ದುಬೈನಿಂದ ಬೆಂಗಳೂರಿಗೆ ಬಂದಿಳಿದ 5ನೇ ವಿಮಾನ: 3 ದಿನಗಳಲ್ಲಿ 1,500 ಮಂದಿ ಸುರಕ್ಷಿತವಾಗಿ ವಾಪಸ್

ದುಬೈನಿಂದ ಬೆಂಗಳೂರಿಗೆ ಬಂದಿಳಿದ 5ನೇ ವಿಮಾನ: 3 ದಿನಗಳಲ್ಲಿ 1,500 ಮಂದಿ ಸುರಕ್ಷಿತವಾಗಿ ವಾಪಸ್


3 ದಿನಗಳಲ್ಲಿ 1,500 ಮಂದಿ ಸುರಕ್ಷಿತವಾಗಿ ವಾಪಸ್ಚಿತ್ರದ ಕ್ರೆಡಿಟ್ ಮೂಲ: tv9

ಬೆಂಗಳೂರು, ಮಾರ್ಚ್ 5: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿಯಿಂದ ದುಬೈ, ಅಬುಧಾಬಿ, ಜೆದ್ದಾ, ದೋಹಾ ಸೇರಿ ಹಲವೆಡೆ ವಿಮಾನ ನಿಲ್ದಾಣಗಳು ಬಂದ್ ಆಗಿವೆ. ಅಲ್ಲಿಯ ಏರ್‌ಪೋರ್ಟ್‌ಗಳಲ್ಲೇ ಸಿಕ್ಕಿಹಾಕಿರುವ ಸಾವಿರಾರು ಜನ ಪ್ರಯಾಣಿಕರು ಕಳೆದ ಸೋಮವಾರ ರಾತ್ರಿಯಿಂದ ಎಮಿರೇಟ್ಸ್, ಎತಿಹಾದ್ ಮತ್ತು ಇಂಡಿಗೋ ಏರ್‌ಲೈನ್ಸ್‌ಗಳ ಮೂಲಕ ಬೆಂಗಳೂರಿಗೆ (ಬೆಂಗಳೂರು) ಕರೆತರಲಾಗುತ್ತಿದೆ. ದಿನಕ್ಕೆ ಒಂದು ಅಥವಾ ಎರಡು ವಿಮಾನಗಳು ದುಬೈ ಮತ್ತು ಅಬುಧಾಬಿಯಿಂದ ಬೆಂಗಳೂರಿಗೆ ಟೆಕ್ ಆಫ್ ಆಗುತ್ತಿವೆ. ತವರಿಗೆ ಬರಲು ನಾ ಮುಂದು ತಾ ಮುಂದು ಎಂದು ಪ್ರಯಾಣಿಕರು ಮುಗಿಬೀಳುತ್ತಿದ್ದಾರೆ. ಮಂಗಳವಾರ ರಾತ್ರಿ 5ನೇ ವಿಮಾನದಲ್ಲಿ 246 ಮಂದಿ ತಾಯ್ನಾಡಿಗೆ ಬಂದಿದ್ದಾರೆ.

ಇನ್ನು ಅಮೆರಿಕಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರು ಫ್ಲೈಟ್ ಕ್ಯಾನ್ಸಲ್ ಆಗಿದ್ದು ದುಬೈನಲ್ಲೇ ಸಿಕ್ಕಿಬಿದ್ದಿದ್ದಾರೆ. ಸದ್ಯಕ್ಕೆ ತೆರಳದೆ ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ.

ಮತ್ತೊಂದೆಡೆ ಯುಎಸ್‌ಡಿನಿಂದ ಬಂದು ದುಬೈನಲ್ಲಿ 2 ದಿನ ಪ್ರವಾಸ ಮುಗಿಸಿ ಬರುವ ಪ್ಲ್ಯಾನ್‌ನಲ್ಲಿದ್ದವರು ವಿಧಿಯಿಲ್ಲದೆ ಬೆಂಗಳೂರಿಗೆ ಮರಳಿದ್ದಾರೆ.

ಇದನ್ನೂ ಓದಿ: ಇರಾನ್- ಇಸ್ರೇಲ್ ಯುದ್ಧದಿಂದ ತೈಲ ಬೆಲೆ ಏರಿಕೆ ಸುದ್ದಿ: ಭಟ್ಕಳದಲ್ಲಿ ಡೀಸೆಲ್, ಪೆಟ್ರೋಲ್‌ಗೆ ಮುಗಿಬಿದ್ದ ಜನ

ಕಳೆದ ಸೋಮವಾರ 2ನೇ ತಾರೀಕು ರಾತ್ರಿ 9.40ಕ್ಕೆ ಬಂದ ಮೊದಲ ಫ್ಲೈಟ್‌ನಲ್ಲಿ 213 ಜನ ವಾಪಸ್ ಆಗಿದ್ದಾರೆ, 3ನೇ ತಾರೀಕು ಮುಂಜಾನೆ 3 ಗಂಟೆಗೆ ಬಂದ 2ನೇ ವಿಮಾನದಲ್ಲಿ 490 ಜನ, ಅದೇ ದಿನ ಸಂಜೆ 7 ಗಂಟೆಗೆ ವಿಮಾನದಲ್ಲಿ 3ನೇ ವಿಮಾನದಲ್ಲಿ 350 ಮಂದಿಗೆ, ನಾಲ್ಕನೇ ತಾರೀಕು ಮಧ್ಯರಾತ್ರಿ 1 ಗಂಟೆಗೆ ಬಂದಿಳಿದ ತಾರೀಕು ಮಧ್ಯರಾತ್ರಿ 1 ಗಂಟೆಗೆ ಬಂದಿಳಿದ ತಾರೀಕು ಮಧ್ಯರಾತ್ರಿ 7 ಗಂಟೆಗೆ, ನಾಲ್ಕನೇ ತಾರೀಕು ಮಧ್ಯರಾತ್ರಿ 6 ಗಂಟೆಗೆ ಬಂದಿಳಿದ ಪ್ರಯಾಣಿಕರು ವಾಪಸಾಗಿದ್ದರೆ ಈವರೆಗೆ 1500 ಮಂದಿ ಸುರಕ್ಷಿತವಾಗಿ ಮರಳಿದ್ದಾರೆ.

ಸೀಮಿತ ವಿಮಾನಗಳು ದುಬೈನಿಂದ ಬರುತ್ತಿರುವುದರಿಂದ ಇನ್ನೂ ಸಾಕಷ್ಟು ಕನ್ನಡಿಗರು ಅಲ್ಲಿನ ಏರ್‌ಪೋರ್ಟ್‌ಗಳಲ್ಲೇ ಸಿಲುಕಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *