Facebook ತಾಂತ್ರಿಕ ಸಮಸ್ಯೆಯಿಂದ ಫೇಸ್‌ಬುಕ್ ತಾತ್ಕಾಲಿಕ ಸ್ಥಗಿತ, ನಿಮಗೂ ಸಮಸ್ಯೆಯಾಗುತ್ತಿದ್ದರೆ ಹೀಗೆ ಮಾಡಿ | Facebook Down Technical Glitch Hits Users Globally Here How To Fix It

Facebook ತಾಂತ್ರಿಕ ಸಮಸ್ಯೆಯಿಂದ ಫೇಸ್‌ಬುಕ್ ತಾತ್ಕಾಲಿಕ ಸ್ಥಗಿತ, ನಿಮಗೂ ಸಮಸ್ಯೆಯಾಗುತ್ತಿದ್ದರೆ ಹೀಗೆ ಮಾಡಿ | Facebook Down Technical Glitch Hits Users Globally Here How To Fix It



Facebook ತಾಂತ್ರಿಕ ಸಮಸ್ಯೆಯಿಂದ ಫೇಸ್‌ಬುಕ್ ತಾತ್ಕಾಲಿಕ ಸ್ಥಗಿತ, ನಿಮಗೂ ಸಮಸ್ಯೆಯಾಗುತ್ತಿದ್ದರೆ ಹೀಗೆ ಮಾಡಿ | Facebook Down Technical Glitch Hits Users Globally Here How To Fix It

ತಾಂತ್ರಿಕ ಸಮಸ್ಯೆಯಿಂದ ಫೇಸ್‌ಬುಕ್ ತಾತ್ಕಾಲಿಕ ಸ್ಥಗಿತ, ನಿಮಗೂ ಸಮಸ್ಯೆಯಾಗುತ್ತಿದ್ದರೆ ಹೀಗೆ ಮಾಡಿ, ಮೊಬೈಲ್ ಹಾಗೂ ಡೆಸ್ಕ್‌ಟಾಪ್‌ನಲ್ಲಿ ಫೇಸ್‌ಬುಕ್ ಲಾಗಿನ್ ಆಗಲು ಸಾಧ್ಯವಾಗದೇ ಹಲವರು ಸಮಸ್ಯೆ ಎದುರಿಸುತ್ತಿದ್ದಾರೆ. 

ನವದೆಹಲಿ (ಮಾ.0) ಭಾರತ ಸೇರಿದಂತೆ ಹಲವೆಡೆ ಫೇಸ್‌ಬುಕ್ ಡೌನ್ ಆಗಿದೆ. ಬಳಕೆದಾರರು ಫೇಸ್‌ಬುಕ್ ಲಾಗಿನ್ ಆಗಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ವಿಶೇಷವಾಗಿ ಕಂಟೆಂಟ್ ಕ್ರಿಯೇಟರ್ಸ್ ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರಂಭದಲ್ಲಿ ಅಮೆರಿಕದಲ್ಲಿ ಫೇಸ್‌ಬುಕ್ ಸಮಸ್ಯೆ ಎದುರಿಸಿತ್ತು. ಇದರ ಬೆನ್ನಲ್ಲೇ ಕೆನಡಾ, ಭಾರತ, ಯುಕೆ, ಪೊಲೆಂಡ್, ಇಟಲಿ ಸೇರಿದಂತೆ ಹಲವು ದೇಶಗಳಲ್ಲಿ ಬಳಕೆದಾರರು ಫೇಸ್‌ಬುಕ್ ಸಮಸ್ಯೆ ಎದುರಿಸುತ್ತಿರುವುದಾಗಿ ದೂರಿದ್ದಾರೆ.

