ನಟ ಸುದೀಪ್ ಅವರಿಗೆ ‘ಕಿಚ್ಚ’ ಎಂಬ ಹೆಸರು ಬಂದಿದ್ದು 2001ರ ‘ಹುಚ್ಚ’ ಸಿನಿಮಾದಿಂದ. ಈ ಸಿನಿಮಾದಲ್ಲಿ ‘ಕಿಚ್ಚ’ ಪದದ ಅರ್ಥ ಹುಡುಕುವ ದೃಶ್ಯವಿದ್ದು, ಕೊನೆಗೆ ಜ್ಯೋತಿಷಿಯೊಬ್ಬರು ಕಿಚ್ಚ ಶಬ್ದದ ಅರ್ಥ ವಿವರಿಸುತ್ತಾರೆ. ಈ ಮೂಲಕ ಸುದೀಪ್ ಅವರ ಜನಪ್ರಿಯ ಹೆಸರಿನ ಹಿಂದಿನ ಕಥೆಯನ್ನು ಲೇಖನವು ತಿಳಿಸುತ್ತದೆ.

ಕಿಚ್ಚ ಎಂದರೆ ಸಾಕು, ಸುದೀಪ್ ಅಭಿಮಾನಿಗಳ ಮೈಮನವೆಲ್ಲಾ ನವಿರೇಳುತ್ತದೆ. ನಿಜವಾಗಿಯೂ ಅವರ ಫುಲ್ ಹೆಸರು ಸುದೀಪ್ ಸಂಜೀವ್. ಆದರೆ ಇದೀಗ ಕಿಚ್ಚ ಸುದೀಪ್ ಎಂದೇ ಫೇಮಸ್ ಆಗಿದ್ದಾರೆ. ಎಲ್ಲರೂ ಕಿಚ್ಚ ಎಂದೇ ಕರೆಯುತ್ತಾರೆ.

ಅಷ್ಟಕ್ಕೂ ಇವರಿಗೆ ಈ ಹೆಸರು ಬಂದಿದ್ದು 2001ರಲ್ಲಿ ತೆರೆ ಕಂಡ ಹುಚ್ಚ ಸಿನಿಮಾದಿಂದ. ಅದರಲ್ಲಿ ಅವರ ಹೆಸರು ಕಿಚ್ಚ. ಈ ಸಿನಿಮಾ ಅವರಿಗೆ ಸಕತ್ ಖ್ಯಾತಿ ತಂದುಕೊಟ್ಟಿತ್ತು. ಈ ಚಿತ್ರಕ್ಕೆ ಈಗ 25 ವರ್ಷಗಳ ಸಂಭ್ರಮ. ಇದೇ ಹೊತ್ತಿಲ್ಲನಲ್ಲಿ ಇದೀಗ ಕಿಚ್ಚನ ಬಗ್ಗೆ ಸಕತ್ ಚರ್ಚೆ ಶುರುವಾಗಿದೆ.

ಇದೀಗ ಉದಯ ಮೂವೀಸ್ ಇನ್ಸ್ಟಾಗ್ರಾಮ್ನಲ್ಲಿ ಈ ಸಿನಿಮಾದ ಕ್ಲಿಪ್ಪಿಂಗ್ಸ್ ಶೇರ್ ಮಾಡಲಾಗಿದೆ. ಅದರಲ್ಲಿ ನಾಯಕಿ ಬಂದು ಕಿಚ್ಚ ಅಂದ್ರೇನು ಕೇಳ್ತಾಳೆ. ಅಲ್ಲಿಂದ ಶುರುವಾಗುವ ತಲೆಬಿಸಿ, ಕೊನೆಗೆ ಕಾಲೇಜಿನ ಉಪನ್ಯಾಸಕರು, ಕಾಲೇಜಿನ ಪ್ರಾಂಶುಪಾಲರವರೆಗೂ ಹೋಗುತ್ತದೆ.

ಇಡೀ ಕಾಲೇಜಿನಲ್ಲಿ ಕಿಚ್ಚ ಹೆಸರಿನ ಅರ್ಥಕ್ಕೆ ಎಲ್ಲರೂ ತಲೆಕೆಡಿಸಿಕೊಳ್ಳುತ್ತಾರೆ. ಕೊನೆಗೆ ಉಪನ್ಯಾಸಕರೊಬ್ಬರು ಕಾಲೇಜಿನ ಗ್ರಂಥಾಲಯದಲ್ಲಿ ಹೋಗಿ ಹುಡುಕಿ ಎನ್ನುತ್ತಾರೆ.

ಇದ್ದು ಬಿದ್ದ ಎಲ್ಲರೂ ಲೈಬ್ರರಿಗೆ ಓಡಿ ಎಲ್ಲಾ ಡಿಕ್ಷನರಿ ಹುಡುಕಿದ್ರೂ ಇದರ ಅರ್ಥ ಸಿಗುವುದಿಲ್ಲ. ಸುದೀಪ್ ಆದಿಯಾಗಿ ಎಲ್ಲರಿಗೂ ಸಿಕ್ಕಾಪಟ್ಟೆ ತಲೆಬಿಸಿಯಾಗುತ್ತದೆ.

ಕೊನೆಗೆ ಇದಕ್ಕೆ ಉತ್ತರ ಸಿಗುವುದು ಜ್ಯೋಯಿಸರೊಬ್ಬರ ಬಳಿ. ಕಿಚ್ಚ ಎಂದರೆ ಶ್ರೀಕೃಷ್ಣ, ಶ್ರೀಕೃಷ್ಣ ಎಂದರೆ ಕಿಚ್ಚ ಎನ್ನುತ್ತಾರೆ. ಕೊನೆಗೂ ಅವರಿಂದ ಕಿಚ್ಚನ ಶಬ್ದದ ಅರ್ಥ ಗೊತ್ತಾಗತ್ತೆ!

Source link
ಕಿಚ್ಚ ಅಂದ್ರೆ ಏನು? ತಲೆ ಕೆಡಿಸಿಕೊಂಡ ಸುದೀಪ್! ಕಾಲೇಜಲ್ಲೂ ಹುಚ್ಚು ಹಿಡಿಸಿದ ಶಬ್ದಕ್ಕೆ ಕೊನೆಗೂ ಸಿಕ್ತು ಉತ್ತರ