ಬಿಗ್‌ಬಾಸ್ ಖ್ಯಾತಿಯ ಡಾಗ್ ಸತೀಶ್, ತಾವು ಮೂತ್ರ ವಿಸರ್ಜನೆ ಮಾಡುವಾಗ ಸುದೀಪ್ ಅವರ ಹಾಡನ್ನು ಬಳಸಿದ ವಿಡಿಯೋದಿಂದ ವಿವಾದ ಸೃಷ್ಟಿಸಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದ್ದು, ತೀವ್ರ ವಿರೋಧ ವ್ಯಕ್ತವಾದರೂ, ಇದು ನನ್ನ ಇಷ್ಟ ಮತ್ತು ವಿಡಿಯೋ ಡಿಲೀಟ್ ಮಾಡುವುದಿಲ್ಲ ಎಂದು ಸತೀಶ್ ಸ್ಪಷ್ಟಪಡಿಸಿದ್ದಾರೆ.
ನಾನು ಸೂ ಸೂ ಮಾಡಿದ್ರೂ ದೇಶದ ತುಂಬೆಲ್ಲಾ ಸುದ್ದಿ ಮಾಡ್ತೀನಿ ಅಂತ ಮೊದ್ಲೇ ಹೇಳಿದ್ನಲ್ವಾ, ನೋಡಿ ಸುದ್ದಿ ಮಾಡಿದ್ದೇನೆ. ಸುದೀಪ್ ಅವರಿಗೆ ಹರ್ಟ್ ಆಗಲಿ ಎಂದು ನಾನು ಸೂ ಸೂ ಮಾಡುವಾಗ ಅವರ ಹಾಡೇನು ಹಾಕಲಿಲ್ಲ. ನಾನು ಮೂತ್ರ ಮಾಡುವಾಗ, ದಾದಾ ಯಾರು ಗೊತ್ತಾ ಎನ್ನೋದು ಮ್ಯಾಚ್ ಆಗಿತ್ತು ಎಂದು ಹಾಕಿರೋದು ಅಷ್ಟೇ ಎಂದು ಬಿಗ್‌ಬಾಸ್ ಡಾಗ್ ಸತೀಶ್ ಇದೀಗ ಹೇಳಿದ್ದಾರೆ.

ಮೂತ್ರ ವಿಸರ್ಜನೆ ಸಮಯದಲ್ಲಿ ಸುದೀಪ್ ಅವರ ಸಿನಿಮಾ ಹಾಡನ್ನು ಹಾಕಿರುವುದಕ್ಕೆ ಕೋಪಗೊಂಡು ಇದಾಗಲೇ ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಅವರು ದೂರು ದಾಖಲು ಮಾಡಿದ್ದಾರೆ. ವಿನಯ್ ಗೌಡ ಕೂಡ ಕಿಡಿ ಕಾರಿದ್ದಾರೆ. ಇದೀಗ ಈ ಬಗ್ಗೆ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಡಾಗ್ ಸತೀಶ್ ಈ ರೀತಿಯಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ನಾನು ಸಿಎಂ ಬಂದು ಹೇಳಿದ್ರೂ ವಿಡಿಯೋ ಡಿಲೀಟ್ ಮಾಡಲ್ಲ. ನಾನಾ, ಅವ್ರಾ ನೋಡಿಯೇ ಬಿಡ್ತೇನೆ. ನಾನೇನು ಸುದೀಪ್ ಅವರ ಫೋಟೋ ಹಾಕಿದ್ದೇನಾ, ಇಲ್ವಲ್ಲಾ. ಯಾವ ಹಾಡು ಹಾಕಬೇಕು ಎನ್ನೋದು ನನ್ನ ಇಷ್ಟ. ಹಾಕಿದ್ದೇನೆ ಅಷ್ಟೇ ಎಂದಿದ್ದಾರೆ ಡಾಗ್.

ಇದರಲ್ಲಿ ವಿವಾದ ಆಗುವಂಥದ್ದು ಏನೂ ಇಲ್ಲ. ಸುಮ್ಮನೇ ಒಂದಷ್ಟು ಜನ ತಂದಿಕ್ಕಲು ನೋಡ್ತಾ ಇದ್ದಾರೆ. ಹಾಡು ಹಾಕಿದ್ರೆ ಏನು ತಪ್ಪು? ಅದು ನನ್ನ ಇಷ್ಟದ ಹಾಡು, ಹಾಕಿದೆ ಅಷ್ಟೇ. ಯಾವುದೇ ಕಾರಣಕ್ಕೂ ವಿಡಿಯೋ ಡಿಲೀಟ್ ಮಾಡಲ್ಲ ಎಂದಿದ್ದಾರೆ.

ಕೆಟ್ಟದ್ದಾಗಿ ಕಮೆಂಟ್ಸ್ ಮಾಡೋದು ಮಾಡಿಕೊಳ್ತಾರೆ. ಕಮೆಂಟ್ಸ್ ಬಂದಿದೆ ಅಂತ ನೀವು ಹೇಳಬೇಕು. ನನಗೆ ಗೊತ್ತೇ ಇಲ್ವಾಲ್ಲಾ. ಕಮೆಂಟ್ಸ್ ಹಾಕೋರನ್ನು ತಗೊಂಡು ನಾನೇನು ಮಾಡಲಿ, ಅವರೇನು ನನಗೆ ದುಡ್ಡು ಕೊಡ್ತಾರಾ, ಇಲ್ವಾ ಇನ್ನೇನು ಕೊಡ್ತಾರೆ, ಕಮೆಂಟ್ಸ್ ಹಾಕೋರು ಹಾಕ್ತಾರೆ ಎಂದು ಎಸ್ಎಸ್ಟಿವಿಗೆ ನೀಡಿರುವ ಸಂದರ್ಶನದಲ್ಲಿ ಡಾಗ್ ಸತೀಶ್ ಹೇಳಿದ್ದಾರೆ.

ನಾನು ಮೀಟರ್ ಇರೋನು, ಮೀಟರ್ಲೆಸ್ ಅಲ್ಲ. ಯಾರೋ ಕುಮ್ಮಕ್ಕು ನೀಡಿ ಪ್ರಚೋದನೆ ಮಾಡ್ತಾದ್ದಾರೆ ಅಷ್ಟೇ. ನನ್ನ ಥೀಮ್ಗೆ ಆ ಹಾಡು ಸ್ಯೂಟ್ ಆಯಿತು. ನನ್ನ ಇನ್ಸ್ಟಾಗ್ರಾಮ್. ನನ್ನ ಇಷ್ಟ, ಯಾವ್ನೂ ಏನೂ ಮಾಡಲು ಆಗಲ್ಲ ಎಂದಿದ್ದಾರೆ.

Source link
ಸಿಎಂ ಬಂದ್ರೂ ಡಿಲೀಟ್ ಮಾಡಲ್ಲ, ಅವ್ರಾ- ನಾನಾ ನೋಡ್ತೇನೆ, ನಾನು ಮೀಟರ್ ಇರೋನು ಎಂದ Dog Satish