Headlines

ರಾತ್ರಿ ಈ ಆಹಾರಗಳ ಸೇವನೆ ಮಾಡುವ ಅಭ್ಯಾಸವಿದ್ಯಾ? ಹಾಗಿದ್ರೆ ನೀವು ವಿಷ ಸೇವಿಸುತ್ತಿದ್ದೀರಿ ಎಂದರ್ಥ!

ರಾತ್ರಿ ಈ ಆಹಾರಗಳ ಸೇವನೆ ಮಾಡುವ ಅಭ್ಯಾಸವಿದ್ಯಾ? ಹಾಗಿದ್ರೆ ನೀವು ವಿಷ ಸೇವಿಸುತ್ತಿದ್ದೀರಿ ಎಂದರ್ಥ!


ರಾತ್ರಿಯ ನಿದ್ದೆ (ನಿದ್ರೆ) ಮನುಷ್ಯನಿಗೆ ತುಂಬಾ ಮುಖ್ಯ. ಈ ಸಮಯದಲ್ಲಿ ದೇಹಕ್ಕೆ ವಿಶ್ರಾಂತಿ ಅಗತ್ಯವಿದೆ. ಯಾವುದೇ ರಾತ್ರಿ ಮುಖ್ಯ ಸೇವನೆ ಮಾಡುವ ಆಹಾರ ಎಲ್ಲಾ ರೀತಿಯಿಂದಲೂ ಬಹಳ ಇರುತ್ತದೆ. ಸೂರ್ಯ ಮುಳುಗಿದ ನಂತರ ನಮ್ಮ ಜೀರ್ಣಕ್ರಿಯೆ ನಿಧಾನವಾಗುವುದರಿಂದ ರಾತ್ರಿ ಯಾವ ಆಹಾರವನ್ನು ಸೇವಿಸಲಾಗುತ್ತದೆ, ಎಷ್ಟು ಪ್ರಮಾಣದಲ್ಲಿ ಸೇವಿಸುತ್ತೇವೆ ಎಂಬುದು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ರಾತ್ರಿ ಸರಿಯಾದ ಆಹಾರ ಪದ್ಧತಿ ಪಾಲಿಸದಿದ್ದರೆ ದೇಹಕ್ಕೆ ಸರಿಯಾಗಿ ವಿಶ್ರಾಂತಿ ಸಿಗುವುದಿಲ್ಲ. ಹೊಟ್ಟೆ ತುಂಬಿರುವ ಅನುಭವ, ಗ್ಯಾಸ್ಟ್ರಿಕ್, ಆಸಿಡಿಟಿ, ಎದೆ ಉರಿ, ನಿದ್ರೆಯಲ್ಲಿರುವಾಗ ಮಧ್ಯೆ ಎಚ್ಚರವಾಗುವುದು ಅಥವಾ ಬೆಳಿಗ್ಗೆ ಎದ್ದ ತಕ್ಷಣ ದಣಿವು ಕಾಣಿಸಿಕೊಳ್ಳುವುದೆಲ್ಲವೂ ಸೇವಿಸುತ್ತಿರುವ ಆಹಾರ ಸರಿಯಾಗಿಲ್ಲ. ಮತ್ತೆ ಕೆಲವರಿಗೆ ಬೆವರು, ಬೆಳಿಗ್ಗೆ ತಲೆ ಭಾರವಾಗಿರುವುದು, ತೂಕ ಹೆಚ್ಚಾಗುವುದು, ಮಲಬದ್ಧತೆ ಹಾಗೂ ದಿನವಿಡೀ ಸುಸ್ತು ಕಾಣಿಸಿಕೊಳ್ಳಬಹುದು. ಎಲ್ಲಾವೂ ರಾತ್ರಿ ಊಟದ ಸಮಯ, ಅಭ್ಯಾಸಗಳು ಸರಿಯಾಗಿಲ್ಲವೆಂದು ಸೂಚಿಸುತ್ತವೆ. ಯಾವ ರಾತ್ರಿಯ ಸಮಯದಲ್ಲಿ ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು ಮತ್ತು ಮಾಡಬಾರದು ಎಂದು ತಿಳಿದುಕೊಳ್ಳಿ. ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಸ್ಟೋರಿಯಲ್ಲಿ ತಿಳಿಸಿರುವ ಸಲಹೆಗಳನ್ನು ತಪ್ಪದೆ ಪಾಲಿಸಿ.

ರಾತ್ರಿ ಯಾವ ಆಹಾರಗಳನ್ನು ತಿನ್ನಬಾರದು?

  • ರಾತ್ರಿ ಜೀರ್ಣಿಸಿಕೊಳ್ಳಲು ಕಷ್ಟಕರವಾದ ಮತ್ತು ಹೊಟ್ಟೆಗೆ ಒತ್ತಡ ನೀಡುವ ಆಹಾರಗಳನ್ನು ಸೇವಿಸಬಾರದು.
  • ಎಣ್ಣೆಯಲ್ಲಿ ಕರಿದ ಮತ್ತು ಅತಿ ಮಸಾಲೆಯುಕ್ತ ಆಹಾರಗಳು ಜೀರ್ಣಕ್ರಿಯೆಯನ್ನು ಹದಗೆಡಿಸಿ ಆಸಿಡಿಟಿ ಹೆಚ್ಚಿಸಬಹುದು.
  • ಹೆಚ್ಚು ಸಿಹಿ ಪದಾರ್ಥಗಳು ರಕ್ತದಲ್ಲಿನ ಸಕ್ಕರೆ ಅಸ್ಥಿರಗೊಳಿಸಿ ನಿದ್ರೆಗೆ ಅಡ್ಡಿಪಡಿಸಬಹುದು.
  • ಹೆಚ್ಚು ಉಪ್ಪು ಆಹಾರಗಳು ನೀರನ್ನು ಹಿಡಿದಿಟ್ಟುಕೊಳ್ಳುವ ಕಾರಣ ಊತ ಮತ್ತು ಅಸ್ವಸ್ಥತೆ ಉಂಟಾಗಬಹುದು.
  • ಪ್ರೊಸೆಸ್ಡ್ ಮತ್ತು ಜಂಕ್ ಫುಡ್‌ಗಳಲ್ಲಿ ಇರುವ ಕೊಬ್ಬು ಜೀರ್ಣಕ್ರಿಯೆಯನ್ನು ಮತ್ತಷ್ಟು ನಿಧಾನಗೊಳಿಸುತ್ತದೆ.
  • ರಾತ್ರಿ ಚಹಾ, ಕಾಫಿ ಅಥವಾ ಕೆಫೀನ್ ಇರುವ ಪಾನೀಯಗಳನ್ನು ಸೇವಿಸಬಾರದು.
  • ತುಂಬಾ ತಂಪಾದ ಅಥವಾ ಹಾಲು ಉತ್ಪನ್ನಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ.

ರಾತ್ರಿ ಸಮಯದಲ್ಲಿ ಯಾವ ರೀತಿಯ ಆಹಾರವನ್ನು ಸೇವಿಸಬೇಕು?

  • ರಾತ್ರಿ ಸಮಯದಲ್ಲಿ ಹಗುರವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸುವುದು ಉತ್ತಮ.
  • ಕಡಿಮೆ ಪ್ರಮಾಣದಲ್ಲಿ ಬೇಯಿಸಿದ ತರಕಾರಿಗಳು
  • ದಾಲ್ (ಬೇಳೆ)
  • ರೊಟ್ಟಿ ಅಥವಾ ಸ್ವಲ್ಪ ಅನ್ನ
  • ಖಿಚ್ಡಿ ಅಥವಾ ಸೂಪ್ನಿ
  • ಯಮಿತ ಪ್ರಮಾಣದಲ್ಲಿ ಮೊಸರು ಅಥವಾ ಮಜ್ಜಿಗೆ.

ಇದನ್ನೂ ಓದಿ: ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕು ಅಂದ್ರೆ ಮಲಗುವ ಮೊದಲು ಈ ಆಹಾರಗಳನ್ನು ಸೇವಿಸಬೇಡಿ

ಉತ್ತಮ ಆರೋಗ್ಯಕ್ಕಾಗಿ ಇನ್ನಷ್ಟು ಸಲಹೆಗಳು:

  • ಮಲಗುವ ಕನಿಷ್ಠ ಎರಡು ರಿಂದ ಮೂರು ಗಂಟೆಗಳ ಮೊದಲು ರಾತ್ರಿ ಊಟಕ್ಕೆ ಮಾಡಬೇಕು.
  • ಊಟದ ತಕ್ಷಣ ಮಲಗುವುದನ್ನು ತಪ್ಪಿಸಿ, ಸ್ವಲ್ಪ ಹೊತ್ತು ವಾಕಿಂಗ್ ಮಾಡಿ.
  • ಟಿವಿ ಅಥವಾ ಮೊಬೈಲ್ ನೋಡುತ್ತಾ ಊಟ ಮಾಡುವುದನ್ನು ಬಿಡಿ, ಹೊಟ್ಟೆ ತುಂಬಿದಾಗ ತಿಳಿಯುತ್ತದೆ.
  • ರಾತ್ರಿ ಹೊತ್ತು ಹೆಚ್ಚು ನೀರು ಅಥವಾ ತುಂಬಾ ತಣ್ಣಗಿರುವ ನೀರನ್ನು ಕುಡಿಯಬಾರದು.
  • ಬೆಳಿಗ್ಗೆ ಏಳುವ ಮತ್ತು ರಾತ್ರಿ ನಿದ್ರೆ ಮಾಡುವ ಸಮಯವನ್ನು ನಿಗದಿಪಡಿಸಬೇಕು.
  • ಒತ್ತಡವನ್ನು ಕಡಿಮೆ ಮಾಡಿಕೊಂಡು ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *