ಅಡುಗೆಮನೆ ಸ್ಪಾಂಜ್ ಪ್ರತಿದಿನ ಬದಲಿಸಬೇಕಾ? ಸಂಶೋಧನಾ ವರದಿಯಲ್ಲಿ ಬಯಲಾಯ್ತು ಶಾಕಿಂಗ್ ಸತ್ಯ!

ಅಡುಗೆಮನೆ ಸ್ಪಾಂಜ್ ಪ್ರತಿದಿನ ಬದಲಿಸಬೇಕಾ? ಸಂಶೋಧನಾ ವರದಿಯಲ್ಲಿ ಬಯಲಾಯ್ತು ಶಾಕಿಂಗ್ ಸತ್ಯ!

ಅಡುಗೆಮನೆ ಸ್ಪಾಂಜ್ ಪ್ರತಿದಿನ ಬದಲಿಸಬೇಕಾ? ಸಂಶೋಧನಾ ವರದಿಯಲ್ಲಿ ಬಯಲಾಯ್ತು ಶಾಕಿಂಗ್ ಸತ್ಯ!

ಅಡುಗೆಮನೆಯ ಸ್ಪಾಂಜ್‌ಗಳು ಕೆಲವೇ ಗಂಟೆಗಳಲ್ಲಿ ಲಿಸ್ಟೇರಿಯಾ ಮತ್ತು ಸಾಲ್ಮೊನೆಲ್ಲಾದಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳಿಗೆ ನೆಲೆಯಾಗಬಹುದು ಎಂದು ಸಂಶೋಧನೆಗಳು ತಿಳಿಸಿವೆ. ತಜ್ಞರ ಪ್ರಕಾರ, ಆರೋಗ್ಯದ ದೃಷ್ಟಿಯಿಂದ ಸ್ಪಾಂಜ್ ಯಾವಾಗ ಬದಲಾಯಿಸುವುದು ಉತ್ತಮ?

ಬಹುತೇಕ ಎಲ್ಲರ ಮನೆ ಅಡುಗೆಮನೆಯಲ್ಲೂ ಕಿಚನ್ ಸ್ಪಾಂಜ್ ಇದ್ದೇ ಇರುತ್ತದೆ. ಆದರೆ ಅದನ್ನು ಎಷ್ಟು ದಿನಕ್ಕೊಮ್ಮೆ ಬದಲಾಯಿಸಬೇಕು ಎಂಬ ಬಗ್ಗೆ ಹಲವರಿಗೆ ಸ್ಪಷ್ಟತೆ ಇಲ್ಲ. ಕೆಲವರು ವಾರಕ್ಕೊಮ್ಮೆ ಸ್ಪಾಂಜ್ ಬದಲಿಸಿದರೆ, ಇನ್ನು ಕೆಲವರು ಅದು ಕೊಳೆಯಾದಾಗ ಅಥವಾ ಕೆಟ್ಟ ವಾಸನೆ ಬಂದಾಗ ಮಾತ್ರ ಹೊಸದನ್ನು ಬಳಸುತ್ತಾರೆ.

