Uttara Kannada sirsi 22 Year Old Youth Shoots Self Karwar ಜಿಲ್ಲೆಯ Sirsi ತಾಲೂಕಿನ ಇಟಗುಳಿ ಸಮೀಪದ ಮುಡೇಸರದಲ್ಲಿ 22 ವರ್ಷದ ಯುವಕನೊಬ್ಬ ನಾಡ ಬಂದೂಕಿನಿಂದ ಗುಂಡು ಹೊಡೆದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಭಾಗದಲ್ಲಿ ಹೃದಯ ಕಲುಕುವ ಘಟನೆ ಬೆಳಕಿಗೆ ಬಂದಿದೆ. Karwar ಜಿಲ್ಲೆಯ Sirsi ತಾಲೂಕಿನ ಇಟಗುಳಿ ಸಮೀಪದ ಮುಡೇಸರದಲ್ಲಿ 22 ವರ್ಷದ ಯುವಕನೊಬ್ಬ ನಾಡ ಬಂದೂಕಿನಿಂದ ಗುಂಡು ಹೊಡೆದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮ*ಹತ್ಯೆ ಮಾಡಿಕೊಂಡ ಯುವಕನನ್ನು ರವೀಶ್ ಮಾದೇವ ನಾಯ್ಕ (22) ಎಂದು ಗುರುತಿಸಲಾಗಿದೆ. ಮದ್ಯ ವ್ಯಸನಿಯಾಗಿದ್ದ ರವೀಶ್ ಕೂಲಿ ಕೆಲಸ ಮಾಡುತ್ತಿದ್ದನು. ಇತ್ತೀಚೆಗೆ ಪ್ರೇಮ ವೈಫಲ್ಯದಿಂದ ಮನನೊಂದು ಇದ್ದನೆಂಬ ಮಾಹಿತಿ ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.

ಮನೆಯ ಪಕ್ಕದಲ್ಲಿರುವ ಅರಣ್ಯ ಪ್ರದೇಶಕ್ಕೆ ತೆರಳಿದ್ದ ರವೀಶ್, ಅಲ್ಲೇ ನಾಡ ಬಂದೂಕಿನಿಂದ ತನ್ನ ಮೇಲೆ ಗುಂಡು ಹಾರಿಸಿಕೊಂಡಿದ್ದಾನೆ. ಗುಂಡಿನ ಸದ್ದು ಕೇಳಿ ಸ್ಥಳೀಯರು ಓಡಿಬಂದಾಗ ಘಟನೆ ಬೆಳಕಿಗೆ ಬಂದಿದೆ.

ಘಟನೆಯ ಸಂಬಂಧ Sirsi Rural Police Station ನಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.

Source link
ಮದ್ಯದ ಮತ್ತಿನಲ್ಲಿ ನಾಡ ಬಂದೂಕಿನಿಂದ ಗುಂಡು ಹೊಡೆದುಕೊಂಡು ಶಿರಸಿ ಯುವಕ ಸಾವು