Headlines

ಇರಾನ್ ಯುದ್ಧಕ್ಕೆ ಪಾಕ್‌ ಪ್ರವೇಶ ಮಾಡುತ್ತಾ ? ಡೀಲ್‌ ಅನ್ವಯ ಸೌದಿಗೆ ರಕ್ಷಣೆ ನೀಡಬೇಕು | Will Pakistan Enter The Iran War

ಇರಾನ್ ಯುದ್ಧಕ್ಕೆ ಪಾಕ್‌ ಪ್ರವೇಶ ಮಾಡುತ್ತಾ ? ಡೀಲ್‌ ಅನ್ವಯ ಸೌದಿಗೆ ರಕ್ಷಣೆ ನೀಡಬೇಕು | Will Pakistan Enter The Iran War



ಇರಾನ್ ಯುದ್ಧಕ್ಕೆ ಪಾಕ್‌ ಪ್ರವೇಶ ಮಾಡುತ್ತಾ ? ಡೀಲ್‌ ಅನ್ವಯ ಸೌದಿಗೆ ರಕ್ಷಣೆ ನೀಡಬೇಕು | Will Pakistan Enter The Iran War

ತನ್ನ ಮಿತ್ರ ದೇಶ ಸೌದಿ ಅರೇಬಿಯಾದ ಮೇಲೆ ಇರಾನ್‌ ದಾಳಿ ಆರಂಭಿಸಿದ ಬೆನ್ನಲ್ಲೇ, ಅಮೆರಿಕ – ಇಸ್ರೇಲ್‌ ಮತ್ತು ಇರಾನ್‌ ನಡುವಣ ಯುದ್ಧಕ್ಕೆ ಇದೀಗ ಪಾಕಿಸ್ತಾನ ಕೂಡಾ ಪ್ರವೇಶ ಮಾಡಲಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಇಸ್ಲಾಮಾಬಾದ್‌: ತನ್ನ ಮಿತ್ರ ದೇಶ ಸೌದಿ ಅರೇಬಿಯಾದ ಮೇಲೆ ಇರಾನ್‌ ದಾಳಿ ಆರಂಭಿಸಿದ ಬೆನ್ನಲ್ಲೇ, ಅಮೆರಿಕ – ಇಸ್ರೇಲ್‌ ಮತ್ತು ಇರಾನ್‌ ನಡುವಣ ಯುದ್ಧಕ್ಕೆ ಇದೀಗ ಪಾಕಿಸ್ತಾನ ಕೂಡಾ ಪ್ರವೇಶ ಮಾಡಲಿದೆಯೇ ಎಂಬ ಪ್ರಶ್ನೆ ಎದ್ದಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಇಶಾಕ್‌ ಧರ್‌ ಸಂಸತ್ತಿನಲ್ಲಿ ನೀಡಿದ ಇಂಥದ್ದೊಂದು ಹೇಳಿಕೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕಾರಣ, ಸೌದಿ ಜೊತೆಗಿನ ಒಪ್ಪಂದದ ಅನ್ವಯ ಆ ದೇಶಕ್ಕೆ ಪಾಕ್‌ ರಕ್ಷಣೆ ನೀಡಬೇಕು. ಒಂದು ವೇಳೆ ಹಾಗೇನಾದರೂ ಮಾಡಿದರೆ ಇರಾನ್‌ ತನ್ನ ಮೇಲೆ ದಾಳಿ ಮಾಡುವ ಆತಂಕ ಪಾಕಿಸ್ತಾನವನ್ನು ಕಾಡತೊಡಗಿದೆ. ಹೀಗಾಗಿ ಪಾಕ್‌ ಪರಿಸ್ಥಿತಿ ಇದೀಗ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಒಪ್ಪಂದ?:

2025ರಲ್ಲಿ ಸೌದಿ ಅರೇಬಿಯಾವು ತನ್ನ ಭಧ್ರತೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಅಣ್ವಸ್ತ ಹೊಂದಿರುವ ಪಾಕ್‌ ಜೊತೆ (ವ್ಯೂಹಾತ್ಮಕ ಪರಸ್ಪರ ರಕ್ಷಣಾ ಒಪ್ಪಂದ -ಎಸ್‌ಎಂಡಿಎ) ಒಪ್ಪಂದಕ್ಕೆ ಸಹಿ ಹಾಕಿತ್ತು. ಅದರನ್ವಯ ಉಭಯ ದೇಶಗಳ ಮೇಲೆ ಯಾರೇ ದಾಳಿ ಮಾಡಿದರೂ, ಮತ್ತೊಂದು ದೇಶ ನೆರವಿಗೆ ಧಾವಿಸಬೇಕು.

ಇದೀಗ ಸೌದಿ ಅರೇಬಿಯಾದ ಮೇಲೆ ಇರಾನ್‌ ಸತತ ದಾಳಿ ನಡೆಸುತ್ತಿದೆ. ಹೀಗಾಗಿ ಒಪ್ಪಂದದ ಅನ್ವಯ ಸಾವಿರಾರು ಕಿಲೋಮೀಟರ್‌ ದೂರದಲ್ಲಿರುವ ತನ್ನ ಆಪ್ತ ಸೌದಿ ಗೆಳೆತನ ಸಾಬೀತುಪಡಿಸುವ ನಿಟ್ಟಿನಲ್ಲಿ ತನ್ನೊಂದಿಗೆ ಗಡಿ ಹಂಚಿಕೊಂಡಿರುವ ಇರಾನ್‌ ಮೇಲೆ ಪಾಕಿಸ್ತಾನ ದಾಳಿ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಹಾಗೇನಾದರೂ ಮಾಡಿದರೆ ಇರಾನ್‌ ತನ್ನ ಮೇಲೆ ದಾಳಿ ನಡೆಸಬಹುದು ಎಂಬ ಆತಂಕವೂ ಪಾಕಿಸ್ತಾನವನ್ನು ಕಾಡುತ್ತಿದೆ.

ಇಂಥ ಸನ್ನಿವೇಶದ ನಡುವೆಯೇ ಮಂಗಳವಾರ ಮಧ್ಯಪ್ರಾಚ್ಯ ಬಿಕ್ಕಟ್ಟು ಉಲ್ಲೇಖಿಸಿ ಪಾಕ್‌ ಸಂಸತ್ತಿಗೆ ಹೇಳಿಕೆ ನೀಡಿದ ರಕ್ಷಣಾ ಸಚಿವ ಇಶಾಕ್‌ ಧರ್‌, ‘ನಾವು ಸೌದಿ ಅರೇಬಿಯಾದ ಜೊತೆ ಒಪ್ಪಂದ ಹೊಂದಿದ್ದೇವೆ ಎಂಬ ಅಂಶವನ್ನು ಅವರ (ಇರಾನ್‌) ಗಮನಕ್ಕೆ ತಂದಿದ್ದೇವೆ’ ಎಂದು ಹೇಳಿದ್ದಾರೆ. ಇದು ಅಗತ್ಯಬಿದ್ದರೆ ತಾನು ಯುದ್ಧಕ್ಕೆ ಪ್ರವೇಶ ಮಾಡಲು ಪಾಕಿಸ್ತಾನ ಸಿದ್ಧವಾಗಿದೆ ಎಂದು ಮೊದಲ ಬಾರಿಗೆ ಅಧಿಕೃತವಾಗಿ ನೀಡಿದ ಸಂದೇಶ ಎಂದು ವಿಶ್ಲೇಷಿಸಲಾಗಿದೆ.

ಗೊಂದಲ:

ಆದರೆ ವಿಶ್ವಸಂಸ್ಥೆಯ ಪರಮಾಣು ನಿಶ್ಯಸ್ತ್ರೀಕರಣ ಒಪ್ಪಂದ ಅನ್ವಯ, ಪರಮಾಣು ಅಸ್ತ್ರ ಹೊಂದಿರುವ ದೇಶವೊಂದು, ಮತ್ತೊಂದು ದೇಶಕ್ಕೆ ಅಥವಾ ಆ ದೇಶದ ಪರವಾಗಿ ಅಣ್ವಸ್ತ್ರ ಬಳಸುವಂತಿಲ್ಲ. ಇದರ ಜೊತೆಗೆ, ಪಾಕ್‌- ಸೌದಿ ಒಪ್ಪಂದದಲ್ಲಿ ಪರಮಾಣು ಅಸ್ತ್ರದ ನೆರವಿನ ಬಗ್ಗೆ ಪ್ರಸ್ತಾಪ ಆಗಿದೆಯೇ ಇಲ್ಲವೇ ಎಂಬುದು ಖಚಿತವಾಗಿಲ್ಲ. ಒಂದು ವೇಳೆ ಹಾಗೇನಾದರೂ ಇದ್ದರೆ, ಸೌದಿಗೆ ಪಾಕ್‌ ನೆರವು ಜಾಗತಿಕ ನಿಯಮದ ಉಲ್ಲಂಘನೆಯಾಗುತ್ತದೆ. ಹೀಗಾಗಿ ಪಾಕಿಸ್ತಾನದ ಮುಂದಿನ ನಡೆ ಏನು? ಅದು ಸೌದಿ ವಿಷಯದಲ್ಲಿ ಇರಾನ್‌ಗೆ ಬಹಿರಂಗ ಎಚ್ಚರ ನೀಡಲಿದೆಯೇ? ಸೌದಿ ಮೇಲೆ ದಾಳಿ ನಡೆದರೆ ಇರಾನ್‌ ಮೇಲೆ ಪ್ರತಿ ದಾಳಿ ನಡೆಸಲಿದೆಯೇ? ಅಥವಾ ಕೇವಲ ಎಚ್ಚರಿಕೆ ನೀಡಿ ಸುಮ್ಮನಾಗಲಿದೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.



Source link

Leave a Reply

Your email address will not be published. Required fields are marked *