ನವದೆಹಲಿ, ಮಾರ್ಚ್ 05: ಕಳೆದ 25 ವರ್ಷಗಳಿಂದ ಒಂದು ದಿನವೂ ರಜೆ ಪಡೆಯದೆ ದೇಶದ ಸೇವೆಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿರುವ ಪ್ರಧಾನಿ ಮೋದಿಯವರನ್ನು ವಿಶಿಷ್ಟ ನಾಯಕ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಬಣ್ಣಿಸಿದ್ದಾರೆ. ಭಾರತಕ್ಕೆ ಭೇಟಿ ನೀಡಿದ ಬಳಿಕ ನೀಡಿದ ಸಂದರ್ಶನದಲ್ಲಿ ಕಾರ್ನಿ ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ್ದಾರೆ. ಪ್ರಧಾನಿ ಮೋದಿ ವಾರಾಂತ್ಯದ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ, ರ್ಯಾಲಿಗಳನ್ನು ನಡೆಸುತ್ತಾರೆ. ದಣಿಯುವುದಿಲ್ಲ, ರಜೆಯನ್ನೂ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.
ಕಾರ್ನಿ ಅವರ ಪ್ರಕಾರ, ಇಬ್ಬರು ನಾಯಕರ ನಡುವಿನ ಚರ್ಚೆಗಳು ಆರ್ಥಿಕ ಮತ್ತು ಕಾರ್ಯತಂತ್ರದ ಕ್ಷೇತ್ರಕ್ಕೆ ಸಹಕಾರದ ಮೇಲೆ ಕೇಂದ್ರೀಕೃತವಾಗಿದೆ. ಕಾರ್ನಿ ಈ ವಾರದ ಆರಂಭದಲ್ಲಿ ದೆಹಲಿ ಮತ್ತು ಮುಂಬೈಗೆ ಪ್ರಯಾಣ ಬೆಳೆಸಿದರು, ಅಲ್ಲಿ ಅವರು ಪ್ರಧಾನಿ ಮೋದಿಯವರೊಂದಿಗೆ ಸಂವಾದ ಮತ್ತು ಸಹಕಾರ ಕ್ಷೇತ್ರಗಳ ಕುರಿತು ಚರ್ಚಿಸಿದರು. ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿರುವ ದೊಡ್ಡ ವ್ಯಕ್ತಿ ಎಂದು ಉಲ್ಲೇಖಿಸಲಾಗಿದೆ.
ಭಾರತ ಮತ್ತು ಕೆನಡಾ ನಡುವೆ 10 ವರ್ಷಗಳ ಯುರೇನಿಯಂ ಪೂರೈಕೆ ಒಪ್ಪಂದವನ್ನು ಮಾಡಿಕೊಳ್ಳುವುದು ಪ್ರಧಾನಿ ಕಾರ್ನಿ ಅವರ ಭೇಟಿಯ ಪ್ರಾಥಮಿಕ ಉದ್ದೇಶವಾಗಿದೆ. ಈ ಒಪ್ಪಂದವು ಸುಮಾರು 3 ಬಿಲಿಯನ್ ಡಾಲರ್ ಮೌಲ್ಯದ್ದಾಗಿರಬಹುದು ಎಂದು ವರದಿಯಾಗಿದೆ.
ವಿಶ್ವ ನಾಯಕರೆಲ್ಲರೂ ಪ್ರಧಾನಿ ಮೋದಿಯನ್ನು ಹೊಗಳಿದರೆ, ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾತ್ರ ಮೋದಿ ಸರ್ವಾಧಿಕಾರಿ ರೀತಿ ವರ್ತಿಸುತ್ತಾರೆ ಎನ್ನುತ್ತಾ ಡಾ. ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಶೃಂಗಸಭೆ ವೇಳೆ ವಿಶ್ವದ ನಾಯಕರೆದುರು ಕಾಂಗ್ರೆಸ್ ನಾಯಕರು ಶರ್ಟ್ ತೆಗೆದು ಪ್ರತಿಭಟನೆ ನಡೆಸಿದ್ದರು. ಇದು ದೇಶಕ್ಕೆ ತೀವ್ರ ಮುಜುಗರವನ್ನುಂಟು ಮಾಡಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