ಪಾಸ್‌ವರ್ಡ್ ಹ್ಯಾಕ್ ಆತಂಕ

ಮೆಟಾ ಮಾಲೀಕತ್ವದ ಫೇಸ್‌ಬುಕ್ ತಾಂತ್ರಿಕ ಸಮಸ್ಯೆ ಎದುರಿಸಿದೆ. ಎಂದಿನಂತೆ ಫೇಸ್‌ಬುಕ್ ತೆರೆಯುತ್ತದ್ದಂತೆ ಅಚಾನಕ್ಕಾಗಿ ಲಾಗ್ ಔಟ್ ಆಗಿದೆ. ಇತ್ತ ಮರಳಿ ಲಾಗಿನ್ ಆಗಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಹಲವರಿಗೆ ಫೇಸ್‌ಬುಕ್ ಲಿಂಕ್ ಓಪನ್ ಆಗುತ್ತಿಲ್ಲ. ಕೆಲ ಬಳಕೆದಾರರಿಗೆ ಸೆಶನ್ ಎಕ್ಸ್‌ಪೈರ್ಡ್ ಎಂದು ತೋರಿಸುತ್ತಿದೆ. ಇದೇ ವೇಳೆ ಕೆಲ ಬಳಕೆದಾರರು ಫೇಸ್‌ಬುಕ್ ಪಾಸ್‌ವರ್ಡ್ ಹ್ಯಾಕ್ ಆಗಿರುವ ಸಾಧ್ಯತೆ ಇದೆ ಎಂದು ಆತಂಕಗೊಂಡ ಘಟನೆಗಳು ನಡೆದಿದೆ.

ಫೇಸ್‌ಬುಕ್ ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಕುರಿತು ಡೌನ್‌ಡಿಟೆಕ್ಟರ್ ವರದಿ ಮಾಡಿದೆ. ಹಲವು ಗಂಟೆಗಳಿಂದ ಬಳಕೆದಾರರು ಪರದಾಡುತ್ತಿರುವುದಾಗಿ ವರದಿಯಾಗಿದೆ. ಇದೇ ವೇಳೆ ಫೇಸ್‌ಬುಕ್ ಆ್ಯಡ್ಸ್ ಮ್ಯಾನೇಜರ್ ಕೂಡ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಸಾವಿರಾರು ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಜಾಹೀರಾತು, ಪ್ರಮೋಶನ್ ಸಾಧ್ಯವಾಗದೇ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿದೆ.

ಮೆಟಾ ಪ್ರತಿಕ್ರಿಯೆ

ಫೇಸ್‌ಬುಕ್ ಡೌನ್ ಕುರಿತು ಮೆಟಾ ಪ್ರತಿಕ್ರಿಯೆ ನೀಡಿದೆ. ತಾಂತ್ರಿಕ ಸಿಬ್ಬಂದಿ ವರ್ಗ ಈ ಕುರಿತು ಗಮನಹರಿಸಿದೆ. ತಕ್ಷಣವೇ ಕಾರ್ಯಪ್ರವೃತ್ತಗೊಂಡಿದೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವುದಾಗಿ ಸ್ಪಷ್ಟಪಡಿಸಿದೆ. ಇದೇ ವೇಳೆ ಹಲವು ಬಳಕೆದಾರರು ಫೇಸ್‌ಬುಕ್ ಸಮಸ್ಯೆ ಅಂತ್ಯಗೊಂಡಿರುವುದಾಗಿ ಹೇಳಿದ್ದಾರೆ. ಇದೇ ವೇಳೆ ಕೆಲ ಬಳಕೆದಾರರು ಫೇಸ್‌ಬುಕ್ ಸಮಸ್ಯೆ ಬಗೆಹರಿದಿಲ್ಲ ಎಂದಿದ್ದಾರೆ.

ಈಗಲೂ ಸಮಸ್ಯೆ ಎದುರಿಸುತ್ತಿದ್ದರೆ ಏನು ಮಾಡಬೇಕು

ಫೇಸ್‌ಬುಕ್ ತಾಂತ್ರಿಕ ಸಮಸ್ಯೆ ಬಗೆಹರಿಸಲಾಗಿದೆ. ಇನ್ನೂ ಸಮಸ್ಯೆ ಬಗೆಹರಿಯದಿದ್ದರೆ ಬ್ರೌಸರ್ ಕ್ಯಾಶೆ ಕ್ಲಿಯರ್ ಮಾಡಲು ಅಥವಾ ಅಪ್‌ಡೇಟ್ ಮಾಡಲು ಸೂಚನೆ ನೀಡಲಾಗಿದೆ. ಯಾರಿಗೆಲ್ಲಾ ಫೇಸ್‌ಬುಕ್ ಮತ್ತೆ ಸಮಸ್ಯೆ ಒಡ್ಡುತ್ತಿದ್ದರೆ ಕ್ಯಾಶೆ ಕ್ಲಿಯರ್ ಅಥವಾ ಅಪ್‌ಡೇಟ್ ಮಾಡಿ ಸರಿಪಡಿಸಿಕೊಳ್ಳಿ.



Source link

Leave a Reply

Your email address will not be published. Required fields are marked *