Headlines

ಒಂಟಿಯಾಗಿ ಬದುಕಿ ಬೇಸತ್ತಿದ್ದೇನೆ ನನಗೂ ಒಬ್ಬ ಗೆಳೆಯ ಬೇಕು: ಪತಿ ಸಾವಿನ 3 ವರ್ಷದ ನಂತರ ಮದುವೆ ಮಾತಾಡಿದ ನಟಿ | Malayalam Bigg Boss 7 Fame Model Renu Sudhi Open Up On 2nd Marriage

ಒಂಟಿಯಾಗಿ ಬದುಕಿ ಬೇಸತ್ತಿದ್ದೇನೆ ನನಗೂ ಒಬ್ಬ ಗೆಳೆಯ ಬೇಕು: ಪತಿ ಸಾವಿನ 3 ವರ್ಷದ ನಂತರ ಮದುವೆ ಮಾತಾಡಿದ ನಟಿ | Malayalam Bigg Boss 7 Fame Model Renu Sudhi Open Up On 2nd Marriage



ಒಂಟಿಯಾಗಿ ಬದುಕಿ ಬೇಸತ್ತಿದ್ದೇನೆ ನನಗೂ ಒಬ್ಬ ಗೆಳೆಯ ಬೇಕು: ಪತಿ ಸಾವಿನ 3 ವರ್ಷದ ನಂತರ ಮದುವೆ ಮಾತಾಡಿದ ನಟಿ | Malayalam Bigg Boss 7 Fame Model Renu Sudhi Open Up On 2nd Marriage

ಪತಿ, ನಟ ಕೊಲ್ಲಂ ಸುಧಿ ಅವರ ನಿಧನದ ಮೂರು ವರ್ಷಗಳ ನಂತರ, ಮಾಡೆಲ್ ರೇಣು ಸುಧಿ ಅವರು ಮರುಮದುವೆಯ ಬಗ್ಗೆ ಮಾತನಾಡಿದ್ದಾರೆ. ಒಂಟಿ ಜೀವನದಿಂದ ಬೇಸತ್ತಿದ್ದು, ತನ್ನನ್ನು ಹಾಗೂ ತನ್ನ ಮಕ್ಕಳನ್ನು ಅರ್ಥಮಾಡಿಕೊಳ್ಳುವ ಸಂಗಾತಿಯೊಬ್ಬರು ಬೇಕು ಎಂದು ಅವರು ಹೇಳಿಕೊಂಡಿದ್ದಾರೆ.

ಒಂಟಿಯಾಗಿ ಬದುಕಿ ಬೇಸತ್ತಿದ್ದೇನೆ ನನಗೂ ಒಬ್ಬ ಗೆಳೆಯ ಬೇಕು

ಗಂಡ ಸಾವನ್ನಪ್ಪಿದ ಮೂರು ವರ್ಷಗಳ ನಂತರ ಸೋಶಿಯಲ್ ಮೀಡಿಯಾ ಸ್ಟಾರ್ ಹಾಗೂ ಮಾಡೆಲ್ ಆಗಿರುವ ರೇಣು ಸುಧಿ ಮರು ಮದುವೆಯ ಬಗ್ಗೆ ಮಾತನಾಡಿದ್ದಾರೆ. ಒಂಟಿಯಾಗಿ ಇದ್ದು ಬೇಸತ್ತಿದ್ದೇನೆ, ಜೊತೆಯಾಗಿ ಜೀವಿಸುವ ಅರ್ಥ ಮಾಡಿಕೊಳ್ಳುವ ಸಂಗಾತಿ ಬೇಕು ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ರೇಣು ಸುಧಿಯವರು ಮಲಯಾಳಂನ ಖ್ಯಾತ ಹಾಸ್ಯನಟ, ಮಿಮಿಕ್ರಿ ತಾರೆ, ರಂಗಭೂಮಿ ಹಾಗೂ ದೂರದರ್ಶನದಲ್ಲಿ ಚಾಪು ಮೂಡಿಸಿದ್ದ ಕೊಲ್ಲಂ ಸುಧಿ ಅವರ ಪತ್ನಿಯಾಗಿದ್ದಾರೆ. ಪತಿಯ ಸಾವಿನ ನಂತರ ರೇಣು ಸುಧಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್‌ಗಳಿಗೂ ಅವರು ಗುರಿಯಾಗಿದ್ದರು.

ಪತಿಯ ಸಾವಿನ ನಂತರ ನಟನೆಯತ್ತ ಬಂದ ಅವರು ಮಲೆಯಾಳಂ ಬಿಗ್ಬಾಸ್‌ನಲ್ಲಿ ಭಾಗವಹಿಸಿದ್ದರು. ನಟನೆಯತ್ತ ಬಂದ ಅವರ ಬಗ್ಗೆ ಸಾಕಷ್ಟು ಟೀಕೆ ಹಾಗೂ ಟ್ರೋಲ್‌ಗಳನ್ನು ಎದುರಿಸಿದ್ದರು. ಆರಂಭದಲ್ಲಿ ಟೀಕೆಗಳಿಂದ ಅಸಮಾಧಾನಗೊಂಡಿದ್ದ ರೇಣು ಇಂದು ಹಾಗಿಲ್ಲ. ಅವರು ಅನೇಕ ವಿಷಯಗಳಿಗೆ ತಕ್ಕ ಉತ್ತರ ನೀಡುತ್ತಾರೆ. ಇತ್ತೀಚೆಗೆ ರೇಣು ಮದುವೆಯ ಬಗ್ಗೆ ಮಾತನಾಡಿದ್ದು, ತಮ್ಮನ್ನು ಅರ್ಥಮಾಡಿಕೊಳ್ಳುವ ಯಾರಾದರೂ ಬಂದರೆ ಮದುವೆಯಾಗುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿರುವ ಅವರು, ಒಂಟಿ ಬದುಕಿನಿಂದ ಬೇಸತ್ತಿದ್ದು, ಸಂಗಾತಿಯನ್ನು ಬಯಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಅವರು ಹೀಗೆ ಹೇಳಿಕೊಂಡಿದ್ದಾರೆ. ನನಗೆ ಒಂಟಿಯಾಗಿ ಬದುಕಿ ಬೇಸತ್ತಿದೆ. ನನ್ನನ್ನು ಅರ್ಥಮಾಡಿಕೊಳ್ಳುವ, ನನ್ನನ್ನು ನೋಡಿಕೊಳ್ಳುವ ಮತ್ತು ನನ್ನ ಮಕ್ಕಳನ್ನು ಪ್ರೀತಿಸುವ ಯಾರಾದರೂ ನನಗೆ ಬೇಕು ಎಂದು ನನಗೆ ಅನಿಸಲು ಪ್ರಾರಂಭಿಸಿದೆ. ನನಗೆ ಸಂಗಾತಿ ಬೇಕು ಎಂದು ರೇಣು ಸುಧಿ ಬರೆದಿದ್ದಾರೆ. ಇದರ ಸ್ಕ್ರೀನ್‌ಶಾಟ್ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಅಡ್ಡಾದಿಡ್ಡಿ ಕಾರು ಚಾಲನೆ : ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪಲ್ಟಿ: ಕೈಗೆ ಸಿಕ್ಕ ಕಾರು ಚಾಲಕನಿಗೆ ಕೈರುಚಿ ತೋರಿಸಿದ ಜನ

ಇವರ ಪತಿ ಕೊಲ್ಲಂ ಸುಧಿ ಮಲಯಾಳಂ ದೂರದರ್ಶನ, ರಂಗಭೂಮಿ ಮತ್ತು ಚಲನಚಿತ್ರ ತಾರೆ, ಹಾಸ್ಯನಟ ಮತ್ತು ಮಿಮಿಕ್ರಿ ತಾರೆಯಾಗಿದ್ದರು. ರಿಯಾಲಿಟಿ ಶೋ ಮೂಲಕ ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿದ ಕೊಲ್ಲಂ ಸುಧಿ 2023 ರಲ್ಲಿ ಕಾರು ಅಪಘಾತದಲ್ಲಿ ನಿಧನರಾದರು. 2023ರ ಜೂನ್ 5 ರಂದು ಕಾರ್ಯಕ್ರಮವೊಂದರಿಂದ ಹಿಂತಿರುಗುತ್ತಿದ್ದಾಗ, ತ್ರಿಶೂರ್‌ನ ಕೈಪಮಂಗಲಂನಲ್ಲಿ ಸಂಭವಿಸಿದ ಅಪಘಾತದಲ್ಲಿ. ಅವರು ಪ್ರಯಾಣಿಸುತ್ತಿದ್ದ ಕಾರು ಪಿಕಪ್ ಟ್ರಕ್‌ಗೆ ಡಿಕ್ಕಿ ಹೊಡೆದಿತ್ತು. ಈ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸುಧಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಅವರು ಬದುಕುಳಿಯಲಿಲ್ಲ ಅವರು ಸಾವನ್ನಪ್ಪಿ 3 ವರ್ಷ ಆಗುತ್ತಾ ಬಂದಿದ್ದು, ಪತ್ನಿ ರೇಣು ಸುಧಿ ಈಗ ಮರು ಮದುವೆಯ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಇವನ್ಯಾರು ಅಂತ ಒಬ್ರಿಗೂ ಗೊತ್ತಿಲ್ಲ: ಮಗನ ಶಾಲೆಗೆ ಹೋದ ಅಪ್ಪನ ಬೈಗುಳದ ವೀಡಿಯೋ ಭಾರಿ ವೈರಲ್



Source link

Leave a Reply

Your email address will not be published. Required fields are marked *