ಉದಯಪುರದಲ್ಲಿ ಕೇವಲ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಅವರು ಈಗ ಬಹಳ ಗ್ರ್ಯಾಂಡ್ ಆಗಿ ಹೈದರಾಬಾದ್ನಲ್ಲಿ ರಿಸೆಪ್ಷನ್ ಮಾಡಿಕೊಂಡಿದ್ದಾರೆ.
ಎರಡೂ ಕುಟುಂಬದವರು ಜೊತೆಯಾಗಿ ಆರತಕ್ಷತೆ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಕನ್ನಡ, ತಮಿಳು, ಹಿಂದಿ, ತೆಲುಗು ಮುಂತಾದ ಭಾಷೆಗಳಲ್ಲಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಬಂದು ನವ ಜೋಡಿಗೆ ಶುಭ ಹಾರೈಸಿದ್ದಾರೆ.
ಕರ್ನಾಟಕದ ಹಲವು ಗಣ್ಯರಿಗೆ ಕೂಡ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರಿಗೆ ಆರತಕ್ಷತೆಯ ಆಹ್ವಾನ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಬಂದು ಶುಭ ಕೋರಿದ್ದಾರೆ.
ನಾನಿ, ರಾಮ್ ಚರಣ್, ನಾಗಾರ್ಜುನ, ವೆಂಕಟೇಶ್, ಶರತ್ ಕುಮಾರ್ ಮುಂತಾದ ಕಲಾವಿದರು ಆರತಕ್ಷತೆಗೆ ಬಂದಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೇಮಸ್ ಆಗಿರುವ ಈ ಜೋಡಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.
ಭದ್ರತೆಯ ದೃಷ್ಟಿಯಿಂದ ಕೇವಲ ಆಹ್ವಾನ ಇದ್ದವರಿಗೆ ಮಾತ್ರ ಈ ಆರತಕ್ಷತೆಗೆ ಕಾರ್ಯಕ್ರಮಕ್ಕೆ ಎಂಟ್ರಿ ನೀಡಲಾಗುತ್ತದೆ. ಅನೇಕ ಅಭಿಮಾನಿಗಳಿಗಾಗಿ ಅನ್ನದಾನ ಮತ್ತು ಸಿಹಿ ವಿತರಣೆ ಮಾಡಲಾಯಿತು.
ಚಿತ್ರರಂಗದ ಅನೇಕರ ಜೊತೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರಿಗೆ ಒಡನಾಟವಿದೆ. ಅಲ್ಲಾ ಅರ್ಜುನ್, ಸುಕುಮಾರ್, ಚಿರಂಜೀವಿ, ರವಿತೇಜ ಮುಂತಾದ ಸೆಲೆಬ್ರಿಟಿಗಳು ಬಂದು ನವಜೋಡಿಗೆ ವಿಶ್ ಮಾಡಿದ್ದಾರೆ.





