ಇವತ್ತಿನ ಉದ್ಯೋಗ ಕ್ಷೇತ್ರ ಬಹಳ ಅತಂತ್ರ ಪರಿಸ್ಥಿತಿಯಲ್ಲಿದೆ. ನಗರಕ್ಕೆ ಬಂದು ಬದುಕು ಕಟ್ಟಲು ಹಣ ಸಂಪಾದಿಸುವ ಕನಸು ಹೊತ್ತ ಯುವಕರು ತಮ್ಮ ನಿರೀಕ್ಷೆಗೆ ತಕ್ಕಂತಹ ಉದ್ಯೋಗವಾಗಲೀ, ಕೆಲಸವಾಗಲೀ ಸಿಗದೆ ಸೆಕ್ಯೂರಿಟಿ, ಡೆಲಿವರಿ ಬಾಯ್ ಇತ್ಯಾದಿ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇವುಗಳಲ್ಲಿ ಸರಾಸರಿಯಾಗಿ 15-25 ಸಾವಿರ ರೂ ಆದಾಯ ಪಡೆದು ಬದುಕು ನಿರ್ವಹಣೆ ಬವಣೆ ಪಡುತ್ತಿರುತ್ತಾರೆ.
ನಿಮಗೆ ಬಹಳ ಕಡಿಮೆ ಸಂಬಳ ಬರುತ್ತಿದೆ ಹೇಗೆ ಬದುಕಬೇಕೆಂಬುದು ನಿಜಕ್ಕೂ ಒಂದು ಕಲೆ, ತಪಸ್ಸು. ಮನೆ ಬಾಡಿಗೆ, ಆಹಾರ, ಬಟ್ಟೆ, ಮೊಬೈಲ್ ರೀಚಾರ್ಜ್, ಪೆಟ್ರೋಲ್ ಅಥವಾ ಪ್ರಯಾಣ ಇವುಗಳಿಗೆ ಬಹಳ ಅಗತ್ಯ ವೆಚ್ಚ. ಅಗತ್ಯ ಇದ್ದಲ್ಲಿ ಇಂಟರ್ನೆಟ್, ಸಿನಿಮಾ ಇತ್ಯಾದಿ ವೆಚ್ಚ. ಅವುಗಳ ಮಧ್ಯೆ ಉಳಿತಾಯಕ್ಕೆ ಒಂದಷ್ಟು ಹಣ… ಇದು ಕಡಿಮೆ ಸಂಬಳದಲ್ಲಿ ಸಾಧ್ಯವಾ? ಬಹಳ ಜನರು ಈ ರೀತಿ ಬದುಕಿ ತೋರಿಸಿದ್ದಾರೆ. ಮನಸ್ಸಿದ್ದರೆ ಮಾಡಬಹುದು.
ಇದನ್ನೂ ಓದಿ: ಪಿಎಂ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ 1,000 ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್? ಇಲ್ಲಿದೆ ಲೆಕ್ಕಾಚಾರ
- ಕಡಿಮೆ ಬಾಡಿಗೆ ಇರುವ ಮನೆಯಲ್ಲಿ ವಾಸ ಇರಲು ಸಾಧ್ಯವಾ ನೋಡಿ.
- ಬ್ಯಾಚಲರ್ ಆಗಿದ್ದರೆ ಸ್ನೇಹಿತರ ಜೊತೆ ಸೇರಿ ವಾಸಿಸುವ ಅವಕಾಶ ಹುಡುಕಬಹುದು.
- ಹೋಟೆಲ್‌ನಲ್ಲಿ ಊಟ ಮಾಡುವ ಬದಲು ಮನೆಯಲ್ಲೇ ಅಡುಗೆ ಮಾಡಿ ತಿನ್ನುವುದು.
- ತಿಂಗಳ ಪ್ರತೀದ ವಿವರವನ್ನು ದಾಖಲಿಸಿಕೊಂಡು, ಅನಗತ್ಯ ವೆಚ್ಚವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುತ್ತಾ ಹೋಗುವುದು.
- ಪ್ರಯಾಣ ಮಾಡಲು ಸಾಧ್ಯವಾದಷ್ಟು ಬಸ್, ನಡಿಗೆಯನ್ನೇ ಉಪಯೋಗಿಸುವುದು.
- ಅಪ್ಪಿತಪ್ಪಿಯೂ ಕ್ರೆಡಿಟ್ ಕಾರ್ಡ್ ಬಳಸುವ ಗೋಜಿಗೆ ಹೋಗದಿರುವುದು.
25,000 ರೂ ಸಂಬಳ ಇದ್ದರೆ ಹೇಗಿರಬೇಕು?
ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು ಎನ್ನುವುದಕ್ಕೆ 50-30-20 ಸೂತ್ರ ಮುಂದಿಡುತ್ತಾರೆ. ಇಲ್ಲಿ ಮನೆ ಬಾಡಿಗೆ, ದಿನಸಿ, ಇನ್ಷೂರೆನ್ಸ್ ಇತ್ಯಾದಿ ಅಗತ್ಯ ಖರ್ಚುಗಳು ಶೇ. 50ರೊಳಗೆಯೇ ಇರುವಂತೆ ನೋಡಿಕೊಳ್ಳಬೇಕು. ಮನರಂಜನೆ, ಐಷಾರಾಮಿ ಇತ್ಯಾದಿ ಖರ್ಚುಗಳು ಶೇ. 30 ಮೀರಿದಂತೆ ನೋಡಿಕೊಳ್ಳಬೇಕು. ಹಣದ ಉಳಿತಾಯ ಶೇ. 20ಕ್ಕಿಂತ ಕಡಿಮೆ ಇರದಂತೆ ಎಚ್ಚರ ವಹಿಸಬೇಕು.
ಇದನ್ನೂ ಓದಿ: ಎನ್ ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್; ಇದು ರಿಟೈರ್ಮೆಂಟ್ ಗೂ ಸೈ, ಹೆಲ್ತ್ಕೇರ್ ವೆಚ್ಚಕ್ಕೂ ಸೈ; ಹೇಗೆ ಕೆಲಸ ಮಾಡುತ್ತೆ ಈ ಹೈಬ್ರಿಡ್ ಸ್ಕೀಮ್?
ಸಾಧ್ಯವಾದರೆ ಶೇ. 20 ಅನ್ನು ಹಿಗ್ಗಿಸಿ ಶೇ. 40 ಅಥವಾ 50ಕ್ಕೆ ತರಬಹುದಾ ಪ್ರಯತ್ನಿಸಬಹುದು. ಅದಕ್ಕಾಗಿ ಐಷಾರಾಮಿತನ ಬಯಸುವ ಮನಸ್ಸಿಗೆ ಕಡಿವಾಣ ಹಾಕಿ, ಸರಳ ಹಾಗೂ ಪರಿಶ್ರಮದ ಜೀವನಶೈಲಿಯನ್ನು ಪಡೆದುಕೊಳ್ಳಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