ಲೀಸೆಸ್ಟರ್ ವಿಶ್ವವಿದ್ಯಾಲಯದ ಕ್ಲಿನಿಕಲ್ ಮೈಕ್ರೋಬಯಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಿಮ್ರೋಸ್ ಫ್ರೀಸ್ಟೋನ್ ಈ ಗೊಂದಲಕ್ಕೆ ಸ್ಪಷ್ಟ ಉತ್ತರ ನೀಡಿದ್ದಾರೆ. ಅವರು ಡೈಲಿ ಮೇಲ್‌ಗೆ ತಿಳಿಸಿದಂತೆ, ಅಡುಗೆಮನೆಯ ಸ್ಪಾಂಜ್‌ಗಳನ್ನು ಪ್ರತಿದಿನ ಬದಲಾಯಿಸುವುದೇ ಸೂಕ್ತ. ಹಸಿ ಮಾಂಸ, ಮೀನು ಅಥವಾ ತರಕಾರಿಗಳನ್ನು ಸ್ವಚ್ಛಗೊಳಿಸಲು ಬಳಸಿದ ಸ್ಪಾಂಜ್ ಅನ್ನು ತಕ್ಷಣವೇ ಬಿಸಾಡಬೇಕು. ಏಕೆಂದರೆ ಅದರಲ್ಲಿರುವ ಎಲ್ಲಾ ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕುವುದು ತುಂಬಾ ಕಷ್ಟ. ಕೇವಲ ಪಾತ್ರೆ ತೊಳೆಯಲು ಬಳಸಿದರೂ, ಆ ಸ್ಪಾಂಜ್ ಅನ್ನು ಒಂದೇ ದಿನ ಬಳಸಿ, ಆ ಸಮಯದಲ್ಲಿ ಆ್ಯಂಟಿಬ್ಯಾಕ್ಟೀರಿಯಲ್ ಡಿಟರ್ಜೆಂಟ್ ಉಪಯೋಗಿಸಬೇಕು ಎಂದು ಅವರು ವಿವರಿಸುತ್ತಾರೆ.

ಈ ವಿಷಯದ ಬಗ್ಗೆ ರೆಡ್ಡಿಟ್‌ನಂತಹ (Reddit) ಆನ್‌ಲೈನ್ ವೇದಿಕೆಗಳಲ್ಲಿ ಬಹಳ ಹಿಂದಿನಿಂದಲೂ ಚರ್ಚೆ ನಡೆಯುತ್ತಿದೆ. ಕೆಲವರು ವಾರಕ್ಕೊಮ್ಮೆ ಸ್ಪಾಂಜ್ ಬದಲಿಸಲು ಸಲಹೆ ನೀಡಿದರೆ, ಇನ್ನು ಕೆಲವರು ರೋಗಾಣುಗಳ ಭಯದಿಂದ ಸ್ಪಾಂಜ್ ಬಳಕೆಯಿಂದಲೇ ದೂರ ಉಳಿದಿದ್ದಾರೆ. ಸ್ಪಾಂಜ್‌ಗಳು ಎಷ್ಟು ಸ್ವಚ್ಛವಾಗಿರುತ್ತವೆ ಎಂದು ಪರೀಕ್ಷಿಸಲು, ಡಾ. ಫ್ರೀಸ್ಟೋನ್ ಮತ್ತು ಅವರ ತಂಡ ಒಂದು ಪ್ರಯೋಗ ನಡೆಸಿತು.

ಇದರಲ್ಲಿ ಒಂದು ದಿನದಿಂದ ಐದು ತಿಂಗಳವರೆಗೆ ಬಳಸಿದ ಸ್ಪಾಂಜ್‌ಗಳನ್ನು ಪರೀಕ್ಷಿಸಲಾಯಿತು. ಈ ಸ್ಪಾಂಜ್‌ಗಳನ್ನು ಆಗಾಗ ಸೋಂಕುರಹಿತಗೊಳಿಸಿ, ಅವುಗಳಲ್ಲಿರುವ ಸೂಕ್ಷ್ಮಜೀವಿಗಳನ್ನು ವಿಶ್ಲೇಷಿಸಲಾಯಿತು.

ಫಲಿತಾಂಶಗಳು ಆಘಾತಕಾರಿ ಆಗಿದ್ದವು. ಕೇವಲ 14 ಗಂಟೆಗಳ ಬಳಕೆಯಲ್ಲೇ ಸ್ಪಾಂಜ್‌ಗಳಲ್ಲಿ ಲಿಸ್ಟೇರಿಯಾ, ಸಾಲ್ಮೊನೆಲ್ಲಾ ಮತ್ತು ಆ್ಯಂಟಿಬಯೋಟಿಕ್‌ಗಳಿಗೆ ಜಗ್ಗದ ಸೂಕ್ಷ್ಮಜೀವಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಬ್ಯಾಕ್ಟೀರಿಯಾಗಳು ಕಂಡುಬಂದವು. ಮೂರನೇ ದಿನದ ಹೊತ್ತಿಗೆ ಬ್ಯಾಕ್ಟೀರಿಯಾಗಳ ಬೆಳವಣಿಗೆ ಗಣನೀಯವಾಗಿ ಹೆಚ್ಚಾಗಿತ್ತು. ತಿಂಗಳುಗಟ್ಟಲೆ ಬಳಸಿದ ಸ್ಪಾಂಜ್‌ಗಳಲ್ಲಿ ಫಂಗಸ್ (ಶಿಲೀಂಧ್ರ) ಕೂಡ ಬೆಳೆದಿತ್ತು.

