Headlines

ಮನೆ ಮನದಲ್ಲಿ ಬೆಳಕು ಬೀರುವ ನಗುವಿಗೆ.. ತುಂಟ ಕಣ್ಣಿನ ಪುಟ್ಟ ಮಗಳಿಗೆ ರಿಷಬ್ ಶೆಟ್ಟಿಯ ಹುಟ್ಟುಹಬ್ಬದ ಹಾರೈಕೆ!

ಮನೆ ಮನದಲ್ಲಿ ಬೆಳಕು ಬೀರುವ ನಗುವಿಗೆ.. ತುಂಟ ಕಣ್ಣಿನ ಪುಟ್ಟ ಮಗಳಿಗೆ ರಿಷಬ್ ಶೆಟ್ಟಿಯ ಹುಟ್ಟುಹಬ್ಬದ ಹಾರೈಕೆ!

ಮನೆ ಮನದಲ್ಲಿ ಬೆಳಕು ಬೀರುವ ನಗುವಿಗೆ.. ತುಂಟ ಕಣ್ಣಿನ ಪುಟ್ಟ ಮಗಳಿಗೆ ರಿಷಬ್ ಶೆಟ್ಟಿಯ ಹುಟ್ಟುಹಬ್ಬದ ಹಾರೈಕೆ!

ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ ರಾಧ್ಯಳ ಬಾಲ್ಯದ ಸುಂದರ ಕ್ಷಣಗಳು, ಆಕೆಯ ತುಂಟಾಟ, ನಗು ಮತ್ತು ತಂದೆ-ತಾಯಿಯ ಜೊತೆಗಿನ ಮಧುರ ಬಾಂಧವ್ಯದ ದೃಶ್ಯಗಳಿವೆ. ಆರಾಧ್ಯ ಹುಟ್ಟಿದ ದಿನದಿಂದ ಇಂದಿನವರೆಗೆ ಆಕೆ ಬೆಳೆದು ಬಂದ ಹಾದಿಯನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಬೆಂಗಳೂರು: ಸ್ಯಾಂಡಲ್‌ವುಡ್‌ನ ‘ಡಿವೈನ್ ಕಪಲ್’ ಎಂದೇ ಖ್ಯಾತರಾಗಿರುವ ರಿಷಬ್ ಶೆಟ್ಟಿ (Rishab Shetty) ಮತ್ತು ಪ್ರಗತಿ ಶೆಟ್ಟಿ (Pragathi Shetty) ಅವರ ಮನೆಯಲ್ಲಿ ಇಂದು ಹಬ್ಬದ ವಾತಾವರಣ. ಹೌದು, ಈ ಕ್ಯೂಟ್ ದಂಪತಿಯ , ಅಭಿಮಾನಿಗಳ ಅಚ್ಚುಮೆಚ್ಚಿನ ‘ಲಿಟಲ್ ಪ್ರಿನ್ಸೆಸ್’ ರಾಧ್ಯ (Raadya) ಇಂದು ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾಳೆ.

ತನ್ನ ಮುಗ್ಧ ನಗು ಮತ್ತು ತುಂಟಾಟದ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಆರಾಧ್ಯಗೆ ಇಂದು ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ರಾಧ್ಯಾ ಅಪ್ಪ ರಿಷಬ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಗಳ ಸುಂದರ ಕ್ಷಣಗಳನ್ನೊಳಗೊಂಡ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, "ಮನೆ ಮನದಲ್ಲಿ ಬೆಳಕು ಬೀರುವ ನಗುವಿಗೆ.. ತುಂಟ ಕಣ್ಣಿನ ಪುಟ್ಟ ಮಗಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.. Happy birthday to our little princess Raadya" ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ವೈರಲ್ ಆದ ಕ್ಯೂಟ್ ವಿಡಿಯೋ:

ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ ರಾಧ್ಯಳ ಬಾಲ್ಯದ ಸುಂದರ ಕ್ಷಣಗಳು, ಆಕೆಯ ತುಂಟಾಟ, ನಗು ಮತ್ತು ತಂದೆ-ತಾಯಿಯ ಜೊತೆಗಿನ ಮಧುರ ಬಾಂಧವ್ಯದ ದೃಶ್ಯಗಳಿವೆ.

ರಾಧ್ಯ ಹುಟ್ಟಿದ ದಿನದಿಂದ ಇಂದಿನವರೆಗೆ ಆಕೆ ಬೆಳೆದು ಬಂದ ಹಾದಿಯನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. "ಅಪ್ಪನಂತೆಯೇ ಕಣ್ಣುಗಳು, ಅಮ್ಮನಂತೆಯೇ ಆ ನಗು" ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಅಭಿಮಾನಿಗಳ ಹಾರೈಕೆ:

ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಜೋಡಿಯ ಮಕ್ಕಳೆಂದರೆ ಕನ್ನಡಿಗರಿಗೆ ಎಲ್ಲಿಲ್ಲದ ಪ್ರೀತಿ. ಆ ಮಕ್ಕಳ ಚೇಷ್ಟೆಗಳು, ತುಂಟಾಟಗಳು ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತವೆ. ಇಂದು ರಾಧ್ಯಳ ಜನ್ಮದಿನವಾದ್ದರಿಂದ, ರಿಷಬ್ ಅಭಿಮಾನಿಗಳ ಸಂಘಟನೆಗಳು ಮತ್ತು ಚಿತ್ರರಂಗದ ಗಣ್ಯರು ಸೋಷಿಯಲ್ ಮೀಡಿಯಾ ಮೂಲಕ ಈ ಪುಟ್ಟ ದೇವತೆಗೆ ಶುಭ ಕೋರುತ್ತಿದ್ದಾರೆ.

ಒಟ್ಟಿನಲ್ಲಿ, ಡಿವೈನ್ ಸ್ಟಾರ್ ದಂಪತಿಗಳ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದ್ದು, ಮಗಳು ರಾಧ್ಯಳ ಈ ಹುಟ್ಟುಹಬ್ಬದ ವಿಡಿಯೋ ಈಗ ಸ್ಯಾಂಡಲ್‌ವುಡ್ ಅಂಗಳದಲ್ಲಿ ಟ್ರೆಂಡಿಂಗ್‌ನಲ್ಲಿದೆ. ನಮ್ಮ ಕಡೆಯಿಂದಲೂ ಈ ಮುದ್ದಾದ ಮಗಳಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು!
View this post on Instagram
A post shared by Rishab Shetty (@rishabshettyofficial)

Source link

Leave a Reply

Your email address will not be published. Required fields are marked *