Headlines

ಅಡುಗೆ ವಿಷಯದಲ್ಲಿ ಅತ್ತೆ ಕಿರಿಕ್; ನೊಂದ ಸೊಸೆ ಸಾವಿಗೆ ಶರಣು!

ಅಡುಗೆ ವಿಷಯದಲ್ಲಿ ಅತ್ತೆ ಕಿರಿಕ್; ನೊಂದ ಸೊಸೆ ಸಾವಿಗೆ ಶರಣು!


ಸುಷ್ಮಾ ಮತ್ತು ಆಕೆಯ ಪತಿ ಪುನೀತ್ ಕುಮಾರ್ಚಿತ್ರದ ಕ್ರೆಡಿಟ್ ಮೂಲ: ಇಂಡಿಯಾ ಟಿವಿ

ಬೆಂಗಳೂರು, ಮಾರ್ಚ್ 04: ಕೌಟುಂಬಿಕ ಕಲಹದ ಹಿನ್ನೆಲೆ ಸಾಫ್ಟ್‌ವೇರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಅಬ್ಬಿಗೆರೆ (ಬೆಂಗಳೂರು) ಪ್ರದೇಶದಲ್ಲಿ ನಡೆದಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅತ್ತೆಯ ಕಾಟದಿಂದ ಬೇಸತ್ತಿದ್ದ ಮಹಿಳೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಅಡಿಗೆ ವಿಷಯಕ್ಕೆ ಅತ್ತೆಯಿಂದ ಕಿರುಕುಳ

ಬೆಂಗಳೂರು ನಿವಾಸಿ ಸುಷ್ಮಾ (35) ಡೆಲ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಐದು ವರ್ಷಗಳ ಹಿಂದೆ ಪುನೀತ್ ಕುಮಾರ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ನಾಲ್ಕು ವರ್ಷದ ಮಗನೂ ಇದ್ದಾನೆ ಎಂದು. ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳ ಕುರಿತಾಗಿ ಹಲವಾರು ಕಲಹಗಳು ನಡೆಯುತ್ತಿದ್ದವು. ಮಂಗಳವಾರ ಅತ್ತೆ ಕಲ್ಪನಾ ಅವರೊಂದಿಗೆ ಅಡುಗೆ ಮಾಡುವ ವಿಚಾರದಲ್ಲಿ ವಾಗ್ವಾದ ಉಂಟಾಗಿತ್ತು. ಸುಷ್ಮಾ ಕುಟುಂಬದವರ ಆರೋಪದಂತೆ, ಆಕೆ ಪದೇ ಪದೇ ಅಡುಗೆ ಮಾಡುವ ವಿಷಯದಲ್ಲಿ ಕಿರಿಕ್ ಮಾಡುತ್ತಿದ್ದು, ಇತರ ವಿಷಯಗಳಲ್ಲಿಯೂ ಕಿರುಕುಳ ನೀಡುತ್ತಿದ್ದರು.

ಇದನ್ನೂ ಓದಿ ಹಾಡು ಹಗಲಲ್ಲೇ 59 ಲಕ್ಷ ರೂ. ಮೌಲ್ಯದ ಬೆಳ್ಳಿ ಕಳ್ಳತನ; ಸಿಬ್ಬಂದಿಯಿಂದಲೇ ಕೃತ್ಯ!

ಈ ಪರಿಸ್ಥಿತಿಯಿಂದ ಮಾನಸಿಕವಾಗಿ ಅಸಹನೀಯಗೊಂಡ ಸುಷ್ಮಾ, ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯ ನಂತರ. ಇದೀಗ ವರದಕ್ಷಿಣೆ ಕಿರುಕುಳ ಆರೋಪದ ಮೇರೆಗೆ ಪತಿ ಪುನೀತ್ ಕುಮಾರ್ ಅವರನ್ನು ಬಂಧಿಸಿದ್ದು, ಪರಾರಿಯಾಗಿರುವ ಅತ್ತೆ ಕಲ್ಪನಾ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಪೂರ್ವಾಪರ ವಿಚಾರಗಳನ್ನು ಪೊಲೀಸರು ಸವಿಸ್ತಾರವಾಗಿ ಪರಿಶೀಲಿಸುತ್ತಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *