್ಕಾಗಿ ಆತನ ಶಾಲೆಗೆ ಹೋಗಿದೆ. ಅಲ್ಲಿಗೆ ಹೋದ ಮೇಲೆ ನನ್ನ ಹೃದಯ ಒಡೆಯಿತು. ಏಕೆಂದರೆ ಅಲ್ಲಿ ಯಾರೊಬ್ಬರಿಗೂ ನನ್ನ ಮಗನ ಪರಿಚಯವಿರಲಿಲ್ಲ, ನನ್ನ ಮಗನ ಬಗ್ಗೆ ಅಲ್ಲಿ ಕ್ಲಾರ್ಕ್‌ಗಳಿಗೆ ಜವಾನರಿಗೆ ಗೊತ್ತಿರಲಿಲ್ಲ, ಟೀಚರ್‌ಗಳಿಗೂ ಗೊತ್ತಿರಲಿಲ್ಲ, ಅತನ ಸಹಪಾಠಿಗಳಿಗೂ ಅವನ ಹೆಸರು ಕೇಳಿದರೆ ಗೊತ್ತಿಲ್ಲ, ಹೀಗೆ ಅಲ್ಲಿ ನನ್ನ ಮಗನ ಬಗ್ಗೆ ಯಾರೊಬ್ಬರಿಗೂ ಗೊತ್ತಿರಲಿಲ್ಲ, ಅಲ್ಲಿ ನಂತರ ನನ್ನ ಮಗನ ಹೆಸರು ಸೆಕ್ಷನ್ ರೂಲ್ ನಂಬರ್ ಹೀಗೆ ಎಲ್ಲವನ್ನು ಕೇಳಿದರು ಕ್ಲಾಸ್ ಟೀಚರ್ ಯಾರು ಎಂದು ಕೇಳಿದರು ಹೀಗೆ ನನ್ನ ಮಗನ ಬಗ್ಗೆ ಅಲ್ಲಿ ಯಾರಿಗೂ ಪರಿಚಯವಿರಲಿಲ್ಲ. ಆದರೆ ನಮ್ಮ ಕಾಲ ಹಾಗಿರಲಿಲ್ಲ, ನಮ್ಮ ತಂದೆ ಯಾವಾಗಲಾದರೊಮ್ಮೆ ಶಾಲೆಗೆ ಭೇಟಿ ನೀಡಿದರೆ ಅಲ್ಲಿ ಅವರಿಗೆ ಸೆಲೆಬ್ರಿಟಿಯ ಮರ್ಯಾದೆ ದೊರೆಯುತ್ತಿತ್ತು. ಅವರನ್ನು ಶಾಲೆಯ ಜವಾನರಿಂದ ಹಿಡಿದು ಬಸ್ ಕಂಡೆಕ್ಟರ್ ಡ್ರೈವರ್‌ ಪ್ರಿನ್ಸಿಪಾಲ್‌ಗಳವರೆಗೆ ಎಲ್ಲರಿಗೂ ಪರಿಚಯವಿತ್ತು. ಕೇವಲ ಅವರ ಮುಖ ನೋಡಿ ಅವರು ತಂದೆಯ ಬಳಿಯಿಂದ ಟಿಪಿನ್ ತಂದು ನಮಗೆ ಕೊಡುತ್ತಿದ್ದರು. ಅಲ್ಲದೇ ಶಾಲೆಯ ಶಿಕ್ಷಕರಿಗೆ ನಮ್ಮ ಪ್ರತಿಯೊಂದು ವಿಚಾರದ ಬಗ್ಗೆ ಅರಿವಿತ್ತು ನಮ್ಮ ಪೋಷಕರು ಏನು ಮಾಡುತ್ತಿದ್ದಾರೆ ಎಲ್ಲಿ ಕೆಲಸ ಮಾಡುತ್ತಿದ್ದಾರೆ ಹೀಗೆ ಎಲ್ಲಾ ವಿಚಾರದ ಬಗ್ಗೆ ಅರಿವಿತ್ತು. ಆದರೆ ಈಗ ಹಾಗಿಲ್ಲ ಎಂದು ಅವರು ಬೇಸರ ಮಾಡಿಕೊಂಡಿದ್ದಾರೆ..

ಇದನ್ನೂ ಓದಿ: ರಸ್ತೆ ಬದಿ 4 ಚೀಲದಲ್ಲಿ ಗೋವುಗಳ ಕಳೆಬರ ಪತ್ತೆ: ರಸ್ತೆ ತಡೆದು ಪ್ರತಿಭಟಿಸಿದವರ ವಿರುದ್ಧ FIR

ಜೊತೆಗೆ ಅವರು ಹೀಗೆ ಬರೆದುಕೊಂಡಿದ್ದಾರೆ. ಈಗಿನ ಮಕ್ಕಳು ನಮಗೆ ಎಂತಹ ಕಾಲವನ್ನು ತಂದಿದ್ದಾರೆ. ಅವರಿಗೆ ಮನೆಕೆಲಸಕ್ಕಿಂತ ಪಾಸ್‌ವರ್ಡ್‌ಗಳು ಹೆಚ್ಚು ನೆನಪಿರುತ್ತವೆ. ಅವರು ತಮ್ಮ ಶಿಕ್ಷಕರಿಗಿಂತ ಗೂಗಲ್‌ಗೆ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾರೆ. ಆನ್‌ಲೈನ್ ತರಗತಿಗಳು ಬೆಳಗಿನ ಜಾವ 2 ಗಂಟೆಯವರೆಗೆ ನಡೆಯುತ್ತವೆ. ಇದು ವಾಸ್ತವದಲ್ಲಿ ಗೇಮಿಂಗ್ ಆಗಿರುತ್ತದೆ. ಮತ್ತು ಅವರು ಶಾಲೆಯನ್ನು ಅಲ್ಲ, ತಮ್ಮದೇ ಆದ ಸ್ಟಾರ್ಟ್‌ಅಪ್ ಅನ್ನು ನಡೆಸುತ್ತಿದ್ದಾರೆ ಎಂಬ ಮನೋಭಾವ ಅವರಿಗಿದೆ ಎಂದು ಬರೆದುಕೊಂಡಿದ್ದಾರೆ.

ಅವರ ಈ ವೀಡಿಯೋ ಭಾರಿ ವೈರಲ್ ಆಗಿದ್ದು, ಅನೇಕರು ಕಾಮೆಂಟ್‌ಗಳ ಮೂಲಕ ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ. ನಮ್ಮ ತಂದೆ ಹಿಂದೊಮ್ಮೆ ಟಿಪಿನ್ ಹಿಡಿದುಕೊಂಡು ಶಾಲೆಗೆ ಬಂದಿದ್ದರು. ಆದರೆ ಅವರು ಬಂದಾಗ ನಾನು ಶಾಲೆಯಲ್ಲೇ ಇರಲಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನನಗೆ ನನ್ನ ಬಾಲ್ಯ ನೆನಪಾಯ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಮ್ಮ ಪ್ರಾಂಶುಪಾಲರಂತು ಈ ಪಾಪಿಯ ಅಪ್ಪ ಈಗಲಾದರು ಸಿಕ್ಕಿದರಲ್ಲ ಎಂದು ಓಡಿ ಓಡಿ ಬರುತ್ತಿದ್ದರು ಎಂದು ಹಾಸ್ಯ ಮಾಡಿದ್ದಾರೆ. ಅನೇಕರು ಶಾಲೆಯ ವಾತಾವಣರಣ ಈಗ ಚೆನ್ನಾಗಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *