Headlines

ಫಸ್ಟ್‌ ಮದುವೆ ಯಾಕೆ ಮುರಿದು ಬಿತ್ತು? ಸತ್ಯ ಹೇಳಿದ Lakshmi Nivasa Serial ನಟಿ ಮಾನಸಾ ಮನೋಹರ್ | Lakshmi Nivasa Kannada Serial Actress Mansa Manohar On First Marriage Divorce

ಫಸ್ಟ್‌ ಮದುವೆ ಯಾಕೆ ಮುರಿದು ಬಿತ್ತು? ಸತ್ಯ ಹೇಳಿದ Lakshmi Nivasa Serial ನಟಿ ಮಾನಸಾ ಮನೋಹರ್ | Lakshmi Nivasa Kannada Serial Actress Mansa Manohar On First Marriage Divorce



ಫಸ್ಟ್‌ ಮದುವೆ ಯಾಕೆ ಮುರಿದು ಬಿತ್ತು? ಸತ್ಯ ಹೇಳಿದ Lakshmi Nivasa Serial ನಟಿ ಮಾನಸಾ ಮನೋಹರ್ | Lakshmi Nivasa Kannada Serial Actress Mansa Manohar On First Marriage Divorce

Actress Mansa Manohar: ಲಕ್ಷ್ಮೀ ನಿವಾಸ, ಜೊತೆ ಜೊತೆಯಲಿ ಧಾರಾವಾಹಿ ನಟಿ ಮಾನಸಾ ಮನೋಹರ್‌ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗ ಅವರು ಮೊದಲ ಮದುವೆ ಯಾಕೆ ಮುರಿದು ಬಿತ್ತು ಎಂದು ಕನ್ನಡ ವೆಬ್‌ಸೈಟ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನೀಲು ಪಾತ್ರ ಮಾಡ್ತಿದ್ದ ನಟಿ ಮಾನಸಾ ಮನೋಹರ್‌ ಅವರು ( Actress Mansa Manohar ) ವರ್ಷದ ಹಿಂದೆ ಎರಡನೇ ಮದುವೆ ಆಗಿದ್ದರು. ಪ್ರೀತಂ ಎನ್ನುವವರ ಜೊತೆ ಮಾನಸಾ ಅವರು ಖಾಸಗಿಯಾಗಿ ಸಪ್ತಪದಿ ತುಳಿದಿದ್ದರು. ಈಗ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಮದುವೆ ಯಾಕೆ ಮುರಿದು ಬಿತ್ತು ಎಂದು ಅವರು ಕನ್ನಡ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ವಯಸ್ಸಾದರೆ ಮಕ್ಕಳಾಗಲ್ಲ

ಮುಟ್ಟು ನಿಲ್ಲೋವರೆಗೂ ಕೂಡ ಪ್ರಗ್ನೆಂಟ್‌ ಆಗಿರುತ್ತಿದ್ದರು, ಈ ಹಿಂದಿನ ಜನರ ಆಹಾರ ಕ್ರಮ, ಜೀವನಶೈಲಿ ಅಷ್ಟು ಚೆನ್ನಾಗಿತ್ತು. ನಮ್ಮ ಅಜ್ಜಿಯಂದಿರೆಲ್ಲ ಹತ್ತು-ಹದಿನೈದು ಮಕ್ಕಳನ್ನು ಹೆರಬೇಕು ಎಂದರೆ ನಲವತ್ತು ವಯಸ್ಸು ಆಗುತ್ತಿತ್ತು. ನನಗೂ ಕೂಡ ವಯಸ್ಸು 30 ಆದಮೇಲೆ ಮಗು ಮಾಡಿಕೊಳ್ಳೋ ಬಗ್ಗೆ ಸ್ವಲ್ಪ ಯೋಚನೆ ಆಗಿತ್ತು, ಆದರೆ ಆ ರೀತಿ ಇರೋದಿಲ್ಲ. ಇಂದಿನ ಸಮಾಜ ವಯಸ್ಸಾದರೆ ಮಕ್ಕಳಾಗಲ ಎಂದು ಒತ್ತಡ ಹೇರುತ್ತಿದೆ ಎಂದು ಮಾನಸಾ ಮನೋಹರ್‌ ಹೇಳಿದ್ದಾರೆ.

ಡಯೆಟ್‌, ವರ್ಕೌಟ್‌ ಅಗತ್ಯ

ಜೀವನಶೈಲಿ, ಒತ್ತಡ ಎಂದು 27, 28 ಆದರೂ ಕೂಡ ಸುಲಭವಾಗಿ ಮಗು ಮಾಡಿಕೊಳ್ಳೋಕೆ ಆಗ್ತಿಲ್ಲ. ನಾನು ಪ್ರೀತಿಂ ಅವರನ್ನು ಮದುವೆಯಾದ್ಮೇಲೆ ಫಿಟ್‌ನೆಸ್‌ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದೆವು. ಮಗು ಮಾಡಿಕೊಳ್ಳೋ ಮೂರು-ನಾಲ್ಕು ತಿಂಗಳ ಮುಂಚೆ ನಾನು, ಪ್ರೀತಂ ಡಯೆಟ್‌, ವರ್ಕೌಟ್‌ ಎಲ್ಲವೂ ಮಾಡಿದೆವು ಎಂದು ಮಾನಸಾ ಮನೋಹರ್‌ ಹೇಳಿದ್ದಾರೆ.

ಮೊದಲ ಮದುವೆ ಯಾಕೆ ಮುರಿದು ಬಿತ್ತು?

ಮದುವೆ ಆಗಿ ಆರು ತಿಂಗಳು ಕಳೆದ ಬಳಿಕ ನಾನು, ಪ್ರೀತಂ ಮದುವೆ ಆಗಲು ರೆಡಿ ಆದೆವು. ಏನೂ ಸತ್ವ ಉಳಿದುಕೊಳ್ಳದಿದ್ದಾಗ, ಯಾರೂ ಏನೂ ಎಂಜಾಯ್‌ ಮಾಡುತ್ತಿರಲಿಲ್ಲ ಎಂದಾಗ ಆ ಮದುವೆ ಮುರಿದುಕೊಳ್ಳುತ್ತಿರುತ್ತದೆ. ಫಿಸಿಕಲೀ, ಮೆಂಟಲೀ, ಎಮೋಶನಲಿ ಆಗಿರಬಹುದು. ಇನ್ನೊಬ್ಬ ವ್ಯಕ್ತಿಯನ್ನು ಮದುವೆ ಆಗುವಾಗ ಹೆಣ್ಣು ಮಕ್ಕಳಿಗೆ ಏನೇನೋ ಯೋಚನೆ ಇರುತ್ತದೆ. ನನ್ನ ಅದೃಷ್ಟವೋ, ಪ್ರಾರ್ಥನೆಯೋ ಏನೋ ನನ್ನ, ಪ್ರೀತಂ ಯೋಚನೆಗಳು 99% ಮ್ಯಾಚ್‌ ಆಗುತ್ತವೆ. ಆಗ ಭಯ ಇಲ್ಲದೆ, ಆತ್ಮವಿಶ್ವಾಸ ಬರುತ್ತದೆ ಎಂದು ಮಾನಸಾ ಮನೋಹರ್‌ ಹೇಳಿದ್ದಾರೆ.

ಬೇಗ ಮಗು ಮಾಡಿಕೊಳ್ಳೋ ಯೋಚನೆ

ಭಯ ಇಲ್ಲದಿದ್ದಾಗ, ಎಲ್ಲವೂ ಆರಾಮಾಗಿ ನಡೆಯುತ್ತದೆ. ಬೇರೆಯವರನ್ನು ಮದುವೆಯಾದರೆ ಇನ್ನೂ ಟೈಮ್‌ ತಗೊಂಡು ಮಗು ಮಾಡಿಕೊಳ್ಳುವ ಆಲೋಚನೆ ಮಾಡುತ್ತಿದ್ದೆನೋ ಏನೋ! ಆದರೆ ಪ್ರೀತಂ ಮದುವೆ ಆಗಿದ್ದಕ್ಕೆ ಜಾಸ್ತಿ ಯೋಚನೆ ಮಾಡುವ ಪರಿಸ್ಥಿತಿ ಬಂದಿರಲಿಲ್ಲ, ಕುಟುಂಬ ಮುಂದುವರೆಸುವ ಯೋಜನೆ ಮಾಡಿದೆವು ಎಂದು ಮಾನಸಾ ಮನೋಹರ್‌ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *