ಬಸವಕಲ್ಯಾಣ ಉದ್ವಿಗ್ನ: ಮೌಲ್ವಿಗಳಿಗೆ ಹಲ್ಲೆ ಆರೋಪ, ಠಾಣೆಗೆ ಮುತ್ತಿಗೆಹಾಕಿ ಪೊಲೀಸರನ್ನೇ ಹೊಡೆದ ಅನ್ಯಕೋಮಿನ ಗುಂಪು!

ಬಸವಕಲ್ಯಾಣ ಉದ್ವಿಗ್ನ: ಮೌಲ್ವಿಗಳಿಗೆ ಹಲ್ಲೆ ಆರೋಪ, ಠಾಣೆಗೆ ಮುತ್ತಿಗೆಹಾಕಿ ಪೊಲೀಸರನ್ನೇ ಹೊಡೆದ ಅನ್ಯಕೋಮಿನ ಗುಂಪು!

ಬಸವಕಲ್ಯಾಣ ಉದ್ವಿಗ್ನ: ಮೌಲ್ವಿಗಳಿಗೆ ಹಲ್ಲೆ ಆರೋಪ, ಠಾಣೆಗೆ ಮುತ್ತಿಗೆಹಾಕಿ ಪೊಲೀಸರನ್ನೇ ಹೊಡೆದ ಅನ್ಯಕೋಮಿನ ಗುಂಪು!

ಬೀದರ್ (ಮಾ.04): ಜಿಲ್ಲೆಯ ಬಸವಕಲ್ಯಾಣದಲ್ಲಿ ರಾತ್ರಿಯಾಗುತ್ತಿದ್ದಂತೆ ಭೀಕರ ಹೈಡ್ರಾಮಾ ನಡೆದಿದ್ದು, ಸಮಾಜದ ಶಾಂತಿ ಕದಡುವಂತಾಗಿದೆ. ಮುಸ್ಲಿಂ ಮೌಲ್ವಿಗಳ ಮೇಲೆ ಹಿಂದೂ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಮುಸ್ಲಿಂ ಸಮುದಾಯದವರು ಬಸವಕಲ್ಯಾಣ ನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳ ಮೇಲೆಯೇ ಕಿಡಿಗೇಡಿಗಳು ಹಲ್ಲೆ ನಡೆಸಿದ್ದು, ಪರಿಸ್ಥಿತಿ ತೀವ್ರ ಉದ್ವಿಗ್ನಗೊಂಡಿದ್ದ ಘಟನೆ ಬೆಳಕಿಗೆ ಬಂದಿದೆ.

ಖಾಕಿ ಪಡೆಯ ಮೇಲೆಯೇ ಅಟ್ಟಹಾಸ:

ಮೌಲ್ವಿಗಳ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು (ಹಿಂದೂ ಯುವಕರನ್ನು) ನಮ್ಮ ವಶಕ್ಕೆ ನೀಡಿ ಎಂದು ಪಟ್ಟು ಹಿಡಿದು ಠಾಣೆಯ ಮುಂದೆ ಗದ್ದಲ ಸೃಷ್ಟಿಸಿದ ಮೌಲ್ವಿ ಬೆಂಬಲಿಗರ ಗುಂಪು, ನಿಯಂತ್ರಿಸಲು ಬಂದ ಪೊಲೀಸರ ಮೇಲೆ ತಿರುಗಿಬಿದ್ದಿದೆ. ಈ ವೇಳೆ ಕರ್ತವ್ಯದಲ್ಲಿದ್ದ ಎಎಸ್ಐ (ASI) ಮುಕ್ತಾರ್ ಪಟೇಲ್ ಅವರ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ. ಅಧಿಕಾರಿಯ ಮೈಮೇಲಿನ ಸಮವಸ್ತ್ರವನ್ನು ಹಿಡಿದು ಎಳೆದಾಡಿದ್ದಲ್ಲದೆ, ‘ಪೊಲೀಸ್ ವಾಲೋಕೋ ಜೋಡ್ ಮತ್’ (ಯಾವುದೇ ಕಾರಣಕ್ಕೂ ಪೊಲೀಸರನ್ನು ಬಿಡಬೇಡಿ) ಎಂದು ಕೂಗುತ್ತಾ ಅವರನ್ನು ತಳ್ಳಿ ದೌರ್ಜನ್ಯ ಎಸಗಿದ್ದಾರೆ.

ಕಲ್ಲು ತೂರಾಟ ಮತ್ತು ಗಾಯ:

ಕೇವಲ ಕೈಗಳಿಂದ ಹಲ್ಲೆ ಮಾಡಿದ್ದಷ್ಟೇ ಅಲ್ಲದೆ, ತಮ್ಮೊಂದಿಗೆ ತಂದಿದ್ದ ಕಲ್ಲುಗಳನ್ನು ಪೊಲೀಸರ ಮೇಲೆ ಎಸೆದಿದ್ದಾರೆ. ಈ ಕಲ್ಲು ತೂರಾಟದಲ್ಲಿ ಎಎಸ್ಐ ಮುಕ್ತಾರ್ ಪಟೇಲ್ ಅವರ ಹಣೆ ಮತ್ತು ಎದೆ ಭಾಗಕ್ಕೆ ಗಂಭೀರವಾದ ಗಾಯಗಳಾಗಿವೆ. ತಕ್ಷಣವೇ ಗಾಯಾಳು ಅಧಿಕಾರಿಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಿಎಸ್ಐ ಸೇರಿದಂತೆ ಇತರ ಸಿಬ್ಬಂದಿಗಳ ಮೇಲೆಯೂ ಕಲ್ಲು ತೂರಾಟ ನಡೆದಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

49 ಜನರ ವಿರುದ್ಧ ಪ್ರಕರಣ ದಾಖಲು:

ಪೊಲೀಸ್ ಠಾಣೆಯ ಮುಂಭಾಗದಲ್ಲೇ ದೊಂಬಿ ನಡೆಸಿ, ಸಾರ್ವಜನಿಕ ಶಾಂತಿ ಭಂಗ ತಂದ ಹಾಗೂ ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಒಟ್ಟು 49 ಮುಸ್ಲಿಂ ಯುವಕರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ಈಗಾಗಲೇ ಹಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬಿಗಿ ಪೊಲೀಸ್ ಬಂದೋಬಸ್ತ್:

ಘಟನೆಯ ನಂತರ ಬಸವಕಲ್ಯಾಣ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ವದಂತಿಗಳಿಗೆ ಕಿವಿಗೊಡದಂತೆ ಮತ್ತು ಶಾಂತಿ ಕಾಪಾಡುವಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.

Source link

Leave a Reply

Your email address will not be published. Required fields are marked *