Headlines

ಬಾವಿಗೆ ಹಾರಿದ 27 ವರ್ಷದ ಪುತ್ರಿ ಆಕೆಯ ಹಿಂದೆಯೇ ಹಾರಿ ಮಗಳ ರಕ್ಷಿಸಿದ 55 ವರ್ಷದ ಅಮ್ಮ | Tamil Nadu 55 Year Old Mother Jumps Into Well To Rescue 27 Year Old Daughter

ಬಾವಿಗೆ ಹಾರಿದ 27 ವರ್ಷದ ಪುತ್ರಿ ಆಕೆಯ ಹಿಂದೆಯೇ ಹಾರಿ ಮಗಳ ರಕ್ಷಿಸಿದ 55 ವರ್ಷದ ಅಮ್ಮ | Tamil Nadu 55 Year Old Mother Jumps Into Well To Rescue 27 Year Old Daughter



ಬಾವಿಗೆ ಹಾರಿದ 27 ವರ್ಷದ ಪುತ್ರಿ ಆಕೆಯ ಹಿಂದೆಯೇ ಹಾರಿ ಮಗಳ ರಕ್ಷಿಸಿದ 55 ವರ್ಷದ ಅಮ್ಮ | Tamil Nadu 55 Year Old Mother Jumps Into Well To Rescue 27 Year Old Daughter

ತಮಿಳುನಾಡಿನ ನಂಬಿಯೂರಿನಲ್ಲಿ, ಆತ್ಮ*ಹತ್ಯೆ ಮಾಡಿಕೊಳ್ಳಲು ಬಾವಿಗೆ ಹಾರಿದ ತನ್ನ 27 ವರ್ಷದ ಮಗಳನ್ನು ರಕ್ಷಿಸಲು 55 ವರ್ಷದ ತಾಯಿ ಕೂಡಲೇ ಬಾವಿಗೆ ಹಾರಿದ್ದಾರೆ. ಅಗ್ನಿಶಾಮಕ ದಳದವರು ಬರುವವರೆಗೂ ಮಗಳನ್ನು ನೀರಿನಲ್ಲಿ ಮುಳುಗದಂತೆ ಹಿಡಿದಿಟ್ಟುಕೊಂಡು ತಾಯಿ ಸಾಹಸ ಮೆರೆದಿದ್ದಾಳೆ.

ಮಗಳನ್ನು ರಕ್ಷಿಸಲು ಬಾವಿಗೆ ಹಾರಿದ ತಾಯಿ

ತಾಯಿ ತನ್ನ ಕರುಳ ಕುಡಿಯ ಬದುಕಿಸಲು ತನ್ನ ಜೀವವನ್ನೇ ಪಣಕ್ಕಿಟ್ಟಂತಹ ಹಲವು ಘಟನೆಗಳು ನಡೆದಿವೆ. ತಾಯಿಯೇ ಮಕ್ಕಳ ಜೀವ ತೆಗೆಯುವುದಕ್ಕೂ ಹೇಸದ ಇಂದಿನ ಕಾಲಘಟ್ಟದಲ್ಲಿ ತಾಯಿಯೊಬ್ಬಳು ತನ್ನ ಮಗಳಿಗಾಗಿ ಜೀವವನ್ನೇ ಪಣಕ್ಕಿಟ್ಟಂತಹ ಘಟನೆ ತಮಿಳುನಾಡಿನ ನಂಬಿಯೂರಿನಲ್ಲಿ ನಡೆದಿದೆ. ತನ್ನ 27 ವರ್ಷದ ಮಗಳೊಬ್ಬಳು ಸಾಯುವುದಕ್ಕಾಗಿ ಬಾವಿಗೆ ಹಾರಿದ್ದು, ಇದರಿಂದ ಕಂಗಾಲಾದ 55 ವರ್ಷದ ತಾಯಿ ಒಂದು ಕ್ಷಣವೂ ಯೋಚಿಸದೇ ಆಕೆಯ ಹಿಂದೆಯೇ ಬಾವಿಗೆ ಹಾರಿ ಆಕೆಯನ್ನು ರಕ್ಷಿಸಿದ್ದಾರೆ.

ತಮಿಳುನಾಡಿನ ನಂಬಿಯೂರಿನ ಐಯನಕಟ್ಟು ತೊಟ್ಟಂ ಎಂಬಲ್ಲಿ ಈ ಸಾಹಸಮಯ ಘಟನೆ ನಡೆದಿದೆ. ಮಗಳ ಹಿಂದೆಯೇ ಬಾವಿಗೆ ಹಾರಿದ ತಾಯಿ ಬಾವಿಯಲ್ಲಿ ಆಕೆ ಮುಳುಗದಂತೆ ಹಿಡಿದಿಟ್ಟುಕೊಂಡಿದ್ದಾಳೆ. 55 ವರ್ಷದ ಮುತ್ತುಮಣಿ ಎಂಬುವವರೇ 27 ವರ್ಷ ಮಗಳ ರಕ್ಷಿಸಿ ತಾಯಿ ಎಂಬ ಮಮತೆಯ ಘನತೆಯನ್ನು ಮತ್ತಷ್ಟು ಹೆಚ್ಚಿಸಿದ ತಾಯಿ. ಮಂಗಳವಾರ ಈ ಘಟನೆ ನಡೆದಿದ್ದು, ತಾಯಿ ಹಾಗೂ ಮಗಳನ್ನು ನಂತರ ಬಾವಿಯಿಂದ ಮೇಲೆತ್ತಿ ರಕ್ಷಣೆ ಮಾಡಲಾಗಿದೆ.

ಇದನ್ನೂ ಓದಿ: ಅಡ್ಡಾದಿಡ್ಡಿ ಕಾರು ಚಾಲನೆ : ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪಲ್ಟಿ: ಕೈಗೆ ಸಿಕ್ಕ ಕಾರು ಚಾಲಕನಿಗೆ ಕೈರುಚಿ ತೋರಿಸಿದ ಜನ

ಊಂಜಪಾಳಯಂನ ಸುಂದರಂ ಅವರ ಪುತ್ರಿ ದಿವ್ಯಾ ವೆಟ್ಟಾಯಂಪಳಯಂ ಪ್ರದೇಶದ ಬಾವಿಗೆ ಹಾರಿದ್ದಾರೆ. ಮಗಳು ಬಾವಿಗೆ ಹಾರಿದ್ದನ್ನು ನೋಡಿ ಸ್ವಲ್ಪವೂ ಧೃತಿಗೆಡದೇ ಆಕೆಯೊಂದಿಗೆ ಬಾವಿಗೆ ಹಾರಿದ್ದಾರೆ. ನೀರು ತುಂಬಿದ ಆಳದ ಬಾವಿಯ ಒಳಗೆ ಆಕೆ ಹಗ್ಗದ ಸಹಾಯದಿಂದ ತನ್ನನ್ನು ರಕ್ಷಿಸಿಕೊಳ್ಳುವ ಜೊತೆಗೆ ಮಗಳು ನೀರಿನಲ್ಲಿ ಮುಳುಗದಂತೆ ಹಿಡಿದಿಟ್ಟಿದ್ದಾರೆ. ನಂತರ ಸಹಾಯಕ್ಕಾಗಿ ಆಕೆ ಜೋರಾಗಿ ಕೂಗಿದ್ದು, ತಾಯಿಯ ಆ ಹತಾಶ ಕೂಗು ಆ ಪ್ರದೇಶದಾದ್ಯಂತ ಪ್ರತಿಧ್ವನಿಸಿದೆ. ಕೂಗಾಟ ಕೇಳಿ ನೆರೆಹೊರೆಯರೆಲ್ಲರೂ ಅಲ್ಲಿಗೆ ಆಗಮಿಸಿದ್ದು, ತಕ್ಷಣವೇ ಅವರು ಕಡ್ತೂರು ಪೊಲೀಸರು ಮತ್ತು ನಂಬಿಯೂರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕ ದಳದವರು ವಿಶೇಷ ರಕ್ಷಣಾ ಸಲಕರಣೆಗಳೊಂದಿಗೆ ಆಗಮಿಸಿ ಹಗ್ಗಗಳು ಮತ್ತು ಸುರಕ್ಷತಾ ಸರಂಜಾಮುಗಳನ್ನು ಬಾವಿಗೆ ಇಳಿಸಿ ಬಹಳ ಎಚ್ಚರಿಕೆಯಿಂದ ತಾಯಿ ಹಾಗೂ ಮಗಳು ಇಬ್ಬರನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ದಣಿದಿದ್ದರೂ ತಾಯಿ ತನ್ನ ಮಗಳನ್ನು ಜೀವಂತವಾಗಿರಿಸಿ ಬದುಕಿಗಾಗಿ ಹೋರಾಡಿದ ಅವರ ಧೈರ್ಯಕ್ಕೆ ಹಾಗೂ ಮಮತೆಗೆ ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತಾಯಿ ಮಗಳನ್ನು ಸುರಕ್ಷಿತವಾಗಿ ರಕ್ಷಿಸಿದ ಅಗ್ನಿಶಾಮಕ ಇಲಾಖೆಯ ಕಾರ್ಯಕ್ಕೂ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ಓದಿ: ಒಂಟಿಯಾಗಿ ಬದುಕಿ ಬೇಸತ್ತಿದ್ದೇನೆ ನನಗೂ ಒಬ್ಬ ಗೆಳೆಯ ಬೇಕು: ಪತಿ ಸಾವಿನ 3 ವರ್ಷದ ನಂತರ ಮದುವೆ ಮಾತಾಡಿದ ನಟಿ



Source link

Leave a Reply

Your email address will not be published. Required fields are marked *