ಈ ಸಂಶೋಧನೆಯ ಆಧಾರದ ಮೇಲೆ, ಡಾ. ಫ್ರೀಸ್ಟೋನ್ ಪ್ರತಿದಿನ ಹೊಸ ಸ್ಪಾಂಜ್ ಬಳಸಲು ಶಿಫಾರಸು ಮಾಡುತ್ತಾರೆ. ಸ್ಪಾಂಜ್‌ಗಳು ಅಗ್ಗವಾಗಿದ್ದು, ಸುಲಭವಾಗಿ ಬದಲಾಯಿಸಬಹುದು ಎನ್ನುತ್ತಾರೆ ಅವರು. ಕೆಲವರು ಸ್ಪಾಂಜ್‌ಗಳ ಬದಲು ಬ್ರಷ್‌ಗಳನ್ನು ಬಳಸಲು ಇಷ್ಟಪಡುತ್ತಾರೆ. ನಿಯಮಿತವಾಗಿ ಸ್ವಚ್ಛಗೊಳಿಸಿದರೆ ಬ್ರಷ್‌ಗಳು ಹೆಚ್ಚು ಆರೋಗ್ಯಕರ. ಆದರೆ, ಕಾಲಕ್ರಮೇಣ ಬ್ರಷ್‌ಗಳಲ್ಲೂ ರೋಗಾಣುಗಳು ಸೇರಿಕೊಳ್ಳುವುದರಿಂದ, ಅವುಗಳನ್ನೂ ಸರಿಯಾಗಿ ನಿರ್ವಹಿಸಬೇಕು.

ಇದನ್ನೂ ಓದಿ: ಪಲ್ಯ ಮಾಡುವಾಗ ಹಾಗಲಕಾಯಿ ಕಹಿ ಬರ್ತಿದೆಯೇ? ಕಹಿ ತೆಗೆಯಲು ಈ ಸಿಂಪಲ್‌ ಟ್ರಿಕ್‌ ಫಾಲೋ ಮಾಡಿ!

ಪ್ರತಿದಿನ ಹೊಸ ಸ್ಪಾಂಜ್ ಬಳಸುವುದು, ಅದನ್ನು ಡಿಟರ್ಜೆಂಟ್‌ನಿಂದ ಸ್ವಚ್ಛಗೊಳಿಸುವುದು ಅಥವಾ ಬ್ರಷ್‌ಗೆ ಬದಲಾಯಿಸಿಕೊಳ್ಳುವಂತಹ ಸರಳ ಕ್ರಮಗಳನ್ನು ಅನುಸರಿಸುವ ಮೂಲಕ, ನೀವು ಅಡುಗೆಮನೆಯಲ್ಲಿ ರೋಗಾಣುಗಳ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಮತ್ತು ನಿಮ್ಮ ಪಾತ್ರೆಗಳನ್ನು ಹೆಚ್ಚು ಸುರಕ್ಷಿತವಾಗಿಡಬಹುದು.

ಇದನ್ನೂ ಓದಿ: ಮದುವೆಗೂ ಮುನ್ನ ಹೆಚ್ಚು ವ್ಯಾಯಾಮ ಇಲ್ಲದೇ ಫಟ್ ಅಂತ ಕೆಜಿಗಟ್ಟಲೇ ತೂಕ ಇಳಿಸಬೇಕಾ? ಇಲ್ಲಿವೆ ಟಿಪ್ಸ್

Source link

Leave a Reply

Your email address will not be published. Required fields are marked *