Video: ಪೈಲ್ಸ್​ ಆಪರೇಷನ್ ಆಗಿದ್ದಕ್ಕೆ ಸಾಕ್ಷ್ಯ ಕೇಳಿದ ಹಿರಿಯ ಅಧಿಕಾರಿ, ಪ್ಯಾಂಟ್ ಬಿಚ್ಚಿ ಗಾಯ ತೋರಿಸಿದ ರೈಲ್ವೆ ಸಿಬ್ಬಂದಿ

Video: ಪೈಲ್ಸ್​ ಆಪರೇಷನ್ ಆಗಿದ್ದಕ್ಕೆ ಸಾಕ್ಷ್ಯ ಕೇಳಿದ ಹಿರಿಯ ಅಧಿಕಾರಿ, ಪ್ಯಾಂಟ್ ಬಿಚ್ಚಿ ಗಾಯ ತೋರಿಸಿದ ರೈಲ್ವೆ ಸಿಬ್ಬಂದಿ


ಲಕ್ನೋ, ಮಾರ್ಚ್ 05: ಸಿಬ್ಬಂದಿಯೊಬ್ಬರಿಗೆ ಪೈಲ್ಸ್ ಆಪರೇಷನ್ ಮಾಡಲಾಗಿದೆ. ಗಾಯ ವಾಸಿಯಾಗದ ಕಾರಣ ಕುಳಿತುಕೊಳ್ಳಲು ಆಗುತ್ತಿಲ್ಲ, ರಜೆ ಕೊಡಿ ಎಂದು ಹಿರಿಯ ಅಧಿಕಾರಿ ಬಳಿ ಮನವಿ ಮಾಡಿದರು. ಆಗ ಅಧಿಕಾರಿಯೊಬ್ಬರು ನಿಮಗೆ ಆಪರೇಷನ್ ಆಗಿದ್ದಾರೆ ಎಂಬುದಕ್ಕೆ ಏನು ಸಾಕ್ಷಿ ಇದೆ ಎಂದು ಸಾಕ್ಷಿ ತೋರಿಸಲು ನಂತರ ರಜೆ ಬಗ್ಗೆ ಮಾತನಾಡೋಣ. ಅದಕ್ಕೆ ಬೇಸರದಲ್ಲಿ ಸಿಬ್ಬಂದಿ ತಮ್ಮ ಪ್ಯಾಂಟ್ ಬಿಚ್ಚಿ ಆಪರೇಷನ್ ಆಗಿರುವ ಜಾಗವನ್ನು ತೋರಿಸಿರುವ ವಿಡಿಯೋ ವೈರಲ್ ಆಗಿದ್ದು, ಹಿರಿಯ ಅಧಿಕಾರಿಗಳ ವರ್ತನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಲಕ್ನೋದಲ್ಲಿ ನಡೆದಿದೆ. ಲೋಕೋ ಪೈಲಟ್ ರಾಜೇಶ್ ಮೀನಾ ಮೂಲವ್ಯಾಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಲಕ್ನೋದಲ್ಲಿ ನಡೆದ ಶಸ್ತ್ರಚಿಕಿತ್ಸೆಗಾಗಿ ಮೀನಾ ಅವರಿಗೆ ಫೆಬ್ರವರಿ 22 ರಿಂದ 28 ರವರೆಗೆ ರಜೆ ನೀಡಲಾಗಿದೆ. ಆದರೆ, ನಿಗದಿತ ಸಮಯದೊಳಗೆ ಅವರ ಗಾಯ ಮಾಗದ ಕಾರಣ ರಜೆ ವಿಸ್ತರಿಸುವಂತೆ ಮನವಿ ಮಾಡಲಾಗಿತ್ತು.ಬಳಿಕ ಸಿಬ್ಬಂದಿ ತಮ್ಮ ಪ್ಯಾಂಟ್ ಬಿಚ್ಚಿ ಗಾಯವನ್ನು ತೋರಿಸಿದ್ದಾರೆ. ಇದಾದ ಬಳಿಕ ಆರೋಗ್ಯ ಘಟಕಕ್ಕೆ ಭೇಟಿ ನೀಡಿದ ನಂತರ, ವೈದ್ಯರು ಅವರನ್ನು ಪರೀಕ್ಷಿಸಿದರು ಮತ್ತು ಅವರು ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಎಂದು ದೃಢಪಡಿಸಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *