ಮನೆ ಲೀಸ್​​ ಹಣದ ವಿಚಾರಕ್ಕೆ ಕಿರಿಕ್​​: ಅಳಿಯನಿಂದಲೇ ಹೋಯ್ತು ಮಾವನ ಜೀವ

ಮನೆ ಲೀಸ್​​ ಹಣದ ವಿಚಾರಕ್ಕೆ ಕಿರಿಕ್​​: ಅಳಿಯನಿಂದಲೇ ಹೋಯ್ತು ಮಾವನ ಜೀವ


ಮೃತ ವ್ಯಕ್ತಿ ಮತ್ತು ಆರೋಪಿಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ

ಬೆಂಗಳೂರು, ಮಾರ್ಚ್ 04: ಮನೆ ಲೀಸ್ ಹಣದ ವಿಚಾರವಾಗಿ ಅಕ್ಕ-ತಮ್ಮನ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆಸ್ಟಿನ್ ಟೌನ್ ನಲ್ಲಿ ನಡೆದಿದೆ. ಅಕ್ಕ-ತಮ್ಮನ ಗಲಾಟೆ ವೇಳೆ ಮಧ್ಯಪ್ರವೇಶಿಸಿದ್ದ ಅಳಿಯನೇ ಮಾವನ ಮೇಲೆ ದಾರುಣವಾಗಿ ದಾಳಿ ನಡೆಸಿ ಕೊಂದಿದ್ದಾನೆ. ಇನಾಯತ್ ಪಾಷಾ ಮೃತ ದುರ್ದೈವಿ, ಆರೋಪಿ ಮಶ್ರೂರ್ ಅಹ್ಮದ್ ಅವರನ್ನು ಬಂಧಿಸಲಾಗಿದೆ.

ಕಳೆದ 11 ವರ್ಷಗಳಿಂದ ವಿವೇಕನಗರದ ಆಸ್ಟಿನ್ ಟೌನ್‌ನಲ್ಲಿರುವ ಅಕ್ಕನ ಮನೆಯನ್ನೇ ಲೀಸ್‌ಗೆ ಇನಾಯತ್ ಒಬ್ಬನೇ ವಾಸವಿದ್ದ. ಮೆಕಾನಿಕ್ ಆಗಿ ಕೆಲಸ ಮಾಡ್ಕೊಂಡಿದ್ದ ಈತ ಅಂಗವಿಕಲ ಕೂಡ. ಈ ನಡುವೆ ಲೀಸ್ ಹಣ ವಾಪಸ್ ನೀಡದೆ ಮನೆ ಖಾಲಿ ಮಾಡುವಂತೆ ಇನಾಯತ್ ಪಾಷಾನನ್ನು ಅಕ್ಕ ಪೀಡಿಸುತ್ತಿದ್ದಳು. ಇದೇ ವಿಚಾರಕ್ಕೆ ಅಕ್ಕ ಮತ್ತು ತಮ್ಮನ ನಡುವೆ ಆಗಾಗ ಕಿರಿಕ್ ನಡೆಯುತ್ತಲೇ ಇತ್ತು. ಭಾನುವಾರ ಕೂಡ ಇನಾಯತ್ ಮನೆಗೆ ಬಂದ ಕೂಡಲೇ ಮನೆ ಖಾಲಿ ಮಾಡು ಎಂದು ಜಗಳ ನಡೆದಿದೆ. ಈ ವೇಳೆ ಇನಾಯತ್ ಅಕ್ಕನ ಮಗ ಮಶ್ರೂರ್ ಅಹ್ಮದ್ ಕೂಡ ಜಗಳಕ್ಕೆ ಎಂಟ್ರಿಯಾಗಿದ್ದ. ಆದರೆ ಜಗಳ ಮಧ್ಯೆ ಮಸ್ರೂರ್ ಮಾರಣಾಂತಿಕ ಹಲ್ಲೆ ಮಾಡಿದ್ರಿಂದ ಕುಸಿದು ಬಿದ್ದ ಇನಾಯತ್ ಪ್ರಾಣ ಬಿಟ್ಟಿದ್ದಾನೆ.

ಇದನ್ನೂ ಓದಿ: ಅಡುಗೆ ವಿಷಯದಲ್ಲಿ ಅತ್ತೆ ಕಿರಿಕ್; ನೊಂದ ಸೊಸೆ ಸಾವಿಗೆ ಶರಣು!

ಇನ್ನು ಮರೆಮಾಚಲು ಯತ್ನಿಸಿದ ಆರೋಪಿಗಳು ಇನಾಯತ್ ಅತಿಯಾಗಿ ಕುಡಿದು ಬಿದ್ದು ಸತ್ತುಹೋದರು ಎಂದು ಸ್ಥಳೀಯರು ನಂಬಿದ್ದರು. ಆ ಬಳಿಕ ಇನಾಯತ್ ಅಂತ್ಯ ಸಂಸ್ಕಾರಕ್ಕೂ ಸಿದ್ದತೆ ನಡೆದಿತ್ತು. ಆದರೆ ತಿಳೀದು ಸ್ಥಳಕ್ಕೆ ಹೋಗಿದ್ದ ವಿವೇಕ್ ನಗರ ಪೊಲೀಸರ ಬಳಿ ಕೆಲ ಮಾಹಿತಿ ತಿಳಿದು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರಕರಣ ಕೆದಕಿದಾಗ ಕೊಲೆ ರಹಸ್ಯ ಬಯಲಾಗಿದೆ. ಇನ್ನು ಇನಾಯತ್ ಮೃತದೇಹ ಪರಿಶೀಲನೆ ವೇಳೆಯೂ ಮೈಮೇಲೆ ಗಾಯದ ಗುರುತುಗಳು ಕಂಡುಬಂದಿವೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲೂ ಇನಾಯತ್ ಸಾವು ಕೊಲೆ ಎಂಬುದು ದೃಢಪಟ್ಟಿದೆ. ಹೀಗಾಗಿ ಕೊಲೆಯನ್ನ ಸಹಜ ಸಾವೆಂದು ಬಿಂಬಿಸಲು ಹೋಗಿದ್ದ ಮಶ್ರೂರ್ ಈಗ ಖಾಕಿ ಅತಿಥಿಯಾಗಿದ್ದಾನೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *