Headlines

ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪಲ್ಟಿ: ಕೈಗೆ ಸಿಕ್ಕ ಕಾರು ಚಾಲಕನಿಗೆ ಕೈರುಚಿ ತೋರಿಸಿದ ಜನ | Car Driver Rash Driving Hits Several Vehicles Near Asm Womens College Ballari

ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪಲ್ಟಿ: ಕೈಗೆ ಸಿಕ್ಕ ಕಾರು ಚಾಲಕನಿಗೆ ಕೈರುಚಿ ತೋರಿಸಿದ ಜನ | Car Driver Rash Driving Hits Several Vehicles Near Asm Womens College Ballari



ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪಲ್ಟಿ: ಕೈಗೆ ಸಿಕ್ಕ ಕಾರು ಚಾಲಕನಿಗೆ ಕೈರುಚಿ ತೋರಿಸಿದ ಜನ | Car Driver Rash Driving Hits Several Vehicles Near Asm Womens College Ballari

ಬಳ್ಳಾರಿಯ ಎಎಸ್ಎಂ ಮಹಿಳಾ ಕಾಲೇಜು ಬಳಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಚಾಲಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು, ಕಾರು ಪಲ್ಟಿಯಾಗಿ ಜಖಂಗೊಂಡಿದೆ. 

ಕೈಗೆ ಸಿಕ್ಕ ಕಾರು ಚಾಳಕನಿಗೆ ಬಿಸಿ ಬಿಸಿ ಕಜ್ಜಾಯ

ಬಳ್ಳಾರಿ : ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿ ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಸಾರ್ವಜನಿಕರ ಕೈಗೆ ಸಿಕ್ಕ ಕಾರು ಚಾಲಕನಿಗೆ ಜನ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಗಣಿನಾಡು ಬಳ್ಳಾರಿಯಲ್ಲಿ ನಡೆದಿದೆ. ಎರಡು ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದ ನಂತ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಸಾರ್ವನಿಕರ ಕೈಗ ಸಿಕ್ಕ ಕಾರು ಚಾಲಕನಿಗೆ ಸಾರ್ವಜನಿಕರು ತಮ್ಮ ಕೈರುಚಿ ತೋರಿಸಿದ್ದಾರೆ. ಬಳ್ಳಾರಿ ಎಎಸ್ಎಂ ಮಹಿಳಾ ಕಾಲೇಜು ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಎರಡಕ್ಕೂ ಹೆಚ್ಚು ಬೈಕ್ ಕಾರು ಹಾಗೂ ಆಟೋಗೆ ಹಾನಿಯಾಗಿದೆ. ಜೊತೆಗೆ ಪಲ್ಟಿಯಾದ ಕಾರಿಗೂ ತೀವ್ರ ಹಾನಿಯಾಗಿದ್ದು, ಮುಂಭಾಗ ಹಿಂಭಾಗ ಹಾಗೂ ಕಿಟಕಿಯ ಗಾಜುಗಳು ಪುಡಿ ಪುಡಿಯಾಗಿವೆ. ಕಾರು ಚಾಲಕನ ಹುಚ್ಚಾಟದಿಂದ ರೊಚ್ಚಿಗೆದ್ದ ಜನ ಆತ ಗಾಯಗೊಂಡಿರುವುದನ್ನು ಲೆಕ್ಕಿಸದೇ ಬಾರಿಸಿದ್ದು, ಸ್ವಲ್ಪ ಹೊತ್ತಿನಲ್ಲಿ ಇಲ್ಲಿನ ಕಾಲೇಜು ಬಿಡುತ್ತಿತ್ತು, ಆ ಸಮಯದಲ್ಲೇನಾದರೂ ಈತ ಹೀಗೆ ಹುಚ್ಚಾಟವಾಡಿದ್ದರೆ ಹಲವು ಮಕ್ಕಳ ಪ್ರಾಣಕ್ಕೆ ಹಾನಿಯಾಗುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರು ಚಾಲಕನ ಅವಾಂತರದಿಂದಾಗಿ ಮೂವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ವಿಮ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಕಾರು ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರರು ಗಾಯಗೊಂಡಿದ್ದು, ಘಟನೆಯಿಂದ ಕುಪಿತರಾದ ಸಾರ್ವಜನಿಕರು ಬಳ್ಳಾರಿ ಎಎಸ್ಎಂ ಮಹಿಳಾ ಕಾಲೇಜು ಬಳಿ ಕಾರು ಪಲ್ಟಿಯಾಗುತ್ತಿದ್ದಂತೆ ಕಾರು ಚಾಲಕನನ್ನು ಹೊರಗೆಳೆದು ಥಳಿಸಿದ್ದು, ಬಳಿಕ ಆಸ್ಪತ್ರೆಗೆ ಸೇರಿಸಿದ್ದಾರೆ. ಆಂಧ್ರಪ್ರದೇಶ ನೋಂದಣಿಯ ಕಾರು ಇದಾಗಿದೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಇವನ್ಯಾರು ಅಂತ ಒಬ್ರಿಗೂ ಗೊತ್ತಿಲ್ಲ: ಮಗನ ಶಾಲೆಗೆ ಹೋದ ಅಪ್ಪನ ಬೈಗುಳದ ವೀಡಿಯೋ ಭಾರಿ ವೈರಲ್



Source link

Leave a Reply

Your email address will not be published. Required fields are marked *