Headlines

US-Iran Conflict: ಹೋರಾಡದೆ ಭಾರೀ ಬೆಲೆ ತೆರುತ್ತಿದೆ ಭಾರತ, ನಾಲ್ಕೇ ದಿನದಲ್ಲಿ 2,000 ಕೋಟಿ ರೂ. ನಷ್ಟವಾಗಿದ್ದು ಹೇಗೆ? | Us Iran Conflict India Pays A Heavy Price Without Fighting Rs 2 000 Crore Loss In Just 4 Days

US-Iran Conflict: ಹೋರಾಡದೆ ಭಾರೀ ಬೆಲೆ ತೆರುತ್ತಿದೆ ಭಾರತ, ನಾಲ್ಕೇ ದಿನದಲ್ಲಿ 2,000 ಕೋಟಿ ರೂ. ನಷ್ಟವಾಗಿದ್ದು ಹೇಗೆ? | Us Iran Conflict India Pays A Heavy Price Without Fighting Rs 2 000 Crore Loss In Just 4 Days



US-Iran Conflict: ಹೋರಾಡದೆ ಭಾರೀ ಬೆಲೆ ತೆರುತ್ತಿದೆ ಭಾರತ, ನಾಲ್ಕೇ ದಿನದಲ್ಲಿ 2,000 ಕೋಟಿ ರೂ. ನಷ್ಟವಾಗಿದ್ದು ಹೇಗೆ? | Us Iran Conflict India Pays A Heavy Price Without Fighting Rs 2 000 Crore Loss In Just 4 Days

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಉದ್ವಿಗ್ನತೆಯು ಭಾರತದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಳೆದ ನಾಲ್ಕೇ ದಿನಗಳಲ್ಲಿ, ಕಚ್ಚಾ ತೈಲ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತದಿಂದಾಗಿ ದೇಶವು 2,000 ಕೋಟಿ ರೂಪಾಯಿಗೂ ಅಧಿಕ ಆರ್ಥಿಕ ಹೊರೆಯನ್ನು ಹೊತ್ತಿದೆ.

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಉಲ್ಬಣಗೊಂಡಿರುವ ಯುದ್ಧದ ಉದ್ವಿಗ್ನತೆಯು ಭಾರತದ ಆರ್ಥಿಕತೆಯ ಮೇಲೆ ದಾಳಿ ಮಾಡಿದೆ. ಯುದ್ಧದಲ್ಲಿ ಭಾಗಿಯಾಗದಿದ್ದರೂ, ಕಳೆದ ನಾಲ್ಕು ದಿನಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಆರ್ಥಿಕ ಹೊರೆಯನ್ನು ಹೊತ್ತಿದೆ. ಪ್ರಮುಖವಾಗಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವು ದೇಶದ ಬೊಕ್ಕಸ ಸೋರುತ್ತಿದೆ.

ನಾಲ್ಕು ದಿನಗಳಲ್ಲಿ 1,820 ಕೋಟಿ ರೂಪಾಯಿ ತೈಲ ಹೊರೆ

ಭಾರತವು ತನ್ನ ಇಂಧನ ಅಗತ್ಯಕ್ಕಾಗಿ ಪ್ರತಿದಿನ ಸುಮಾರು 5 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಯುದ್ಧದ ಹಿನ್ನೆಲೆಯಲ್ಲಿ ಪ್ರತಿ ಬ್ಯಾರೆಲ್‌ಗೆ ಸರಾಸರಿ 10 ಡಾಲರ್ ಹೆಚ್ಚಳವಾಗಿದ್ದು, ದಿನಕ್ಕೆ 50 ಮಿಲಿಯನ್ ಡಾಲರ್ ಹೆಚ್ಚುವರಿ ವೆಚ್ಚವಾಗುತ್ತಿದೆ. ರೂಪಾಯಿ ಲೆಕ್ಕದಲ್ಲಿ ಇದು ದಿನಕ್ಕೆ 455 ಕೋಟಿ ರೂಪಾಯಿಯಾಗುತ್ತದೆ. ಈ ಲೆಕ್ಕಾಚಾರದಂತೆ ಕೇವಲ ನಾಲ್ಕು ದಿನಗಳಲ್ಲಿ ತೈಲ ಆಮದಿಗಾಗಿ ಭಾರತ ಬರೊಬ್ಬರಿ 1,820 ಕೋಟಿ ರೂಪಾಯಿ ಹೆಚ್ಚುವರಿ ಹಣ ಪಾವತಿಸಿದೆ.

ಇದನ್ನೂ ಓದಿ: Iran War: ಇರಾನ್ ಯುದ್ಧದ ಅಂತ್ಯ ಹೇಗಾಗುತ್ತೋ ಗೊತ್ತಿಲ್ಲ, ಟ್ರಂಪ್ ಸರ್ಕಾರದ ವಿರುದ್ಧ ಸೆನೆಟರ್‌ಗಳ ಆಕ್ರೋಶ!

ಕುಸಿಯುತ್ತಿರುವ ರೂಪಾಯಿ ಮೌಲ್ಯದ ಭೀತಿ

ತೈಲ ಬೆಲೆಯ ಜೊತೆಗೆ ಕುಸಿಯುತ್ತಿರುವ ರೂಪಾಯಿ ಮೌಲ್ಯವು ಗಾಯದ ಮೇಲೆ ಬರೆ ಎಳೆದಂತಾಗಿದೆ. ಭಾರತದ ವಾರ್ಷಿಕ ತೈಲ ಆಮದು ಬಿಲ್ ಸುಮಾರು 160 ಬಿಲಿಯನ್ ಡಾಲರ್ ಆಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕೇವಲ ಒಂದು ರೂಪಾಯಿ ಕುಸಿದರೂ, ವಾರ್ಷಿಕವಾಗಿ 16,000 ಕೋಟಿ ರೂಪಾಯಿ ಹೊರೆಯಾಗುತ್ತದೆ. ಯುದ್ಧದ ಪ್ರಭಾವದಿಂದ ಕಳೆದ ನಾಲ್ಕು ದಿನಗಳಲ್ಲಿ ಸುಮಾರು 180 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ನಷ್ಟ ಈ ರೂಪಾಯಿ ಕುಸಿತದಿಂದ ಉಂಟಾಗಿದೆ.

ಇದನ್ನೂ ಓದಿ: ಟ್ರಂಪ್‌ಗೆ ನೆತನ್ಯಾಹು ‘ಬ್ರೈನ್‌ವಾಶ್‌’? ಇರಾನ್ ಮೇಲಿನ ಅಮೆರಿಕದ ದಾಳಿಯ ಹಿಂದೆ ಅಸಲಿ ಮಾಸ್ಟರ್‌ಮೈಂಡ್ ಯಾರು?

ಒಟ್ಟು 2,000 ಕೋಟಿ ದಾಟಿದ ಆರ್ಥಿಕ ಹಾನಿ

ತೈಲ ಏರಿಕೆ ಮತ್ತು ರೂಪಾಯಿ ದುರ್ಬಲಗೊಳ್ಳುವಿಕೆಯನ್ನು ಒಟ್ಟಾಗಿ ಲೆಕ್ಕಹಾಕಿದರೆ, ಕೇವಲ ನಾಲ್ಕು ದಿನಗಳಲ್ಲಿ ಭಾರತದ ಮೇಲೆ ಬಿದ್ದಿರುವ ಹೆಚ್ಚುವರಿ ಹೊರೆ 2,000 ಕೋಟಿ ರೂಪಾಯಿಗಳನ್ನು ಮೀರಿದೆ. ಸಮುದ್ರ ಮತ್ತು ವಾಯು ಮಾರ್ಗಗಳಲ್ಲಿನ ಅನಿಶ್ಚಿತತೆಯು ಸರಕು ಸಾಗಣೆಯ ವೆಚ್ಚವನ್ನು ಹೆಚ್ಚಿಸಿದ್ದು, ಇದು ಆಮದು ಮತ್ತು ರಫ್ತು ಎರಡರ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: US-Iran Conflict: ಹಲ್ಲು ಕಿತ್ತಿದ ಹಾವಿನಂತಾದ UN, ಇರಾನ್ ಮೇಲಿನ ದಾಳಿಯನ್ನ ವಿಶ್ವಸಂಸ್ಥೆ ಏಕೆ ತಡೆಯುತ್ತಿಲ್ಲ?

ತಜ್ಞರ ಎಚ್ಚರಿಕೆ: ಮುಂದಿನ ಸವಾಲುಗಳೇನು?

ನಿವೃತ್ತ ಐಐಎಂಸಿ ಪ್ರಾಧ್ಯಾಪಕ ಶಿವಾಜಿ ಸರ್ಕಾರ್ ಅವರ ಪ್ರಕಾರ, ಇರಾನ್-ಇಸ್ರೇಲ್ ಸಂಘರ್ಷ ಮುಂದುವರಿದರೆ ಭಾರತದಂತಹ ಆಮದು ಅವಲಂಬಿತ ದೇಶಗಳಲ್ಲಿ ಹಣದುಬ್ಬರ (ಬೆಲೆ ಏರಿಕೆ) ಸ್ಫೋಟಗೊಳ್ಳಬಹುದು. ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ, ಭಾರತವು ತುರ್ತಾಗಿ ಪರ್ಯಾಯ ಇಂಧನ ಮೂಲಗಳು ಮತ್ತು ಕಾರ್ಯತಂತ್ರದ ಮೀಸಲು ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ.



Source link

Leave a Reply

Your email address will not be published. Required fields are marked *